ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲನೆ ದಿನ ಮುಗಿಯುತ್ತಾ ಬಂದಿತು.
ಉದ್ಘಾಟನಾ ಚಿತ್ರದ ಬಗ್ಗೆ ಸ್ವಲ್ಪ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಹಳ್ಳಿಗಳಿಗೆ ಬಾಗಿಲು ಹಾಕಿ ಬೀಗ ಜಡಿದು ನಗರಕ್ಕೆ ವಲಸೆ ಹೊರಡುವ ಮಾತುಗಳೇ ಕೇಳುತ್ತಿರುವಾಗ ನಗರದ ಬಾಡಿಗೆ ಮನೆಗೆ ಬಾಗಿಲು ಹಾಕಿ ಬೀಗ ಜಡಿದು ಒಮ್ಮೆ ಊರಿಗೆ ಹೋಗಿ ಬರುವೆ ಎಂದು ಬರುವ ಹೊಸ ಮಾದರಿಯ ಕಥೆ.

ಕೋವಿಡ್ ಬಳಿಕ ಹಲವು ಮಂದಿ ನಗರದ ಬಾಡಿಗೆ ಮನೆ ಖಾಲಿ ಮಾಡಿ ಬಂದಿದ್ದಾರೆ. ಕೆಲವರು ಬಾಗಿಲು ಹಾಕಿ ಬೀಗ ಜಡಿದು ಬಂದಿದ್ದಾರೆ. ಇದೇ ಕಾರಣವೇನೋ? ಬಹು ಪ್ರೇಕ್ಷಕರಿಂದ ಪರವಾಗಿಲ್ಲ ಎಂಬ ಅಭಿಪ್ರಾಯಯ ಕೇಳಿಬಂದಿದೆ.

ರವಿವಾರ- ಚಿತ್ರೋತ್ಸವದ ಮೊದಲ ಹಾಗೂ ಏಕೈಕ ಭಾನುವಾರ. ರವಿವಾರದ ಬಂಪರ್ ಚಿತ್ರಗಳು ಹಲವು ಇದ್ದವು. ಅಲ್ಮೊದವರ್ ನ ದಿ ರೂಮ್ ನೆಕ್ಟ್ಸ್ ಡೋರ್ (ವೆನಿಸ್ ನಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿ ಪಡೆದ ಚಿತ್ರ), ಕಾನ್ ನಲ್ಲಿ ಸದ್ದು ಮಾಡಿದ್ದ ದಿ ಶೇಮ್ ಲೆಸ್ (ಭಾರತೀಯ ನಟಿ ಅನಸೂಯಾ ಸೇನ್ ಗುಪ್ತಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು), ಎಸ್ಟೋನಿಯಾದ ಮೂವಿ ಲಯನೆಸ್, ದಿ ಸ್ಟೋರಿ ಆಫ್ ಸೊಲೊಮನ್ ಇದ್ದರೆ, ಏಷ್ಯನ್ ಸ್ಪರ್ಧಾ ವಿಭಾಗದಲ್ಲಿ ಫೆಮಿನಿಚಿ ಫಾತಿಮಾ, ದಮ್ಮಾಮ್ (ನಮ್ಮ ಸಿದ್ಧಿ ಜನಾಂಗದ ಕುರಿತ ಕಥೆ), ಡೀಲ್ ಅಟ್ ದಿ ಬಾರ್ಡರ್ ಹಾಗೂ ಪೈರ್ ಚಿತ್ರಗಳು ಇದ್ದವು. ಇವು ನೋಡಲೇಬೇಕಾದ ಚಿತ್ರಗಳು.
BIFFes: ಬೆಂಗಳೂರಿನಲ್ಲಿ ಚಿತ್ರ ಜಗತ್ತು
In the belly of the tiger
ಕನ್ನಡ ಚಿತ್ರ ಸ್ಪರ್ಧೆಯಲ್ಲೂ ಈಗಾಗಲೇ ಕೆಲವು ಪ್ರಶಸ್ತಿ ಪಡೆದಿರುವ ಗ್ರೀಷ್ಮಾ ಶ್ರೀಧರ್ ಅಭಿಯನಯಿಸಿ ಕೃಷ್ಣೇಗೌಡ ನಿರ್ದೇಶಿಸಿರುವ ಲಚ್ಚಿ, ನಾಗರಾಜ ಸೋಮಯಾಜಿಯವರ ಮರ್ಯಾದೆ ಪ್ರಶ್ನೆ, ಮನೋಹರ ಕೆ ಅವರ ಮಿಕ್ಕ ಬಣ್ಣದ ಹಕ್ಕಿ ಹಾಗೂ ಗುರುರಾಜ್ ಬಿ ಅವರ ಕೆರೆಬೇಟೆ ಚಿತ್ರಗಳು ವೀಕ್ಷಣೆಗೆ ಲಭ್ಯವಿದ್ದವು. ಇವೂ ನೋಡಲೇಬೇಕಾದ ಚಿತ್ರಗಳು.
Sky Force: ಅಕ್ಷಯ್ ಕುಮಾರ್ ಚಿತ್ರ ಜಗತ್ತೇ ಹಾವು ಏಣಿ ಆಟ
ಇದಲ್ಲದೇ ಚಿತ್ರಭಾರತಿಯ ಸಿನಿಮಾಗಳು, ಬೇಕಾದಷ್ಟು ವಿಶ್ವ ಸಿನಿಮಾಗಳು ಇದ್ದವು. ಹಾಗಾಗಿ ರವಿವಾರ ಹಾಳಾಗಿರುವುದಿಲ್ಲ ಎಂದುಕೊಳ್ಳೋಣ.

ಸೋಮವಾರಕ್ಕೆ ಏನು ಮಾಡೋಣ?
ಈಗಿನ ಪ್ರಶ್ನೆ ಅದೇ. ಸೋಮವಾರಕ್ಕೆ ಏನು ಮಾಡುವುದು? ಯಾವ ಸಿನಿಮಾಗಳನ್ನು ನೋಡುವುದು? ಸಿನಿಮಾಯೆ ಈ ನೆಲೆಯಲ್ಲಿ ಒಂದಿಷ್ಟು ಸಲಹೆಗಳನ್ನು ನೀಡುತ್ತದೆ.
ಒಂದು ಬೊಗಸೆಯಲ್ಲಿ ಆಯ್ಕೆ ಕೊಡುವುದಾದರೆ ಗ್ರ್ಯಾಂಡ್ ಟೂರ್, ಯೂನಿವರ್ಸಲ್ ಲಾಂಗ್ವೇಜ್, ಕಾಟ್ ಬೈದಿ ಟೈಡ್ಸ್, 35 ಚಿನ್ನ ಕಥಾ ವೀಡು, ರೀಡಿಂಗ್ ಲೊಲಿಟಾ ಇನ್ ಟೆಹರಾನ್, ಐ ಅಮ್ ನೆವೆಂಕಾ, ಕ್ರೊಕೊಡೈಲ್ ಟಿಯರ್ಸ್ (ಪರವಾಗಿಲ್ಲ) ಪಟ್ಟಿಯಲ್ಲಿವೆ. ಇವುಗಳಲ್ಲಿ ಸ್ವಲ್ಪ ದೀರ್ಘವೆನಿಸಿದರೂ ಇಷ್ಟಪಡುವ ಸಿನಿಮಾ ದಿ ಗ್ರ್ಯಾಂಡ್ ಟೂರ್. ಕಾಟ್ ಬೈ ದಿ ಟೈಡ್ಸ್ ಚೀನಾದ ಕಥೆ. 35 ಚಿನ್ನ ಕಥಾ ವೀಡು ಚೆನ್ನಾಗಿದೆ.
Grand Tour
ರೀಡೀಂಗ್ ಲೊಲಿಟಾ ಇನ್ ಟೆಹರಾನ್ ಪ್ರಸ್ತುತ ಇರಾನ್ ನಲ್ಲಿನ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಹೇಳುವಂಥ ಚಿತ್ರ. ಚೆನ್ನಾಗಿದೆ. ಕ್ರೊಕೊಡೈಲ್ ಟಿಯರ್ಸ್ ಇಂಡೋನೇಷಿಯಾ ಸಿನಿಮಾ. ಟೊರೆಂಟೋ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗಿತ್ತು. ಡೆನ್ಮಾರ್ಕ್ ನ ದಿ ಗರ್ಲ್ ವಿಥ್ ದಿ ನೀಡಲ್ ಆಸ್ಕರ್ ಗೆ ನಾಮ ನಿರ್ದೇಶನಗೊಂಡಿರುವ ಚಿತ್ರ. ಈಗಾಗಲೇ ಹಲವು ಪುರಸ್ಕಾರಗಳನ್ನು ಗೆದ್ದಿರುವ ಚಿತ್ರ.
Reading Lolita in teharan
I am nevenka
35 chinna katha kaadu
ಝೆಕ್ ರಿಪಬ್ಲಿಕ್ ದೇಶದ ವೇವ್ಸ್ ಸಿನಿಮಾ ನೋಡದೇ ಇರಬೇಡಿ. ಸ್ವಲ್ಪ ಪೊಲಿಟಿಕಲ್ ನೆಲೆಯ ಚಿತ್ರ. ಆದರೆ ಚಿತ್ರ ನಿರೂಪಣೆ ಕುರಿತು ಒಳ್ಳೆ ಅಭಿಪ್ರಾಯವಿದೆ. ವಿಶೇಷವೆಂದರೆ ಝೆಕ್ ರಿಪಬ್ಲಿಕ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೀಡಾದ ಹಾಗೂ ಗಳಿಕೆ ಮಾಡಿದ ಎರಡನೇ ಚಿತ್ರ ಇದು.
ಇವುಗಳನ್ನು ಬಿಟ್ಟು ಕ್ಲಾಸಿಕ್ಸ್ ರೀಸ್ಟೋರ್ಡ್ ನೋಡುವ ಮನಸ್ಸಿದ್ದರೆ ಅರವಿಂದನ್ ಅವರ ಥಂಪು ಸಿನಿಮಾ ತಪ್ಪಿಸಿಕೊಳ್ಳುವಂತಿಲ್ಲ.
universal language
ಇನ್ ದಿ ಬೆಲ್ಲಿ ಆಫ್ ಟೈಗರ್ ನ ಕಥಾವಸ್ತು ಸ್ವಲ್ಪ ವಿಭಿನ್ನವಾಗಿದೆ. ಇಂದಿನ ಹತ್ತಾರು ಸಂಗತಿಗಳನ್ನು ಚರ್ಚಿಸುವಂತಿದೆ. ಏಷ್ಯನ್ ಕಾಂಪಿಟೇಷನ್ ವಿಭಾಗದಲ್ಲಿ ಇನ್ ದಿ ಬೆಲ್ಲಿ ಆಫ್ ಟೈಗರ್, ಶಾಂತಿ ನಿಕೇತನ್, ರೀಡಿಂಗ್ ಲೊಲಿಟಾ ಇನ್ ಟೆಹರಾನ್ ಹಾಗೂ ವಾಟರ್ ಲಿಲ್ಲೀಸ್ ಇದೆ. ನಾಲ್ಕೂ ಚಿತ್ರಗಳು ವಿಭಿನ್ನವಾದ ಕಥಾ ಹಂದರವುಳ್ಳವು. ಮೊದಲೆರಡು ಭಾರತೀಯ ಚಿತ್ರಗಳು. ಉಳಿದೆರಡು ಇಟಲಿ ಹಾಗೂ ದಕ್ಷಿಣ ಕೊರಿಯಾದ್ದು. ಮಲಯಾಳ ಚಿತ್ರ ಅಪೂರಮ್ ಬಗ್ಗೆಯೂ ಒಳ್ಳೆ ಅಭಿಪ್ರಾಯವಿದೆ. ಆಸ್ಟ್ರಿಯಾ ದೇಶದ ಮೂನ್,
ಕನ್ನಡ ಚಿತ್ರಗಳ ಸ್ಪರ್ಧೆಯಲ್ಲೂ ನಾಲ್ಕು ಚಿತ್ರಗಳಿವೆ. ಮೈ ಹೀರೋ, ಅರಾಟ, ಅಂತಿಮ ಯಾತ್ರೆ ಹಾಗೂ ಮಿಕ್ಕ ಬಣ್ಣದ ಹಕ್ಕಿ. ಈ ಮಿಕ್ಕ ಬಣ್ಣದ ಹಕ್ಕಿ ಪುನರಾವರ್ತಿತ ಪ್ರದರ್ಶನ.
crocodile tears
ಕ್ಲಾಸಿಕ್ ನ ಕ್ರಿಸ್ತೋಪ್ ಕಿಲೋಸ್ಕಿಯ ಥ್ರೀ ಕಲರ್ಸ್ ನಲ್ಲಿ ವೈಟ್ ಇದೆ. ಎಸ್. ಸಿದ್ದಲಿಂಗಯ್ಯನವರ ಮೇಯರ್ ಮುತ್ತಣ್ಣವಿದೆ.
ಮಂಗಳವಾರಕ್ಕೆ ಏನು ಮಾಡೋಣ. ಬೆಳಗ್ಗೆ ನೋಡೋಣ.