ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 16 ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುವ ಚಿತ್ರೋತ್ಸವ ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್, ಬನಶಂಕರಿಯ ಸುಚಿತ್ರಾ ಹಾಗೂ ಚಾಮರಾಜಪೇಟೆಯ ಡಾ. ರಾಜಕುಮಾರ್ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ.
PIFF : ಪುಣೆ ಚಿತ್ರೋತ್ಸವ ಫೆಬ್ರವರಿ 13 ಕ್ಕೆ ಮುಂದೂಡಿಕೆ ; ಇಲ್ಲಿವೆ ವಿಶ್ವ ಸಿನಿಮಾಗಳ ಪಟ್ಟಿ
ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ ಹಾಗು ಕನ್ನಡ ಸಿನಿಮಾಗಳ ಸ್ಪರ್ಧೆಗೆ ಪ್ರವೇಶಗಳನ್ನು ಆಹ್ವಾನಿಸಲಾಗಿದ್ದು. ಗುರುವಾರ (ಜ.9) ದಿಂದ ಸಿನಿಮಾ ಸ್ವೀಕಾರ ಪ್ರಾರಂಭವಾಗಿದೆ. ಸ್ಪರ್ಧೆಗೆ ತಮ್ಮ ಚಿತ್ರಗಳನ್ನು ಕಳುಹಿಸಲು ಜನವರಿ 23 ಕೊನೆಯ ದಿನಾಂಕವಾಗಿದೆ. ಆನ್ ಲೈನ್ ಮೂಲಕ ಸಿನಿಮಾಗಳನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ. ಶೀಘ್ರವೇ ಪ್ರತಿನಿಧಿಗಳ ನೋಂದಣಿಯೂ ಪ್ರಾರಂಭವಾಗಲಿದೆ.
Pinaka: ಗಣೇಶರು ಯಾವ ರುದ್ರ? ತಾಂಡವ ಶಿವನೋ, ಕೈಲಾಸವಾಸಿ ಗೌರಿಶಂಕರನೋ !
ಸ್ಪರ್ಧಾ ವಿಭಾಗಗಳಲ್ಲದೇ, ಸಮಕಾಲೀನ ವಿಶ್ವ ಸಿನಿಮಾ, ಜನಪ್ರಿಯ ಕನ್ನಡ ಸಿನಿಮಾ, ಫ್ರಿಫ್ರೆಸ್ಕಿ ಶೋಧಿಸಿದ ಸಿನಿಮಾ, ಬಯೋ ಪಿಕ್ ಗಳು, ಕನ್ನಡ ಉಪ ಭಾಷೆಯ ಸಿನಿಮಾಗಳು, ಪುನರ್ ರೂಪಿಸಿದ ಕ್ಲಾಸಿಕ್ಸ್ ಗಳು, ಸಂಸ್ಮರಣೆ ಹೀಗೆ ವಿವಿಧ ವಿಭಾಗಗಳಿರಲಿವೆ.
ಈ ವರ್ಷದ ಥೀಮ್ ಸರ್ವ ಜನಾಂಗದ ಶಾಂತಿಯ ತೋಟ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ ಮತ್ತಿತರ ವಿಷಯಗಳ ಸಿನಿಮಾಗಳು ಪ್ರದರ್ಶಿತವಾಗಲಿವೆ. ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಚಿತ್ರೋತ್ಸವವವನ್ನು ಸಂಘಟಿಸಲಾಗುತ್ತಿದೆ. ಈ ಬಾರಿಯ ಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ಅವರನ್ನು ಆಯ್ಕೆ ಮಾಡಲಾಗಿದೆ.
Rishabh: ಕಾಂತಾರದ ರಿಷಭ್ ರನ್ನು ಶಿವಾಜಿಯಾಗಿ ಕಾಣಲು ಮೂರು ವರ್ಷ ಕಾಯಬೇಕು !
ಈಗಾಗಲೇ ಸಿನಿಮಾಗಳ ಆಯ್ಕೆ ಮತ್ತಿತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಈ ಬಾರಿ ಸುಮಾರು 60 ಕ್ಕೂಹೆಚ್ಚು ದೇಶಗಳಿಂದ ಬಂದು ಆಯ್ಕೆ ಮಾಡಿದ ಸುಮಾರು 200 ಚಿತ್ರಗಳು ಪ್ರದರ್ಶಿತವಾಗಲಿವೆ. ಹದಿಮೂರು ಸ್ಕ್ರೀನ್ ಗಳನ್ನು ಚಿತ್ರೋತ್ಸವಕ್ಕಾಗಿ ಹೊಂದಿಸಲಾಗಿದೆ.