ಬಾಲಿವುಡ್ ನಟ ಅಕ್ಷಯ್ ಕುಮಾರ್ ರ ಸ್ಕೈ ಫೋರ್ಸ್ ಸದ್ಯಕ್ಕಂತೂ ಸದ್ದು ಮಾಡುತ್ತಿದೆ. ಸುಮಾರು 120 ಕೋಟಿ ರೂ. ಗಳಿಕೆಯೊಂದಿಗೆ ನೂರು ಕೋಟಿ ದಾಟಿದ ಅಕ್ಷಯರ ಚಿತ್ರಗಳ ಸಾಲಿಗೆ ಇದೂ ಸೇರಿದಂತಾಗಿದೆ.
ಅಕ್ಷಯ ಕುಮಾರ್ ಹಿಂದಿಯಲ್ಲಿ ಸ್ವಲ್ಪ ವಿಭಿನ್ನವಾದ ನಟ. ತನ್ನ ಹೀರೋಗಿರಿಯನ್ನೇ ಇಟ್ಟುಕೊಂಡೇ ಇತ್ತ ಕ್ಲಾಸ್ ನತ್ತಲೂ, ಅತ್ತ ಮಾಸ್ ನತ್ತಲೂ ಸಾಗುತ್ತ ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿರುವುದನ್ನು ಒಪ್ಪಿಕೊಳ್ಳಲೇಬೇಕು. ಈ ಮಾತಿಗೆ ಸಾಕ್ಷಿ ಬೇಕಾ? ಅದಕ್ಕೆ ಟಾಯಲೆಟ್ – ಏಕ್ ಪ್ರೇಮ್ ಕಥಾ ಗೂ ರೌಡಿ ರಾಥೋರ್ ಗೂ ಇರುವ ವ್ಯತ್ಯಾಸವನ್ನು ಗುರುತಿಸಬಹುದು. ನಟನೆಯೂ ಗೊತ್ತಿದೆ, ಹೀರೋಗಿರಿಯೂ ಗೊತ್ತಿದೆ. ಈ ಹೀರೋ ಗಿರಿ ಎಂದರೆ ಗೊತ್ತಿದೆಯಲ್ಲ!

ಸಿನಿಮಾ ಆರಂಭದಲ್ಲೇ ಒಂದಿಷ್ಟು ಪುಡಿ ರೌಡಿಗಳನ್ನು ಸದೆ ಬಡಿಯುತ್ತಾ ಜನರಿಂದ ಸಿಳ್ಳೆ ಹಾಕಿಸಿಕೊಳ್ಳುವ, ಹೀರೋಯಿನ್ ಪರಿಚಯಕ್ಕೆ ಒಂದಿಷ್ಟು ಸಹಾಯ ಮಾಡುವ ಹಳೆ ಐಡಿಯಾಗಳು, ಬಳಿಕ ಇದ್ದೇ ಇರುವ ಮೂರು ಮರ ಸುತ್ತುವ ಹಾಡುಗಳು ಹಾಗೂ ಒಂದು ಐಟಂ ಸಾಂಗ್, ಮತ್ತೆ ಎರಡು ಫೈಟಿಂಗ್‌ಗಳೊಂದಿಗೆ ರಾರಾಜಿಸ ತೊಡಗುವಾಗ ಸಿನಿಮಾ ಮುಗಿಯುತ್ತದೆ. ಹೀರೋಯಿಸಂ ಎಂದರೆ ಇದೇ. ಇವನಿಗಾಗಿಯೇ ಅವರೆಲ್ಲ (ಫೈಟಿಂಗ್ ನಲ್ಲಿ) ಎದುರು ಬರುವಾಗ ತಲೆ ಬಗ್ಗಿಸಿಕೊಂಡು ನಿಲ್ಲುವ ಕಥೆ ತಿಳಿದೇ ಇದೆ.
ದುನಿಯಾ ವಿಜಯರ ʼಮಾರುತ” ಶೀಘ್ರವೇ ತೆರೆಗೆ
ಇವುಗಳ ಮಧ್ಯೆಯೂ ಅಕ್ಷಯ್ ಕುಮಾರ್ ಇಷ್ಟವಾಗುವುದು ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪಾಡ್ ಮ್ಯಾನ್, ರಾಣಿಗಂಜ್, ಮಿಷನ್ ಮಂಗಳ್, ಕೇಸರಿ, ರುಸ್ತುಂ ಮತ್ತಿತರ ಚಿತ್ರಗಳಿಂದ.
ನಿಜ, ಇಲ್ಲಿಯೂ ಹೀರೋನೇ ಪ್ರಧಾನವಾಗುತ್ತಾನಾದರೂ ಕೆಲವೊಮ್ಮೆ ಸಹಿಸಬಹುದು. ವಿಷಾದದ ಸಂಗತಿಯೆಂದೆರೆ, ಇಂಥ ಚಿತ್ರಗಳಲ್ಲಿ ತೋರಿಸುವ ಸಣ್ಣ ಹೀರೋಯಿಸಂ ಸಹ ಚಿತ್ರದ ಯಶಸ್ಸಿಗೆ ಅಡ್ಡವಾಗಿಬಿಡುತ್ತದೆ. ಅದೂ ವಿಶೇಷವಾಗಿ ಇವರ ಚಿತ್ರಗಳಲ್ಲಿಆಗಿದೆ ಸಹ.
ರಾಣಿಗಂಜ್ –ಕಲ್ಲಿದ್ದಲ್ಲು ಗಣಿಗಾರಿಕೆಯಲ್ಲಿನ ಅವಘಡಗಳ ಕುರಿತಾದ ಉತ್ತಮ ಚಿತ್ರ. ಸಾಹಸಿಗನೊಬ್ಬನ ಜೀವನಕಥೆಯನ್ನು ರೂಪಿಸಿ ನಿರ್ಮಿಸಿದ ಸಿನಿಮಾ. ಇದು ಬಹಳ ದೊಡ್ಡ ಯಶಸ್ಸು ಕಾಣಲಿಲ್ಲ, ಕಾರಣವಿಷ್ಟೇ. ಅಲ್ಲಿ ಆ ನೈಜ ಸಾಹಸಿಗನಿಗಿಂತ ಅಕ್ಷಯ್ ಕುಮಾರ್ ಹೆಚ್ಚಾಗಿ ಕಾಣಸಿಗುತ್ತಾರೆ !
ಪುಣೆ ಚಿತ್ರೋತ್ಸವ ಹಕ್ಕಿ ಗರಿ ಬಿಚ್ಚಿ ಹಾರಲಿಕ್ಕೆ ಐದೇ ದಿನ ಬಾಕಿ
ಹಾಗೆ ನೋಡುವುದಾದರೆ 2010-2020 ರ ದಶಕ ಅಕ್ಷಯ ಕುಮಾರ್ ರಿಗೆ ಮುಟ್ಟಿದ್ದೆಲ್ಲ ಬಂಗಾರವಾದ ದಶಕ. ಬಳಿಕ ಸ್ವಲ್ಪ ಹಿನ್ನಡೆ ಆರಂಭವಾಯಿತು. ಪ್ರಸ್ತುತ ಅಕ್ಷಯ ಕುಮಾರ್ ಇಳಿಮುಖದಲ್ಲಿದ್ದಾರೆ. ಹಾಗೆಂದು ಒಬ್ಬ ನಟನಿಗೆ ಇಳಿಮುಖ, ಏರು ಮುಖವಾಗಲು ವಯಸ್ಸು ಎಂಬುದು ಇರದು. ಭಾರತೀಯ ಚಿತ್ರರಂಗದಲ್ಲಿ ಇಳಿಮುಖವಾಗ ತೊಡಗಿದ್ದಾಗಲೇ ಏರುಮುಖಕ್ಕೆ ಜಿಗಿದ ಉದಾಹರಣೆಗಳೂ ಇವೆ. ಹಾಗೆ ನೋಡುವುದಾದರೆ ಅಕ್ಷಯ್ ಕುಮಾರ್ ಅವರ ಚಿತ್ರಜಗತ್ತು ಹಾವು ಏಣಿ ಆಟದ ರೀತಿಯಲ್ಲೇ. ಕೆಲವೊಮ್ಮೆ ಏರಿದ್ದಾರೆ, ಹಲವು ಬಾರಿ ಇಳಿದಿದ್ದಾರೆ, ಮತ್ತೆ ಏರಿದ್ದಾರೆ.ಮತ್ತೆ ಇಳಿದಿದ್ದಾರೆ, ಮತ್ತೆ ಏರಿದ್ದಾರೆ..ಹೀಗೆ

ಹಾಗೆ ನೋಡಿದರೆ ಇತ್ತೀಚಿನ ಕೆಲವು ಚಿತ್ರಗಳ ಸೋಲಿನ ಮಧ್ಯೆಯೂ ಹೌಸ್ ಫುಲ್ 4, ಗುಡ್ ನ್ಯೂಜ್ ಚಿತ್ರಗಳು ಗಳಿಕೆ ಚೆನ್ನಾಗಿ ಮಾಡಿದ್ದವು. 200 ಕೋಟಿ ರೂ. ಗೂ ಹೆಚ್ಚು ಗಳಿಸಿ ದಾಖಲೆ ನಿರ್ಮಿಸಿದ್ದವು. ಮಿಷನ್ ಮಂಗಳ್ ಸಹ ಹಾಗೆಯೇ. ಅದಲ್ಲದೇ ಸೂರ್ಯವಂಶಿ, ಕೇಸರಿ, ಒಎಮ್ ಜಿ 2, ರೌಡಿ ರಾಥೋರ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದ್ದವು. ಟಾಯ್ಲೆಟ್ ಏಕ್ ಪ್ರೇಮ್ ಕಥಾದಂಥ ಚಿತ್ರ 133 ಕೋಟಿ ರೂ. ಗಳಿಸಿದ್ದು ದಾಖಲೆಯೇ ಸರಿ.
Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಸ್ಕೈ ಫೋರ್ಸ್ ಬಹಳ ವಿಶಿಷ್ಟವಾದ ಚಿತ್ರ. (Trailer) ಭಾರತೀಯ ವಾಯು ಸೇನೆಯ ಸಾಹಸದ ಕುರಿತಾದದ್ದು. ಅಕ್ಷಯ್ ಕುಮಾರ್ ಅವರ ಹೀರೋಯಿಸಂ ಇಲ್ಲೂ ಸ್ವಲ್ಪ ಇದೆ. ವಿಶಿಷ್ಟ ಕಥೆಯ ಹಿನ್ನೆಲೆಯೂ ಕಾರಣ. ಕಲಾವಿದರ ಅಭಿನಯ ಹಾಗೂ ಕಥೆ, ನಿರ್ಮಾಣ ಎಲ್ಲದರ ಹಿನ್ನೆಲೆಯಲ್ಲಿ ಈ ಚಿತ್ರವೂ 120 ಕೋಟಿ ರೂ. ವರೆಗೂ ಈಗ ಸಂಗ್ರಹಿಸಿದೆ. 200 ಕೋಟಿ ರೂ. ಗೆ ಮುಟ್ಟುತ್ತದೋ ಕಾದು ನೋಡಬೇಕಿದೆ.