Friday, March 14, 2025
spot_img
More

    Latest Posts

    PIFF:ಪುಣೆ ಚಿತ್ರೋತ್ಸವದಲ್ಲಿ ಕನ್ನಡದ ಲಚ್ಚಿ ಫೆ. 14 ರಂದು ಪ್ರದರ್ಶನ

    ಪುಣೆ: ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದ 23 ನೇ ಆವೃತ್ತಿಯಲ್ಲಿ ಕನ್ನಡದ ಏಕೈಕ ಸಿನಿಮಾ ನಟಿ ಗ್ರೀಷ್ಮಾ ಶ್ರೀಧರ್‌ ಅಭಿನಯದ ಲಚ್ಚಿ ಪ್ರದರ್ಶನಗೊಳ್ಳಲಿದೆ.

    ಫೆಬ್ರವರಿ 13 ರಿಂದ 20 ರವರೆಗೆ ಚಿತ್ರೋತ್ಸವ ನಡೆಯಲಿದ್ದು, 11 ಸ್ಕ್ರೀನ್‌ ಗಳಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಟಲಿಯ ಮಾರ್ಗರಿಟಾ ವಿಸಾರಿಯೊರ ಗ್ಲೋರಿಯಾ ಚಿತ್ರದೊಂದಿಗೆ ಉತ್ಸವ ಆರಂಭಗೊಳ್ಳಲಿದೆ. ಪೆದ್ರೋ ಅಲ್ಮೋದವರ್‌ ರ ದಿ ರೂಮ್‌ ನೆಕ್ಟ್ಸ್‌ ಡೋರ್‌ ಚಿತ್ರದೊಂದಿಗೆ ಉತ್ಸವ ಸಮಾಪನಗೊಳ್ಳಲಿದೆ.

    ಈ ಚಿತ್ರೋತ್ಸವದ ಭಾರತೀಯ ಸಿನಿಮಾ ವಿಭಾಗದಲ್ಲಿ ಲಚ್ಚಿ (Trailer Link) ಚಿತ್ರವು ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ಕೃಷ್ಣೇಗೌಡ ನಿರ್ದೇಶಿಸಿದ್ದಾರೆ. ಫೆಬ್ರವರಿ 14 ರಂದು ಚಿತ್ರೋತ್ಸವದ ಎರಡನೇ ದಿನ ಪಿವಿಆರ್‌ ನ ಆರನೇ ಸ್ಕ್ರೀನ್‌ ನಲ್ಲಿ ಸಂಜೆ ಷೋ (5.45 ಗಂಟೆಯಿಂದ) ಪ್ರದರ್ಶನಗೊಳ್ಳಲಿದೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರವು ಕೋಲ್ಕತ್ತಾ ಚಿತ್ರೋತ್ಸವದ ಭಾರತೀಯ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗಳಿಸಿತ್ತು. ಈ ಚಿತ್ರ ಬಿ.ಟಿ. ಲಲಿತಾ ನಾಯಕ್‌ ರ ಕಥೆಯನ್ನು ಆಧರಿಸಿ ರೂಪಿಸಲಾಗಿದೆ.

    ಇದನ್ನೂ ಓದಿ, ಇಷ್ಟವಾಗಬಹುದು : ಪುಣೆ ಚಿತ್ರೋತ್ಸವ

    ಗ್ರೀಷ್ಮಾ ಶ್ರೀಧರ್‌ ಪ್ರಮುಖ ನಟಿಯಾಗಿದ್ದು, ಸ್ತ್ರೀ ಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಇವರ ಮತ್ತೊಂದು ಸಿನಿಮಾ ನಾನು ಕುಸುಮವೂ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಪ್ರಶಸ್ತಿಯನ್ನೂ ಗಳಿಸಿತ್ತು.

    ಇತ್ತೀಚೆಗಷ್ಟೇ ಪೂಜಿತಾ ಪ್ರಸಾದ್‌ ನಿರ್ದೇಶನದ ನನ್‌ ಆಫ್‌ ಹರ್‌ ಚಿತ್ರದಲ್ಲೂ ಗ್ರೀಷ್ಮಾಅಭಿನಯಿಸಿದ್ದು, ಚೆನ್ನೈ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಕನ್ನಡದಿಂದ ಈ ಚಿತ್ರವೊಂದು ಪುಣೆ ಚಿತ್ರೋತ್ಸವ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

    ಇದಲ್ಲದೇ ಇನ್ನೂ ಎಂಟು ಚಿತ್ರಗಳು ಭಾರತೀಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಸಿದ್ದಾರ್ಥ ಜಟ್ಲರ ಇನ್‌ ದಿ ಬೆಲ್ಲಿ ಆಫ್‌ ಟೈಗರ್‌ (ಹಿಂದಿ), ಅಭಿಲಾಶ್‌ ಶರ್ಮ ರ ಸ್ವಾಹಾ (ಮಾಘಾಯ್)‌, ನೆಂದಿಗ್‌ ಲೋದರ್‌ ರ ಕರ್ಕೆನ್‌ (ಹಿಂದಿ, ಇಂಗ್ಲಿಷ್‌, ಗಲ), ಅರ್ಫಜ್ ಅಯೂಬ್‌ ರ ಲೆವೆಲ್‌ ಕ್ರಾಸ್‌ (ಮಲಯಾಳಂ), ಡಾ. ಬಾಬ್ಬಿ ಶರ್ಮ ಬರುವಾ ಅವರ ರಾಡೋರ್‌ ಪಕಿ (ಅಸ್ಸಾಮಿ), ಸೀನು ರಾಮಸ್ವಾಮಿಯವರ ಕೊಜಿಪನ್ನಿ ಚೆಲ್ಲುದುರೈ(ತಮಿಳು), ಹಿಮಜ್ಯೋತಿ ತಲುಕ್ಕರ್‌ ರ ತಾರಿಕ್‌ (ಅಸ್ಸಾಮಿ), ರಿಮಾದಾಸ್‌ ರ ವಿಲೇಜ್‌ ರಾಕ್‌ ಸ್ಟಾರ್‌ 2 (ಅಸ್ಸಾಮಿ) ಭಾಷೆಗಳು ಆಯ್ಕೆಯಾಗಿವೆ. ಅಸ್ಸಾಮಿ ಭಾಷೆಯ ಮೂರು ಚಲನಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ವಿಶೇಷ.

    ಇದನ್ನೂ ಓದಿ, ಇಷ್ಟವಾಗಬಹುದು: ಅಕ್ಷಯ್ ಕುಮಾರ್‌ ಚಿತ್ರ ಜಗತ್ತೇ ಹಾವು ಏಣಿ ಆಟ

    ಮರಾಠಿ ಚಿತ್ರ ಪ್ರಶಸ್ತಿ

    ಈ ಬಾರಿ ಏಳು ಮರಾಠಿ ಚಲನಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗಾಗಿ ಸೆಣಸುತ್ತಿವೆ.

    ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯಲ್ಲದೇ ಮರಾಠಿ ಭಾಷೆಯ ಒಂದು ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸದಾ ನೀಡುತ್ತಿದೆ. ಇದರ ಪ್ರಶಸ್ತಿಗಾಗಿ ಮರಾಠಿ ಭಾಷೆಯ ಏಳು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

    Biffes: ಬೆಂಗಳೂರು ಚಿತ್ರೋತ್ಸವ: ಸಿನಿಮಾಯೆಯ ಶಿಫಾರಸು

    ಉಮೇಶ್‌ ಬಗಡೆಯವರ ಸಿನಿಮ್ಯಾನ್‌, ವಿಜಯ ಸಿಂಗ ಖಂಡೆಯವರ ನೀರನ್‌, ರವೀಂದ್ರ ವಿಜಯ ಕರ್ಮಾಕರ್‌ ಅವರ ಮ್ಯಾಜಿಕ್‌, ಸ್ವಾತಿ ಸದಾಶಿವ ಕಾಡು ಅವರ ನಿರ್ಜಲಿ, ನಿಖಿಲ್‌ ಅವರ ರಾವ್‌ ಸಾಹೇಬ್‌, ರಾವಾ ಗಜ್ಜರ್‌ ಅವರ ಸುಗಾಲ ಹಾಗೂ ಗಜೇಂದ್ರ ಆಹಿರಿಯೆವರ ಸ್ನೋ ಫ್ಲವರ್‌ ಚಿತ್ರಗಳು ಪ್ರದರ್ಶನಗೊಳ್ಳಲಿದೆ.

    Latest Posts

    spot_imgspot_img

    Don't Miss