Friday, January 31, 2025
spot_img
More

    Latest Posts

    Kannada Classics: ಮಾಗಿಯ ಕಾಲದಲ್ಲಿ ಮುಂಗಾರು ಮಳೆಯ ನೆನಪು ಹೂ ದುಂಬಿಯ ಜತೆಗೆ

    ಮುಂಗಾರು ಮಳೆಗೆ ಹದಿನೆಂಟಂತೆ. ಮಾಗಿಯ ಕಾಲದಲ್ಲಿ ಮುಂಗಾರು ಮಳೆಯ ನೆನಪು, ಹೂ ದುಂಬಿಯ ಕಥೆಯ ಜತೆಗೆ.

    ಅದಕ್ಕೇ ಅದರ ಸವಿನೆನಪಿಗೆ ಒಂದು ಗೀತೆಯೂ ಬಂದಿದೆಯಂತೆ. ಅದು ಮನದ ಕಡಲು ಎಂಬುದು.

    2006 ರ ತೂಗುಪಟದ ಕೊನೆಯ ಎರಡು ದಿನದ ಹಾಳೆ. ತೇಲಿ ಬಂದದ್ದು ಮುಂಗಾರು ಮಳೆಯ ತಂಗಾಳಿ ಮೊದಲು. ಆಮೇಲೆ ಪ್ರವಾಹದಂತೆ ಎಲ್ಲವನ್ನೂ ಆವರಿಸಿದ್ದು ಇತಿಹಾಸ.

    ಮಲ್ಟಿಫ್ಲೆಕ್ಸ್‌ ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ ಚಿತ್ರವಿದು. ಯೋಗರಾಜ ಭಟ್‌ ನಿರ್ದೇಶಿಸಿ, ನಟ ಗಣೇಶ್‌ ಹಾಗೂ ಪೂಜಾಗಾಂಧಿ ಅಭಿನಯಿಸಿದ ಚಿತ್ರ. ತೆಲುಗು, ಬಂಗಾಳಿ, ಮರಾಠಿಯಲ್ಲದೇ ಇತರೆ ಭಾಷೆಗಳಲ್ಲೂ ಈ ಸಿನಿಮಾ ಮೂಡಿ ಬಂದಿತು. ಸುಮಾರು 70 ಲಕ್ಷ ರೂ. ನಲ್ಲಿ ನಿರ್ಮಿಸಿದ ಚಿತ್ರ 70 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿತು. ಚಿತ್ರೀಕರಣ ನಡೆದದ್ದು ಕರ್ನಾಟಕದಲ್ಲೇ. ಒಟ್ಟಿನಲ್ಲಿ ಒಂದು ಒಳ್ಳೆಯ ಕಥೆ ಇದ್ದರೆ ಜನರು ಕೈ ಹಿಡಿಯತ್ತಾರೆ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು. ಇ ಕೃಷ್ಣಪ್ಪ ಇದರ ನಿರ್ಮಾಪಕರಾಗಿದ್ದರು.

    ಈಗ ಅದೇ ಜೋಡಿ ಮತ್ತೊಂದು ಸಿನಿಮಾ ಮಾಡುತ್ತಿದೆ. ಅದು ಮನದ ಕಡಲು. ಯೋಗರಾಜಭಟ್‌ ನಿರ್ದೇಶನಕ್ಕೆ ಕೃಷ್ಣಪ್ಪರ ಹೂಡಿಕೆ ಇದೆ. ಈ ಮುಂಗಾರು ಮಳೆ ಬಿಡುಗಡೆಯಾದ ದಿನವೇ ಅಂದರೆ ಡಿಸೆಂಬರ್‌ 29 ರಂದು ಹೊಸ ಚಿತ್ರ ಮನದ ಕಡಲಿನ ಒಂದು ಗೀತೆಯು ಬಿಡುಗಡೆಯಾಯಿತು. ಹೂ ದುಂಬಿಯ ಕಥೆಯ ಹಾಡಿಗೆ ಇದುವರೆಗೆ 2.1 ಮಿಲಿಯನ್‌ ನಷ್ಟು ನೋಟಗಳು ಸಿಕ್ಕಿವೆ.

    PIFF : ಪುಣೆ ಚಿತ್ರೋತ್ಸವ ಫೆಬ್ರವರಿ 13 ಕ್ಕೆ ಮುಂದೂಡಿಕೆ ; ಇಲ್ಲಿವೆ ವಿಶ್ವ ಸಿನಿಮಾಗಳ ಪಟ್ಟಿ

    ಡಿ ಬಿಟ್ಸ್‌ ಮೂಲಕ ಬಿಡುಗಡೆಯಾಗಿರುವ ಹಾಡಿಗೆ ಧ್ವನಿಯಾದವರು ಸಂಜಿತ್‌ ಹೆಗ್ಡೆ. ಮನದ ಕಡಲಿನ ಮೊದಲ ಹಾಡಿದು. ವಿ. ಹರಿಕೃಷ್ಣರ ಸಂಗೀತ ಸಂಯೋಜನೆ. ಯೋಗರಾಜಭಟ್‌ ರ ಸಾಹಿತ್ಯ.

    ಸುಮುಖ, ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಪ್ರಧಾನವಾಗಿ ಅಭಿನಯಿಸುತ್ತಿರುವ ಚಿತ್ರ. ಎಲ್ಲರೂ ಹೊಸಬರು. ಇವರೊಂದಿಗೆ ದತ್ತಣ್ಣ ಮತ್ತಿತರರು ತಾರಾಗಣದಲ್ಲಿದ್ದಾರೆ.

    ಹದಿನೆಂಟು ವರ್ಷಗಳ ಬಳಿಕ ಬರುವ ಮನದ ಕಡಲು ಮತ್ತೊಂದು ಇತಿಹಾಸ ನಿರ್ಮಿಸುತ್ತದೆಯೇ ಕಾದು ನೋಡಬೇಕಿದೆ. ಟ್ರೇಲರ್‌ ಲಿಂಕ್‌ ಇಲ್ಲಿದೆ.

    Latest Posts

    spot_imgspot_img

    Don't Miss