Friday, April 4, 2025
spot_img
More

    Latest Posts

    Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

    ಪತ್ರಕರ್ತರು ಸಿನಿಮಾ ರಂಗಕ್ಕೆ ಬರುವುದು ಹೊಸದೇನಲ್ಲ. ನಿರ್ದೇಶಕರ ಟೊಪ್ಪಿಯನ್ನು ಏರಿಸಿಕೊಂಡಿದ್ದಲ್ಲದೇ ಸಿನಿಮಾದ ವಿವಿಧ ರಂಗಗಳಲ್ಲಿ ಪತ್ರಕರ್ತರು ದುಡಿದಿದ್ದಾರೆ. ನಿರ್ದೆಶನದಿಂದ ಸಂಗೀತ ನಿರ್ದೇಶನದವರೆಗೆ ಹಲವಾರು ಪತ್ರಕರ್ತರು ಸಿನಿಮಾ ರಂಗದ ಮೋಹದಿಂದ ಅತ್ತ ವಾಲಿದವರಿದ್ದಾರೆ. ಹಾಗೆ ನೋಡುವುದಾದರೆ ಪತ್ರಕರ್ತೆಯರು (ಕರ್ನಾಟಕದಲ್ಲಿ) ಸಿನಿಮಾರಂಗದ ಮೋಹಕ್ಕೆ ಒಳಗಾಗಿದ್ದು ಕಡಿಮೆ.

    ಈಗ ಅ ಸಾಲಿನಲ್ಲಿ ನಿಂತವರು ಪರ್ತಕರ್ತೆ ಸುನಯನಾ ಸುರೇಶ್.‌  ಸುನಯನಾ ಅವರು ಟೈಮ್ಸ್ ಆಫ್ ಇಂಡಿಯಾ, ಡಿಎನ್‌ಎ, ಡೆಕ್ಕನ್ ಕ್ರಾನಿಕಲ್, ಮಿಡ್ ಡೇ ನಂತಹ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿದ್ದವರು.  ಸುನಯನಾ ಅವರಿಗೆ ಸಿನಿಮಾ ರಂಗ ಹೊಸತಲ್ಲ. ನಿರ್ಮಾಪಕಿಯಾಗಿ, ಚಿತ್ರಕಥೆ ಇತ್ಯಾದಿ ಕಾರ್ಯಗಳಲ್ಲಿ ತೊಡಗಿದ್ದವರೇ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದವರು. ಇದಲ್ಲದೇ ಕೆಲವು ಚಿತ್ರಗಳಿಗೆ ಸ್ಕ್ರಿಪ್ಟ್‌, ಕಾಸ್ಟಿಂಗ್‌ ಡೈರೆಕ್ಟರ್‌ ಅಗಿ ಕೆಲಸ ಮಾಡಿದವರು. ಮೌನರಾಗ-ಬರಹಗಾರರಾಗಿ, ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗುತ್ತಿರುವ ಚಿತ್ರ.

    FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

    ಸುನಯನಾ ಅವರಿಗೆ ಈ ಸಿನಿಮಾ ಮಾಧ್ಯಮದ ಮೇಲೆ ಮೋಹ ಆರಂಭವಾಗಿದ್ದು ರ ದಶಕದಲ್ಲಂತೆ. ಆಗ ಭಾರತದೆಲ್ಲಿ ಆರಂಭವಾದ ಸ್ವತಂತ್ರ ಸಿನಿಮಾಗಳ ಅಲೆಯೂ ಇವರನ್ನೂ ಪರವಶಗೊಳಿಸಿತು. ಹೆಸರಾಂತ ನಿರ್ದೇಶಕ ನಾಗೇಶ್‌ ಕುಕನೂರರಂಥ ಸಿನಿಮಾಗಳು ಅದರ ಕುರಿತಾದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತಂತೆ. ಬಳಿಕ ಪತ್ರಕರ್ತೆಯಾಗಿ ಸಿನಿಮಾ ವಿಮರ್ಶಕಿಯಾಗಿ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡು ಸಾಕಷ್ಟು ಅನುಭವ ಗಿಟ್ಟಿಸಿಕೊಂಡಿದ್ದಾರಂತೆ.

    Karlovy Vary IFF : ಜೂನ್‌ 28-ಜುಲೈ 6 ರವರೆಗೆ ಮತ್ತೊಂದು ಸಿನಿಮೋತ್ಸವ

    ಇಷ್ಟೆಲ್ಲ ಹಿನ್ನೆಲೆ ಇಟ್ಟುಕೊಂಡು ಈಗ ಕಿರುಚಿತ್ರದ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಮೌನರಾಗ ಕಿರುಚಿತ್ರಕ್ಕೆ ಶ್ರುತಿ ಹರಿಹರನ್‌ ನಾಯಕಿ. ಅಗ್ನಿವ್, ಸಂಯುಕ್ತಾ ಹೊರನಾಡು, ಸೂರಜ್ ಗೌಡ, ರಾಜಶ್ರೀ ಪೊನ್ನಪ್ಪ, ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್ ಮತ್ತಿತರರು ತಾರಾಗಣದಲ್ಲಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಾಹಕರು. ಬಾದಲ್‌ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ. ಆಲ್ ಓಕೆ ಅವರ ಸಂಗೀತ ಸಂಯೋಜನೆ.  ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿ ಕೊಂಡು ಹೋಗಲಿ.

    Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

    Latest Posts

    spot_imgspot_img

    Don't Miss