cannes 2024

Cannes Palme d’or movies : ಪಾಮ್‌ ದೋರ್ ಪ್ರಶಸ್ತಿ ಪಡೆದ ಈ ಐದು ಚಿತ್ರಗಳನ್ನು ತಪ್ಪದೇ ವೀಕ್ಷಿಸಿ

ಕಾನ್ಸ್‌ ಚಿತ್ರೋತ್ಸವದ ಮೇಳ ಮೊನ್ನೆಗೆ ಮುಗಿಯಿತು. ಅಮೆರಿಕದ ಅನೋರಾ ಚಿತ್ರಕ್ಕೆ ಪಾಮ್‌ ದೋರ್  ಪ್ರಶಸ್ತಿ ಸಂದಾಯವಾದರೂ ಈ ಬಾರಿ ಭಾರತದ ಬೆಳೆಯೇನೂ ಕಡಿಮೆ ಇರಲಿಲ್ಲ. ಗ್ರಾಂಡ್‌ ಪ್ರಿಕ್ಸ್‌ ಪ್ರಶಸ್ತಿಯನ್ನು ಪಾಯಲ್‌ ಕಪಾಡಿಯ ಅವರ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಸಿನಿಮಾ ಪಡೆದುಕೊಂಡಿತು. ಇದು ದಾಖಲೆ. ಇದುವರೆಗೂ ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ಗಳಿಸಿರಲಿಲ್ಲ. ಅನ್‌ ಸರ್ಟೇನ್‌ ರಿಗಾರ್ಡ್‌ ವಿಭಾಗದಲ್ಲಿ ದಿ ಶೇಮ್‌ ಲೆಸ್‌ ಚಿತ್ರದ ನಟನೆಗಾಗಿ ಅನಸೂಯ ಗುಪ್ತಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಇದೂ ದಾಖಲೆ. ಇದುವರೆಗೆ ಕಾನ್ಸ್‌ ನಲ್ಲಿ ನಟನೆಗೆ ಪ್ರಶಸ್ತಿಯನ್ನು ಭಾರತೀಯ ಕಲಾವಿದರು ಪಡೆದಿರಲಿಲ್ಲ. ಇಲ್ಲಿಗೆ ಮುಗಿಯಲಿಲ್ಲ ದಾಖಲೆಯ ಕಥೆ. ಲಾ ಸಿನೆಫ್‌ ವಿಭಾಗದಲ್ಲಿ ಮೈಸೂರಿನ ಚಿದಾನಂದ ಎಸ್‌ ನಾಯಕ್‌ ಅವರ ಕಿರುಚಿತ್ರ ಸನ್‌ ಫ್ಲವರ್ಸ್‌ ವರ್‌ ದಿ ಫರ್ಸ್ಟ್‌ ಟು ನೋ ಚಿತ್ರವು ಪ್ರಥಮ ಪ್ರಶಸ್ತಿ ಪಡೆಯಿತು. ಇದರೊಂದಿಗೆ ಭಾರತ ಮೂಲದ ಲಂಡನ್‌ ನಲ್ಲಿ ಕಲಿಯುತ್ತಿರುವ ಮಾನ್ಸಿ ಮಹೇಶ್ವರಿಯವರ ಬನ್ನಿಹುಡ್‌ ಸಿನಿಮಾ ಇದೇ ವಿಭಾಗದಲ್ಲಿ ತೃತೀಯ ಪುರಸ್ಕಾರ ಪಡೆಯಿತು. ಹಾಗಾಗಿ ಈ ಬಾರಿ ಭಾರತೀಯ ಸಿನಿಮಾ ಪ್ರತಿಭೆಗಳು ಕಾನ್ಸ್‌ ಆಕಾಶದಲ್ಲಿ ಬರೀ ಮಿನುಗಲಿಲ್ಲ, ಕೋರೈಸಿದವು. ಕಾನ್ಸ್‌ ಚಿತ್ರೋತ್ಸವದಲ್ಲಿ ಬಹಳ ಮುಖ್ಯವಾದ ಪ್ರಶಸ್ತಿಯೆಂದರೆ ಪಾಮ್‌ ದೋರ್.‌ ಸಮಗ್ರ ರೀತಿಯಲ್ಲಿ ಅತ್ಯುತ್ತಮ ಎನಿಸುವ ಚಿತ್ರಕ್ಕೆ ನೀಡುವ ಪ್ರಶಸ್ತಿ. ಇತ್ತೀಚಿನ ಐದು ವರ್ಷಗಳಲ್ಲಿ ಬಂದಿರುವ ಐದು ಪಾಮ್‌ ದೋರ್ ಪ್ರಶಸ್ತಿ ಪಡೆದ ಚಿತ್ರಗಳ ಬಗ್ಗೆ ಸಣ್ಣದೊಂದು ವಿವರ ಇಲ್ಲಿದೆ. ಓದಿ, ಸಿನಿಮಾವನ್ನೂ ವೀಕ್ಷಿಸಿ

Cannes 2024: ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ-ಪಾಯಲ್‌ ಕಪಾಡಿಯ

“ನನ್ನ ಸಿನಿಮಾ ಸಂಬಂಧಗಳ ಕುರಿತೇ ಹೇಳುವಂಥದ್ದು. ಈ ಸಂಬಂಧ ಹೊಸ ಜಗತ್ತಿನದ್ದು. ಸ್ನೇಹ ಅಥವಾ ಗೆಳೆತನ ಎನ್ನುವುದರ ವೈಶಿಷ್ಟ್ಯವನ್ನು ಹೇಳುವ ಪ್ರಯತ್ನ ನಡೆಸಿದ್ದೇನೆ. ನನ್ನ ಇಡೀ ಸಿನಿಮಾ ಅದನ್ನೇ ಮತ್ತೆ ಮತ್ತೆ ಹೇಳುವಂತೆ...
spot_imgspot_img
Film Festivals
cinemaye.com

ಕಾನ್‌ ಚಲನಚಿತ್ರೋತ್ಸವ 2024 : ಈ ಬಾರಿ ಕನ್ನಡಿಗರದ್ದೇ ಹವಾ

ಕಾನ್‌ ಚಿತ್ರೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. 2024 ರ ಕಾನ್‌ ಉತ್ಸವದಲ್ಲಿ ಬಹಳ ವಿಶೇಷ ಎಂಬಂತೆ ಭಾರತೀಯ ಹಾಗೂ ಭಾರತೀಯರ ಒಟ್ಟು ಏಳು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಮಾರ್ಚ್‌ 14 ರಿಂದ 25 ರವರೆಗೆ ಫ್ರಾನ್ಸ್‌...
cinemaye.com

ಕಾನ್‌ : ಸಿನೆ ಛಾಯಾಗ್ರಾಹಕ ಸಂತೋಷ್‌ ಶಿವಮ್‌ ಗೆ ಕಾನ್‌ ನಲ್ಲಿ ಗೌರವ

ಕಾನ್‌ : ಪ್ರಸಿದ್ಧ ಸಿನೆ ಛಾಯಾಗ್ರಾಹಕ ಸಂತೋಷ್‌ ಶಿವನ್ ಮುಂಬರುವ ಕಾನ್‌ ಚಿತ್ರೋತ್ಸವದಲ್ಲಿ ಪಿಯೆರ್‌ ಆಂಜಿನಿಕ್ಸ್‌ ಪುರಸ್ಕಾರ ಗೌರವಕ್ಕೆ ಪಾತ್ರರಾಗಲಿದ್ದಾರೆ. ಕಾನ್‌ ಚಿತ್ರೋತ್ಸವದಲ್ಲಿ 2013 ರಿಂದ ಜಗತ್ತಿನ ಅತ್ಯಂತ ಮಹತ್ವದ ಸಿನೆ ಛಾಯಾಗ್ರಾಹಕರಿಗೆ ಪ್ರತಿ...
cinemaye.com

77 ನೇ ಕಾನ್‌ ಚಿತ್ರೋತ್ಸವಕ್ಕೆ ಭರದ ಸಿದ್ಧತೆ

ಕಾನ್‌ ಚಿತ್ರೋತ್ಸವಕ್ಕೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಮೇ 14 ರಿಂದ 25 ರವರೆಗೆ ಫ್ರಾನ್ಸ್‌ ನ ಕಾನ್‌ ನಲ್ಲಿ ನಡೆಯುವ ಚಿತ್ರೋತ್ಸವದ 77 ನೇ ಆವೃತ್ತಿಯಲ್ಲಿ ಹಲವು ಅಚ್ಚರಿಗಳು ಕಾದಂತೆ ತೋರುತ್ತಿದೆ. ಈಗಾಗಲೇ ಸ್ಪರ್ಧಾ ಚಿತ್ರಗಳ...