ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 16 ನೇ ಆವೃತ್ತಿಯ ತೇರು ಕಟ್ಟುವ ಕಾರ್ಯ ಆರಂಭವಾಗಿದೆ.
ಉತ್ಸವಕ್ಕೆ ಇನ್ನು ಸುಮಾರು 15 ದಿನಗಳು ಬಾಕಿ ಇವೆ. ಈಗಾಗಲೇ ತೇರಿನ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಇನ್ನೇನಿದ್ದರೂ ಬಾವುಟ ಕಟ್ಟಿ, ತಳಿರು ತೋರಣ ಕಟ್ಟುವ ಕೆಲಸವಾಗಬೇಕು. ಅದಕ್ಕೀಗ ಚಾಲನೆ ದೊರೆತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಮಾರ್ಚ್ 1 ರಂದು ಉತ್ಸವಕ್ಕೆ ಚಾಲನೆ. ವಿಧಾನಸೌಧದ ಎದುರು ನಿರ್ಮಿಸಲಾಗುವ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ. ಉದ್ಘಾಟನೆ ಮುಖ್ಯಮಂತ್ರಿಯವರಿಂದಲೇ. ಮಾರ್ಚ್ 8 ರಂದು ಸಮಾರೋಪ ಸಮಾರಂಭ. ಅದರಲ್ಲಿ ಪ್ರಸ್ತುತ ಲೆಕ್ಕಾಚಾರದ ಪ್ರಕಾರ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತಿತರರು ಭಾಗವಹಿಸುವ ಸಾಧ್ಯತೆ ಇದೆ. ಚಿತ್ರೋತ್ಸವ ನಡೆಯುವ ಸ್ಥಳ – ರಾಜಾಜಿನಗರದ ಓರಿಯಾನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ. ಬೆಂಗಳೂರಿನಲ್ಲಿ ಚಿತ್ರ ಜಗತ್ತು ಸೇರಿಕೊಳ್ಳಲಿದೆ.

ಪ್ರತಿನಿಧಿ ನೋಂದಣಿ ಆರಂಭ
ಚಿತ್ರೋತ್ಸವದ (ಬಿಫೆಸ್) ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಈಗಾಗಲೇ ಆರಂಭವಾಗಿದೆ. 18 ವರ್ಷ ಮೇಲ್ಪಟ್ಟವರು ಪ್ರತಿನಿಧಿಗಳಾಗಲು ಅರ್ಹರಾಗಿದ್ದು, ನಿಗದಿತ ಶುಲ್ಕ ಪಾವತಿಸಿ ನೋಂದಾಯಿಸಬಹುದು.
ಸಾರ್ವಜನಿಕರಿಗೆ ರೂ. 800 ರೂ. ಗಳಾಗಿದ್ದು, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರಸಮಾಜಗಳ ಸದಸ್ಯರಿಗೆ ಮತ್ತು ಹಿರಿಯ ನಾಗರಿಕರಿಗೆ ರೂ. 400 ರೂ. ಗಳಾಗಿರುತ್ತವೆ.
ಪುಣೆ ಚಿತ್ರೋತ್ಸವದಲ್ಲಿ ಕನ್ನಡದ ಚಿತ್ರ ಲಚ್ಚಿ ಫೆ. 14 ರಂದು ಪ್ರದರ್ಶನ
ಆನ್ ಲೈನ್ ಮೂಲಕ ನೋಂದಾಯಿಸಿದವರು ಫೆಬ್ರವರಿ 18 ರ ಬಳಿಕ ನಂದಿನಿ ಲೇಔಟ್ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿ ಹಾಗೂ ಶಿವಾನಂದ ಸರ್ಕಲ್ ಬಳಿ ಇರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತಮ್ಮ ಕಾರ್ಡ್ ನ್ನು ಪಡೆಯಬಹುದು.
ಉತ್ಸವದಲ್ಲಿ ಏನೇನಿದೆ?

ಉದ್ಘಾಟನೆ, ಸಮಾರೋಪ ಸಮಾರಂಭದ ಕಥೆ ಬದಿಗಿರಲಿ. ಉತ್ಸವದೊಳಗೆ ಏನಿದೆ ಎಂಬುದೇ ದೊಡ್ಡ ಕುತೂಹಲ. ಈ ಬಾರಿಯ ಥೀಮ್ ಸಹ ಸರ್ವ ಜನಾಂಗದ ತೋಟ. ಈ ತೋಟದಲ್ಲಿ ಅರಳುವ ಹೂವುಗಳು 60 ಕ್ಕೂ ಹೆಚ್ಚು ದೇಶಗಳದ್ದು. 200 ಕ್ಕೂ ಹೆಚ್ಚು ವೈವಿಧ್ಯಮಯ ಚಲನಚಿತ್ರಗಳು. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಪೋಲೆಂಡ್, ಬೆಜಿ಼ಲ್, ಜಾರ್ಜಿಯಾ, ಬೆಲ್ಜಿಯಂ, ನೆದರ್ಲೆಂಡ್, ಫಿನ್‌ಲೆಂಡ್, ಇರಾನ್, ಅರ್ಜಂಟೈನಾ, ಕೆನಡಾ, ಡೆನ್‌ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ರೊಮೇನಿಯಾ, ಜಪಾನ್, ಸ್ಪೇನ್, ಇಂಡೋನೇಷಿಯಾ, ಇಟಲಿ ಮತ್ತಿತರ ದೇಶಗಳ ಚಲನಚಿತ್ರಗಳ ಪ್ರದರ್ಶನವಿರಲಿದೆ.
ವಿಭಾಗಗಳು
ಏಷಿಯನ್ ಸಿನಿಮಾ ಸ್ಪರ್ಧೆ, ಭಾರತೀಯ ಸಿನಿಮಾಗಳ ಸ್ಪರ್ಧೆಗೆ ಚಿತ್ರ ಭಾರತಿ, ಕನ್ನಡ ಸಿನಿಮಾ ಸ್ಪರ್ಧೆ, ಸಮಕಾಲೀನ ವರ್ಲ್ಡ್ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ವಿಮರ್ಶಕರ ಆಯ್ಕೆ, ಜೀವನಗಾಥೆ ಆಧಾರಿತ ಚಿತ್ರಗಳು, ಕಂಟ್ರಿ ಫೋಕಸ್ ನಡಿ ಜಾರ್ಜಿಯಾ ಹಾಗೂ ಬ್ರೆಜಿಲ್ ದೇಶದ ಚಲನಚಿತ್ರಗಳು, ಇದರೊಂದಿಗೆ ಭಾರತೀಯ ಉಪಭಾಷೆಗಳ ಚಲನಚಿತ್ರಗಳ ವಿಭಾಗ ಇರಲಿದೆ. ರೆಟ್ರಾಸ್ಪೆಕ್ಟಿವ್ ವಿಭಾಗದಲ್ಲಿ ಜರ್ಮನಿಯ ನಿರ್ದೇಶಕ ವಿಮ್ ವೆಂಡರ್ಸ್ ಹಾಗೂ ಪೋಲೆಂಡ್ ನ ಕ್ರಿಸ್ತಾಫ್ ಕಿಸ್ಲಾವ ಸ್ಕಿ ಹಾಗೂ ಭಾರತೀಯ ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ರ ಚಿತ್ರಗಳು ಪ್ರದರ್ಶಿತವಾಗಲಿವೆ.
ಅಕ್ಷಯ್ ಕುಮಾರ್ ಚಿತ್ರ ಜಗತ್ತೇ ಹಾವು ಏಣಿ ಆಟ
ಬಹಳ ವಿಶೇಷವಾದ ಸಂಗತಿಯೆಂದರೆ ಸಂರಕ್ಷಿಸಲ್ಪಟ್ಟ ಮಹತ್ವದ ಚಲನಚಿತ್ರಗಳ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ, ಪಲ್ಲವಿ ಹಾಗೂ ಇತರೆ ಭಾರತೀಯ ಚಿತ್ರಗಳು ವೀಕ್ಷಣೆಗೆ ಲಭ್ಯವಾಗಲಿವೆ. ಶತಮಾನೋತ್ಸವಗಳ ಸ್ಮರಣೆ, ಶ್ರದ್ಧಾಂಜಲಿ, ಸ್ಮರಣೆ ಹಾಗೂ ಚಿತ್ರೋತ್ಸವದ ಥೀಮ್ ಆಧಾರಿತ ಚಲನಚಿತ್ರಗಳು ಉತ್ಸವದ ಮೆರುಗನ್ನು ಹೆಚ್ಚಿಸಲಿವೆ.
ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗವಿರುತ್ತದೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಉತ್ಸವವೆಂದರೆ ಬರೀ ಪ್ರದರ್ಶನವಲ್ಲ
ಈ ಮಾತಿಗೆ ಪುಷ್ಟೀಕರಿಸುವಂತೆ ಮಾರ್ಚ್ 3, ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾದ ದಿನ. ಹಾಗಾಗಿ ಅಂದು ಸಿನಿಮಾ ದಿನವಾಗಿ ಆಚರಣೆ. ಕನ್ನಡ ಚಿತ್ರರಂಗದ 91 ವರ್ಷಗಳ ನಡೆದು ಬಂದ ದಾರಿಯನ್ನು ಮೆಲುಕು ಹಾಕುವ ವಿಚಾರ ಸಂಕಿರಣ, ಸಂವಾದ ನಡೆಯಲಿದೆ.
ದುನಿಯಾ ವಿಜಯರ ʼಮಾರುತ” ಶೀಘ್ರವೇ ತೆರೆಗೆ
ಈ ಮೂಲಕ ಮೆಲುಕು ಹಾಕುವ ವಿಚಾರಸಂಕಿರಣ, ಸಂವಾದ ನಡೆಯಲಿದೆ. ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಸಿನಿಮಾ ಮಾಧ್ಯಮದಲ್ಲಿ ಅದರ ಸೂಕ್ತ ಬಳಕೆಯ ಕುರಿತ ಕಾರ್ಯಾಗಾರ, ನಿರ್ದೇಶಕನ ಸವಾಲುಗಳು ಎಂಬುದರ ಕುರಿತು ಉಪನ್ಯಾಸ, ಪ್ರಾದೇಶಿಕ ಸಿನಿಮಾಗಳ ಪ್ರದರ್ಶಕರ ಸಮಸ್ಯೆಗಳ ಕುರಿತು ಚರ್ಚೆ, ಫಿಲಂ ಲ್ಯಾಬ್‌ಮತ್ತು ಫಿಲಂ ಪ್ರೊಡಕ್ಷನ್ ಕಾರ್ಯವಿಧಾನಗಳ ಬಗ್ಗೆ ವಿವರಣೆ ಮತ್ತಿತರ ವಿಚಾರ ಪ್ರಚೋದಕ ಗೋಷ್ಠಿಗಳೂ ಇರಲಿವೆ.
ಶತಮಾನೋತ್ಸವ ಸ್ಮರಣೆಯಲ್ಲಿ ನಟ, ನಿರ್ದೇಶಕ ರಾಜ್ ಕಪೂರ್, ನಟ ಗುರುದತ್, ರಿತ್ವಿಕ್ ಘಟಕ್, ನಟ ಕೆ.ಎಸ್. ಅಶ್ವತ್ಥ್ ರ ಸಾಧನೆ-ಸೇವೆಯನ್ನು ಸ್ಮರಿಸಲಾಗುವುದು. ಇತ್ತೀಚೆಗೆ ನಿಧನರಾದ ಶ್ಯಾಮ್ ಬೆನಗಲ್, ಕುಮಾರ್ ಸಹಾನಿ, ರಾಜೀವ್ ತಾರಾನಾಥ್, ದ್ವಾರಕೀಶ್ ರ ಕೊಡುಗೆ ಕುರಿತು ಸ್ಮರಿಸಲಾಗುವುದು. ಇದಲ್ಲದೇ, ಹಲವು ಉಪನ್ಯಾಸಗಳು, ಕ್ಲಾಸಿಕ್ ಸಿನಿಮಾಗಳ ಇತ್ಯಾದಿ ಕುರಿತೂ ಮಾತುಕತೆ ಇರಲಿದೆ.