ಸೆಪ್ಟೆಂಬರ್ ನಲ್ಲಿ ನಡೆಯುವ 83 ನೇ ವೆನಿಸ್ ಸಿನಿಮೋತ್ಸವದಲ್ಲಿ ಈ ಬಾರಿ ಮತ್ತೊಮ್ಮೆ ಏಷ್ಯಾದ ಸಿನಿಮಾಗಳು ಹೊಸ ನಿರೀಕ್ಷೆಯನ್ನು ಹುಟ್ಟಿಸಿವೆ.
ಜಪಾನ್, ಇರಾನ್, ರಷ್ಯಾ, ದಕ್ಷಿಣ ಕೊರಿಯಾ, ಈಜಿಪ್ಟ್ ದೇಶಗಳ ಸಿನಿಮಾಗಳು ಪಟ್ಟಿಯಲ್ಲಿವೆ. ಸೆಪ್ಟೆಂಬರ್ 2 ರಿಂದ 12 ರವರೆಗೆ ಚಿತ್ರೋತ್ಸವ ನಡೆಯಲಿದೆ.

ಡ್ಯಾನಿ ಬೋಯ್ಲೆಯವರ ಇಂಕ್, ಕ್ಯಾಸೆ ಅಫ್ಲೆಕ್ ಅವರ ಕಂಪನಿ, ಅಲಿ ಆಸ್ಗರಿಯವರ ಎ ಬಿಟ್ ಆಫ್ ಲೈಟ್, ಮಾರ್ಕೋ ಬೆಸಿಸ್ ರ ರಿಟೊರ್ನೊ ಅ ಬ್ಯೂನಸ್ ಏರೀಸ್, ಸ್ಟೀಫನ್ ಬ್ರಿಝ್ ನವರ ಎ ಗುಡ್ ಲಿಟ್ಲ್ ಸೋಲ್ಜರ್, ಎಡೊರ್ಡೊ ಡಿ ಎಂಜಲೀಸ್ ನವರ ಸೆಕೆಂಡ್ ಫುಚೊ ಚೆ ತಿ ಪೊರ್ಟಿ ಡೆಂಟ್ರೊ, ಮೆ ಇಲ್ ಟೌಖಿಯವರ ವುಮೆನ್ ಅನ್ ನೋನ್, ವೆರ್ನರ್ ಹೆರ್ಜೊಗ್ ರ ಬಕಿಂಗ್ ಫಾಸ್ಟಾರ್ಡ್, ಸೆಡ್ರಿಕ್ ಕಹ್ನ್ ಅವರ ಎ ಪ್ಲೇಸ್ ಟು ಹೀಲ್, ಇಲ್ಯ ಕ್ರಜನೊವಸ್ಕಿಯವರ ದಾವೊ, ಹಿರೊಕಾಜು ಕೊರೆ ಇದಾ ಅವರ ಲುಕ್ ಬ್ಯಾಕ್, ಲಿಓ ಚಾಂಗ್ ಡಾಂಗ್ ಅವರ ಪಾಸಿಬಲ್ ಲವ್, ಮಾರ್ಟಿನ್ ಮೆಕ್ಡೊನಾ ಅವರ ವೈಲ್ಡ್ ಹಾರ್ಸ್ ನೈನ್, ನಾನಿ ಮೊರೆಟ್ಟಿಯವರ ಇಟ್ ವಿಲ್ ಹ್ಯಾಪೆನ್ ಟುನೈಟ್, ಲಾನ್ಸೆ ಒಪ್ಪೆಂಹೆಮ್ ಅವರ ಪ್ರೈಮ್ ಟೈಮ್, ಅಂಡ್ರಿಯಾ ಪಲ್ಲೊರಾ ಅವರ ದಿ ಎಕೋ ಚೇಂಬರ್, ಫ್ಲೋರಿಯನ್ ಝೆಲ್ಲರ್ ಅವರ ಬಂಕರ್, ಟಿಬಿಡಿಯವರ ಉನ್ ಪೆಯು ಅವಂತ್ ಮಿನುಟ್, ಶಿನಾ ಸುಕಮೊಟೊ ರ ಮಿ.ನೆಲ್ಸನ್, ಡಿಡ್ ಯು ಕಿಲ್ ಪೀಪಲ್ ಹಾಗೂ ಅಮೊಸ್ ಗಿತಾಯ್ ಅವರ ದಿ ರೋಡ್ ಟು ಜೆರಿಚೊ ಸಿನಿಮಾಗಳು ಸ್ಪರ್ಧಿಸಿವೆ.
ಇದು ಸಿನಿಮೋತ್ಸವ 83 ನೇ ಎಡಿಷನ್. ಗೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ ತನ್ನ ಸ್ಪರ್ಧೆಯ ಸಿನಿಮಾಗಳೂ ಸೇರಿದಂತೆ ಎಲ್ಲದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಪರ್ಧೆಯಲ್ಲದೇ ಔಟ್ ಆಫ್ ಕಾಂಪಿಟೇಷನ್ ವಿಭಾಗದಡಿ ಒಂದಿಷ್ಟು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕಿರುಚಿತ್ರ, ವೆನಿಸ್ ಕ್ಲಾಸಿಕ್ಸ್ ಮತ್ತಿತರ ವಿಭಾಗದಡಿ ಮತ್ತಷ್ಟು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಭಾರತೀಯ ಚಿತ್ರಗಳು
ಅನುಪರ್ಣ ರಾಯ್ ಅವರ ದಿ ಲವರ್ಸ್ ಇನ್ ದಿ ಬ್ಲ್ಯೂ ನೈಟ್ ಒರಿಜೊಂಟೆ ವಿಭಾಗದಲ್ಲಿ ಪ್ರಶಸ್ತಿಗೆ ಸೆಣಸಲಿದೆ. ಇಂಟರ್ ನ್ಯಾಷನಲ್ ಕ್ರಿಟಿಕ್ಸ್ ವೀಕ್ ವಿಭಾಗದಲ್ಲಿ ಶಾಲಿನಿ ಅದ್ನಾನಿಯವರ ಅವರ್ ಶೇರ್ ಆಫ್ ಸ್ಯಾಂಡ್, ವೆನಿಸ್ ಕ್ಲಾಸಿಕ್ ನಡಿ 1994 ರಲ್ಲಿ ರೂಪಿತವಾದ ದೇವ್ ಬೆನಗಲ್ ನಿರ್ದೇಶನದ ಇಂಗ್ಲಿಷ್, ಆಗಸ್ಟ್ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.




