ಸಂತೋಷದ ಸಂಗತಿ. ಕನ್ನಡ ಚಿತ್ರರಂಗ ಎಂದರೆ ಬರೀ ಲಾಂಗುಗಳ ಲೋಕ ಎನ್ನುವಂತಾಗಿರುವಂಥ ಸಂದರ್ಭದಲ್ಲಿ ಯಾರೋ ಒಬ್ಬರು ಕ್ರಾಂತಿಕಾರಿ ಸಿನಿಮಾ ಮಾಡಿದ್ದಾರಂತೆ.
ಈ ಲಾಂಗುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಕೋಗಿಲೆ ವಸಂತಗಾನ ಹಾಡುತ್ತವೆ. ಆದರೆ ಲಾಂಗುಗಳ ಝಳಪಿಸುವಿಕೆಯ ಸದ್ದಿನಡಿ ಅವುಗಳ ಕುಹೂ ಕುಹೂ ಅಡಗಿಯೇ ಹೋಗುತ್ತದೆ. ಹಾಗೆಯೇ ಆಗಿದೆ ಪರಿಸ್ಥಿತಿ.
ವರುಣ್ ಗಂಗಾಧರ್ ಈ ಸ್ವರಾಜ್ಯ 1942 ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅವರ ಪ್ರಕಾರ ಪಠ್ಯದಲ್ಲಿರುವ ಹುತಾತ್ಮ ಬಾಲಕನೊಬ್ಬನ ಕಥೆಯಂತೆ.
MAMI: ಮಾಮಿ ವೇದಿಕೆ ಸಜ್ಜು; ಅಕ್ಟೋಬರ್ 19-24 ದಕ್ಷಿಣ ಏಷ್ಯಾದ ಪ್ರಮುಖ ಸಿನಿಮೋತ್ಸವ
ವರುಣ್ ಗಂಗಾಧರ್ ಈ ಹಿಂದೆ ಹತ್ಯೆ ಸಿನಿಮಾ ಮಾಡಿದ್ದರು. ಹುಬ್ಬಳ್ಳಿಯ ಹುಡುಗನೊಬ್ಬ ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನ ಕಥೆಯಂತೆ ಈ ಸಿನಿಮಾ. ಬಾಲಕನೊಬ್ಬ ಸ್ವಾತಂತ್ರ್ಯದ ಕಿಚ್ಚನ್ನು ಹಿಡಿದು ಸಾಗಿದ ಧೀರೋದಾತ್ತನೊಬ್ಬನ ಕಥೆಯಂತೆ. ಶಾಲಾ ಮಕ್ಕಳಿಗೂ ಈ ಚಿತ್ರವನ್ನು ತೋರಿಸಬೇಕೆಂಬ ಆಸೆ ಅವರದ್ದು.
ಚಳವಳಿಯಲ್ಲಿ ಆತ ಭಾಗವಹಿಸಿದಾಗ ಬ್ರಿಟಿಷರ ಗುಂಡೇಟಿಗೆ ಬಲಿಯಾಗುತ್ತಾನೆ. ಚರಿತ್ರೆಯ ಅಧ್ಯಾಯವಿದು. ಒಂದಿಷ್ಟು ಶೋಧ ನಡೆಸಿ, ಅವರ ಕುಟುಂಬಸ್ಥರನ್ನು ಹುಡುಕಿ ಮಾಹಿತಿ ಪಡೆದು, ಒಪ್ಪಿಗೆ ಪಡೆದು ಚಿತ್ರ ಮಾಡಿದ್ದಾರಂತೆ ನಿರ್ದೇಶಕರು. ವಿಶೇಷವೆಂದರೆ ಈ ಬಾಲಕನ ಪಾತ್ರದಲ್ಲಿ ವರುಣ್ ಗಂಗಾಧರ್ ಅವರ ಮಗ ಅಭಿನಯಿಸಿದ್ದಾನೆ. ಇತ್ತೀಚೆಗೆ ಇದರ ಟೀಸರ್ ಸಹ ಬಿಡುಗಡೆಯಾಯಿತು.
IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ
ತಾರಾಗಣದಲ್ಲಿ ವರುಣ್ ಜಿ, ಯಶ್ ರಾಜ್ ಕಾರಜೋಳ್, ಓಂ ಕಾರಜೋಳ್, ಆದ್ಯ ಕಾರಜೋಳ್, ವೀಣಾ ಸುಂದರ್, ನಾಗೇಶ್ ಮಯ್ಯ, ಮೂಗು ಸುರೇಶ್, ಸಚಿನ್ ಪುರೋಹಿತ್, ಜಾನಿ ಮತ್ತಿತರಿದ್ದಾರೆ. ಸಂಗೀತ ನಿರ್ದೇಶನ ಅಲೆನ್ ಕ್ರಾಸ್ಟಾರದ್ದು, ಛಾಯಾಗ್ರಹಣ ಸೂರ್ಯಕಾಂತ್ ರದ್ದು.
ಈ ಸಿನಿಮಾ ರೂಪುಗೊಳ್ಳುತ್ತಿರುವುದು ವಿವೈ ಸಿನಿಮಾಸ್. ನಿರ್ಮಾಪಕರು ಡಾ. ಪುಷ್ಪಾವತಿ ಹಾಗೂ ಎ ಕಾರಜೋಳ ಶಕುಂತಲಾ ಅವರು.
Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಈಗಾಗಲೇ ಚಿತ್ರೀಕರಣ ಮುಗಿಸಿ ಸಂಸ್ಕರಣ ಕೆಲಸ ನಡೆಯುತ್ತಿದೆ. ಶೀಘ್ರವೇ ತೆರೆಯ ಮೇಲೆ ಬರಲಿದೆಯಂತೆ. ಆಗಸ್ಟ್ ಮುಗಿಯಿತು, ಅಕ್ಟೋಬರ್ ಸಹ ಮುಗಿಯಿತು. ಇನ್ನೇನಿದ್ದರೂ ಜನವರಿ-ಗಣರಾಜ್ಯೋತ್ಸವ. ಹೀಗಾದ್ರೂ ಒಂದು ಚಿತ್ರ ಬಿಡುಗಡೆಗೆ ಸಂದರ್ಭ ಬೇಕಿಲ್ಲ.
ಸಿನಿಮಾ ಚೆನ್ನಾಗಿದ್ದರೆ ಯಾವಾಗ ಬಿಡುಗಡೆಯಾದರೂ ಗೆಲ್ಲುತ್ತದೆ. ಲಾಂಗುಗಳ ಭ್ರಾಂತಿ ಮಧ್ಯೆ ಕ್ರಾಂತಿ ಗೀತೆ ಕೇಳಿಸುವುದೋ ಕಾದು ನೋಡೋಣ.