ದುನಿಯಾ ವಿಜಯರ ಭೀಮ ಯಶಸ್ಸು ಕಂಡಿರುವುದು ಕೊಂಚ ಉತ್ಸಾಹ ತುಂಬಿದೆ. ಈಗ ವಿಜಯ್ ಅವರ ಮತ್ತೊಂದು ಸಿನಿಮಾ ಮಾರುತ ತೆರೆ ಕಾಣಲು ಸಿದ್ಧವಾಗುತ್ತಿದೆ.
PIFF: ಪುಣೆ ಚಿತ್ರೋತ್ಸವ ಹಕ್ಕಿ ಗರಿ ಬಿಚ್ಚಿ ಹಾರಲಿಕ್ಕೆ ಐದೇ ದಿನ ಬಾಕಿಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ಎಸ್. ನಾರಾಯಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದುನಿಯಾ ವಿಜಯ್ ಜತೆ ಶ್ರೇಯಸ್ ಮಂಜು ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರವಿದು.
BigBoss:2025-ಈಗ ಸಿನಿಮಾಕ್ಕೆ ಮರಳಿ ಬರುವ ಸಮಯ !
ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸವನ್ನೂ ಮುಗಿಸಿರುವ ಮಾರುತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈಶ ಪ್ರೊಡಕ್ಷನ್ ನಡಿ ಕೆ. ಮಂಜು ಹಾಗೂ ರಮೇಶ್ ಯಾದವ್ ನಿರ್ಮಿಸುತ್ತಿರುವ ಚಿತ್ರ. ಇನ್ನೊಂದು ಆಕರ್ಷಣೆಯೆಂದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಇದೊಂದು ಮಾದರಿ ಯಶಸ್ವಿ ಚಿತ್ರ ನಿರ್ದೇಶಕ ಹಾಗೂ ಯಶಸ್ವಿ ನಾಯಕ ನಟ ಇಬ್ಬರೂ ಒಟ್ಟಾಗಿರುವ ಚಿತ್ರ. ಇಬ್ಬರೂ ಪ್ರತ್ಯೇಕ ಅಭಿಮಾನಿ ವೃಂದವನ್ನು ಹೊಂದಿರುವರು. ಹೆಚ್ಚಾಗಿ ಕೌಟುಂಬಿಕ ಸಂಗತಿಗಳನ್ನೇ ಕಥಾವಸ್ತುವನ್ನಾಗಿ ಮಾಡಿಕೊಂಡು ಚಿತ್ರ ರೂಪಿಸುತ್ತಿರುವ ಎಸ್. ನಾರಾಯಣ್ ಕೆಲವೊಮ್ಮೆ ಫುಲ್ ಪೈಸಾ ವಸೂಲ್ ಎಂದಾಗಿಯೂ, ಹಲವೊಮ್ಮೆ ʼಹಾಕಿದ್ದಕ್ಕೆ ನಷ್ಟವಿಲ್ಲʼ ಎಂಬ ನೆಲೆಯಲ್ಲಿ ಜನಪ್ರಿಯರಾದವರು. ದುನಿಯಾ ವಿಜಯ್ ಸಹ ತಮ್ಮದೇ ಆಭಿಮಾನಿ ವರ್ಗ ಹೊಂದಿದ್ದು, ಭೀಮ ಚಿತ್ರವನ್ನು ಗೆದ್ದದ್ದೂ ಇದೇ ಕಾರಣಕ್ಕಾಗಿ.
ತಾರಾಗಣದಲ್ಲಿ ನಾಯಕಿ ನಟಿಯಾಗಿ ಬೃಂದಾ, ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಮತ್ತಿತರರಿದ್ದಾರೆ.
PIFF: ಪುಣೆ ಚಿತ್ರೋತ್ಸವ ಹಕ್ಕಿ ಗರಿ ಬಿಚ್ಚಿ ಹಾರಲಿಕ್ಕೆ ಐದೇ ದಿನ ಬಾಕಿ
ಚಿತ್ರದ ಚಿತ್ರೀಕರಣಕ್ಕೆಂದು ಗೋವಾ ಬಿಟ್ಟರೆ ಅಮೆರಿಕವೋ ಮತ್ತೊಂದು ದೇಶಕ್ಕೆಂದು ಹೋಗಿಲ್ಲ. ಇಂಥ ಬೆಳವಣಿಗೆ ಇತ್ತೀಚೆಗೆ ಅಪರೂಪ. ಒಂದು ಹಾಡಿಗೆ, ಟ್ರೇಲರ್ ಗೂ ವಿದೇಶಕ್ಕೆ ಜಿಗಿಯುವವರು ಇದ್ದಾರೆ.
ಈ ಮಧ್ಯೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮತ್ತಿತರ ಕಡೆ ಚಿತ್ರೀಕರಣ ನಡೆಸಿದೆ. ಎಸ್. ನಾರಾಯಣ್ ಎಂದರೆ ಒಳ್ಳೆಯ ಕಥಾವಸ್ತು (ಕಂಟೆಂಟ್)ವನ್ನು ಚಿತ್ರವಾಗಿ ರೂಪಿಸುವರು. ಇದೇ ಕಾರಣಕ್ಕೆ ಪ್ರೇಕ್ಷಕರು ಸ್ವೀಕರಿಸಬಹುದು ಎಂಬ ನಂಬಿಕೆ ಇದೆ. ಛಾಯಾಗ್ರಹಣ- ಪಿ.ಕೆ.ಹೆಚ್ ದಾಸ್, ಸಂಕಲನ- ಶಿವಪ್ರಸಾದ್ ಯಾದವ್ ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನವಿದೆ.
ಇಬ್ಬರ ಕಾಂಬಿನೇಷನ್ ಏನು ಮಾಡುತ್ತದೋ ನೋಡಬೇಕು. ಮೋಡಿ ಮಾಡಿದರೆ ಇಬ್ಬರೂ ಗೆಲ್ಲುತ್ತಾರೆ. ಇಲ್ಲದಿದ್ದರೆ..ಖಂಡಿತಾ ಗೊತ್ತಿಲ್ಲ !