Wednesday, February 5, 2025
spot_img
More

    Latest Posts

    Sandalwood :ಹೊಸ ವರ್ಷ ಮತ್ತಷ್ಟು ಚಿತ್ರ ಬಂದರೆ ಸಾಕೇ? ಒಂದೆರಡಾದರೂ ದಾಖಲೆ ಬೇಡವೇ?

    ನಿನ್ನೆ ಮುಗಿದ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳು ರೂಪಿತವಾಗಿದ್ದವು. ಇವುಗಳಲ್ಲಿ ಬಿಡುಗಡೆಗೊಂಡವು, ಬಿಡುಗಡೆಯ ಹಂತದವು ಹಾಗೂ ಒಟಿಟಿ ಇತ್ಯಾದಿ ವೇದಿಕೆಗಳಲ್ಲಿ ಕಂಡದ್ದೂ ಇವೆ. ಈ 200 ಕ್ಕೂ  ಹೆಚ್ಚು ಚಿತ್ರಗಳಲ್ಲಿ ಸದ್ದು ಮಾಡಿದ ಚಿತ್ರಗಳು ಬಹಳಷ್ಟಿವೆ.

    ಆದರೆ ಯಶಸ್ಸಿಗೆ ಈ ವುಡ್‌ ಗಳಲ್ಲಿರುವ ಮಾನದಂಡದ ಪ್ರಕಾರ ಬಾಕ್ಸಾಫೀಸಿನಲ್ಲಿ ಸೋಲಿಗೆ ಗುದ್ದು ಹೊಡೆದವರೆಷ್ಟು ಎಂದರೆ ಕೆಲವೇ ಮಂದಿ. ಪ್ರತಿ ವರ್ಷವೂ ಹೀಗೆಯೇ. ಈ ಬಾಕ್ಸಾಫೀಸ್‌ ಎನ್ನುವದಕ್ಕೂ ಹಲವು ವ್ಯಾಖ್ಯಾನಗಳಿವೆ. ಹಾಕಿದ ಬಂಡವಾಳದ ಲೆಕ್ಕದಲ್ಲಿ ಕಲೆಕ್ಷನ್‌ ಸಂಗ್ರಹದ ಲೆಕ್ಕವೋ, ಒಟ್ಟೂ ಸಂಗ್ರಹದ ಲೆಕ್ಕವೋ..ಸಣ್ಣ ಪುಟ್ಟ ಗೊಂದಲಗಳಿಲ್ಲದೇ ಯಾವುದೂ ಇರದು.

    2024 ರಲ್ಲಿ ಡಿಸೆಂಬರ್‌ ನ ಕೊನೆವಾರದಲ್ಲಿ ಬಂದ ನಟ ಸುದೀಪರ ಬಹುದಿನಗಳ ನಿರೀಕ್ಷೆಯ ಚಿತ್ರ ಮ್ಯಾಕ್ಸ್‌, ವಾರಾಂತ್ಯ, ವರ್ಷಾಂತ್ಯ ಎರಡರ ಲಾಭವನ್ನೂ ಕೊಳ್ಳೆ ಹೊಡೆಯಿತು. ಒಂದು ಅಂದಾಜಿನ ಪ್ರಕಾರ ಇದುವರೆಗೆ ಮ್ಯಾಕ್ಸ್‌ ಸುಮಾರು 30 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

    PIFF: ಪುಣೆ ಚಿತ್ರೋತ್ಸವ ಜನವರಿ 16 ರಿಂದ

    ಕೊನೆವಾರಕ್ಕಿಂತ ಮೊದಲ ವಾರದಲ್ಲಿ ಬಂದ ನಟ ನಿರ್ದೇಶಕ ಉಪೇಂದ್ರರ ಯುಐ ಸಹ ಗಳಿಕೆಯಲ್ಲಿ ಪರವಾಗಿಲ್ಲ. ಸುಮಾರು 29 ಕೋಟಿ ರೂ. ಗಳಿಸಿ ಮ್ಯಾಕ್ಸ್‌ ನ ಹಿಂದೆ ಇದೆ. ಇವುಗಳನ್ನು ಹೊರತುಪಡಿಸಿಯೂ ನಟ ಮುರಳಿಯವರ ಬಘೀರ 29 ಕೋಟಿ ಗಳಿಸಿದರೆ, ನಟ ಗಣೇಶರ ಕೃಷ್ಣ ಪ್ರಣಯ ಸಖಿ 25 ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿತು.

    ನಟ ಶಿವರಾಜಕುಮಾರ್‌ ಅವರ ಭೈರತಿ ರಣಗಲ್‌ ಸಹ 24 ಕೋಟಿ ರೂ. ಗಳಿಸಿ ನಿರೀಕ್ಷೆಯನ್ನು ಎತ್ತಿ ಹಿಡಿಯಿತು. ನಟ ದುನಿಯಾ ವಿಜಯ್‌ ಅವರ ಭೀಮ ಸಹ 23 ಕೋಟಿ ರೂ. ಗಳಿಸಿ ಗೆದ್ದಿತು. ಈ ಸಾಲಿನಲ್ಲಿ ಯುವ ರಾಜ್‌ ಕುಮಾರ್‌ ರ ಯುವ, ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ, ರಕ್ಷಿತ್‌ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ೫ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಚಿತ್ರಗಳು.

    Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !

    ಈ ಬಾಕ್ಸಾಫೀಸಿನ ಮಧ್ಯೆಯೂ ಶಾಖಾಹಾರಿ, ರಂಗನಾಯಕ, ಕೆರೆಬೇಟೆ, ಅವತಾರ ಪುರುಷ 2, ದಿ ಜಡ್ಜ್‌ ಮೆಂಟ್‌, ಕೋಟಿ, ಚೆಫ್‌ ಚಿದಂಬರ, ರೂಪಾಂತರ, ಲಾಫಿಂಗ್‌ ಬುದ್ಧ,ಮಾರ್ಟಿನ್‌, ಶಿವಮ್ಮ ಯರೇಹಂಚಿನಾಳ, ಲಚ್ಚಿ ಯಂಥ ಹಲವು ಸಿನಿಮಾಗಳು ಸದ್ದು ಮಾಡಿದವು.

    ನಟ ರಿಷಬ್‌ ಶೆಟ್ಟಿಯವರ ನಟನೆಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು, ಮಧ್ಯಂತರ ಚಿತ್ರಕ್ಕೆ ಪ್ರಶಸ್ತಿ ದೊರಕಿದ್ದು ಸೇರಿ ಒಂದಿಷ್ಟು ದಾಖಲೆಗಳೂ ನಿರ್ಮಾಣವಾದವು.

    ಈಗ ಇಂದು ಬಂದಿದೆ ನಿನ್ನೆ ಕಳೆದು. ಇಂದು ಎಂದರೆ 2025. ಹೊಸ ವರ್ಷ. ಮುಂದಿನ 364 ದಿನಗಳೊಳಗೆ ಮತ್ತಷ್ಟು ಚಿತ್ರಗಳು ಬರಲಿವೆ. ಈಗಾಗಲೇ ಟಾಕ್ಸಿಕ್‌ ನಿಂದ ಹಿಡಿದು ಹತ್ತಾರು ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಸಾಲಾಗಿ ನಿಂತಿವೆ. ಇವುಗಳಲ್ಲದೇ ವರ್ಷವಿಡೀ ಮತ್ತೊಂದಿಷ್ಟು ಹೂವುಗಳು ಮೂಡಲಿವೆ.

    Sun Children: ಮಕ್ಕಳ ಕನಸಿನ ಬಣ್ಣ ಬಣ್ಣಿಸಲಿಕ್ಕೆ ಈ ಇರಾನ್‌ ಸಿನಿಮಾ

    ಒಳ್ಳೆಯದಾಗಲಿ ಕನ್ನಡ ಚಿತ್ರರಂಗಕ್ಕೆ, ಹೊಸ ದಾಖಲೆಗಳು ನಿರ್ಮಾಣವಾಗಲಿ. ನಮ್ಮ ಬಗೆಗೇ, ಮನುಷ್ಯರ ಬಗೆಗೇ ಒಂದಿಷ್ಟು ಹೊಸ ಕಥೆಗಳನ್ನು ಹೆಣೆಯೋಣ, ಮಚ್ಚು, ಬಂದೂಕುಗಳ ಕಥೆಗಳು ಸಾಕು !

    Latest Posts

    spot_imgspot_img

    Don't Miss