ಮುಂಬರುವ ಶುಕ್ರವಾರ (ಜ.10) ನಟ ಶರಣ್ ರ ಛೂ ಮಂತರ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
ಶರಣ್ ಅವರ ಅಭಿಮಾನಿಗಳು ಹಾಗೂ ಕನ್ನಡ ಚಿತ್ರ ಪ್ರೇಕ್ಷಕರು ಈ ಸಿನಿಮಾದ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶರಣ್ ಅವರ ಹಾಸ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಮಧ್ಯೆ ಮಧ್ಯೆ ಗಂಭೀರ ಸಿನಿಮಾಗಳನ್ನು ಪ್ರಯತ್ನಿಸಿದವರು. ಹಾಗಾಗಿ ಶರಣ್ ರ ಬಗ್ಗೆ ಒಂದಿಷ್ಟು ಮಂದಿ ನಿರೀಕ್ಷಕರಿದ್ದಾರೆ.
ಟ್ರೇಲರ್ ನಲ್ಲೇ ಛೂ ಮಂತರ್ ಮೋಡಿ ಮಾಡಿದೆ ಎನ್ನುವುದು ಚಿತ್ರ ತಂಡದ ಅಭಿಪ್ರಾಯ. ತರುಣ್ ಸ್ಟುಡಿಯೋಸ್‌ನಡಿ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ ಚಿತ್ರವಿದು. ನವನೀತ್ ರದ್ದು ನಿರ್ದೇಶನ. ಚಿತ್ರತಂಡದ ಪ್ರಕಾರ ವಿಭಿನ್ನವಾದ ಕಥಾವಸ್ತುವಿನ ಚಿತ್ರವಂತೆ ಇದು.
Kannada Classics: ಮಾಗಿಯ ಕಾಲದಲ್ಲಿ ಮುಂಗಾರು ಮಳೆಯ ನೆನಪು ಹೂ ದುಂಬಿಯ ಜತೆಗೆ
ಪ್ರತಿ ಚಿತ್ರತಂಡದವರೂ ನಮ್ಮದು ವಿಭಿನ್ನ ಕಂಟೆಂಟ್ ಎಂದೇ ಬರುವುದು. ಆದರೆ ಮುಖ ಬದಲಾಗಿರುತ್ತದೆ ಅಷ್ಟೇ, ಉಳಿದಿದ್ದೆಲ್ಲವೂ ಲಾಂಗ್ ಹಾಗೂ ಅದರ ಉದ್ದದವರೆಗೆ ಎಲ್ಲವೂ ಒಂದೇ ಆಗಿರುತ್ತದೆ ಎಂದು ಮೂಗು ಮುರಿಯಬೇಡಿ. ಸಾಮಾನ್ಯವಾಗಿ ಶರಣ್ ಸ್ವಲ್ಪ ಆ ಕಡೆ ಈ ಕಡೆ ಹೋಗಿ ಬರುತ್ತಾರೆ. ಅಧ್ಯಕ್ಷ ನೋಡಿದ್ದೀರಿ, ಅವತಾರ ಪುರುಷ ನೋಡಿದ್ದೀರಿ. ಹೀಗೆ. ಅದರಲ್ಲೂ ಈ ಚಿತ್ರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಬ್ಬರೂ ಇದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಜೋಡಿ.
ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುವುದು ಸಂಕ್ರಾಂತಿಗೆ. ಆ ಹೊತ್ತಿಗೆ ಹೊಸ ಸಿನಿಮಾ ಬಿಡುಗಡೆಯಾಗುವುದು ಇದ್ದೇ ಇದೆ. ಈ ಬಾರಿ ಸಂಕ್ರಾಂತಿ ಬಂದು ಬಿದ್ದಿರುವುದು ಮಂಗಳವಾರಕ್ಕೆ.
ಆಚೆಗೂ ಇಲ್ಲ, ಈಚೆಗೂ ಇಲ್ಲ. ವಾರದ ಮಧ್ಯ. ಅದಕ್ಕೇ ನಾಲ್ಕು ದಿನ ಮುಂಚಿತವಾಗಿಯೇ ಶುಕ್ರವಾರಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ ಛೂ ಮಂತರ್. ಸಂಕ್ರಾಂತಿಯ ಮೊದಲ ವೀಕೆಂಡ್ ಇದು. ಹಾಗಾಗಿ ಹಬ್ಬದ ವೀಕೆಂಡ್. ಹೆಚ್ಚಿನ ಪ್ರೇಕ್ಷಕರು ನಮ್ಮ ಚಿತ್ರ ನೋಡಲು ಬರಬಹುದು ಎಂಬುದು ಚಿತ್ರತಂಡದ ದೂರದ ಲೆಕ್ಕಾಚಾರ.
BigBoss:2025-ಈಗ ಸಿನಿಮಾಕ್ಕೆ ಮರಳಿ ಬರುವ ಸಮಯ !
ತಾರಾಗಣದಲ್ಲಿ ಶರಣ್ ಜತೆಗೆ ಉಪಾಧ್ಯಕ್ಷ ಚಿಕ್ಕಣ್ಣ ಇದ್ದಾರೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರಿದ್ದಾರೆ. ಅನುಪ್ ಕಟ್ಟುಕರನ್ ರ ಛಾಯಾಗ್ರಹಣ, ಚಂದನ್ ಶೆಟ್ಟಿ ಸಂಗೀತ, ಅವಿನಾಶ್ ಬಸುತ್ಕರ್ರ ಹಿನ್ನೆಲೆ ಸಂಗೀತವಿದೆ.
ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್: ಸಂತಸದ ಶೋಧನೆಯ ಹಾದಿ
ಟೀಸರ್, ಟ್ರೇಲರ್ ಎಲ್ಲವೂ ಚಿತ್ರದೊಳಗೇನಿದೆ ಅಥವಾ ಏನಿರಬಹುದು ಎಂಬುದರ ಬಗ್ಗೆ ಒಂದು ಸಣ್ಣಗಿನ ಕುತೂಹಲದ ಮೊಟ್ಟೆಯನ್ನು ಪ್ರೇಕ್ಷಕರ ತಲೆಯಲ್ಲಿ ಇಟ್ಟಿರಬಹುದು. ಚಿತ್ರದೊಳಗಿರುವ ಕಥೆಯಲ್ಲೇನಿದೆ ಮತ್ತು ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜ. 10 ರವರೆಗೆ ಅಂದರೆ ಎರಡು ದಿನ ಕಾಯಬೇಕು.