Friday, March 14, 2025
spot_img
More

    Latest Posts

    Biffes:ಬೆಂಗಳೂರು ಚಿತ್ರೋತ್ಸವ : ಸಿನಿಮಾಯೆಯ ಗುರುವಾರದ ಪಟ್ಟಿ ಸಿದ್ಧ !

    ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಆರನೇ ದಿನದ ಸಿನಿಮಾಯೆಯ ಆಯ್ಕೆ ಪಟ್ಟಿ ಇಲ್ಲಿದೆ.

    ಚಿತ್ರೋತ್ಸವ ಸಮಾರೋಪದ ಹಂತಕ್ಕೆ ಬಂದಿದ್ದು, ಬಹುತೇಕ ಸಿನಿಮಾಗಳು ಮುಗಿಯುತ್ತಾ ಬಂದಿವೆ. ಗುರುವಾರದ ವೇಳಾಪಟ್ಟಿಯಲ್ಲಿ ಬಹುಪಾಲು ಸಿನಿಮಾಗಳ ಪುನರ್‌ ಪ್ರದರ್ಶನಗಳಿವೆ. ಸ್ಪರ್ಧಾ ವಿಭಾಗದ ಚಿತ್ರಗಳೂ ಮುಗಿದಿವೆ.

    ಸಮಕಾಲೀನ ವಿಶ್ವ ಸಿನಿಮಾದ ವಿಭಾಗದಲ್ಲಿ ಒಂದಿಷ್ಟು ಇದುವರೆಗೆ ನೋಡದೇ ಇರಬಹುದಾದ ಚಿತ್ರಗಳಿವೆ. ಕೆಲವು ಪುನರ್‌ ಪ್ರದರ್ಶನಗಳೂ ಇದ್ದು, ಒಳ್ಳೆಯ ಅಭಿಪ್ರಾಯ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

    ಬೆಂಗಳೂರು ಚಿತ್ರೋತ್ಸವ: ಸಿನಿಮಾಯೆಯ ಸಿನಿಮಾ ಪಟ್ಟಿ ಇಲ್ಲಿದೆ !

    ಇದನ್ನು ಹೊರತುಪಡಿಸಿದರೆ ಗುರುವಾದ ಆಯ್ಕೆಗೆ ಮೂರು ಸಿನಿಮಾಗಳು ನೋಡಲೇಬೇಕಾದದ್ದಿದೆ. ಮೊಹಮ್ಮದ್‌ ರಸೊಲ್ಫ್‌ ನ ದಿ ಸೀಡ್‌ ಆಪ್‌ ದಿ ಸೀಕ್ರೆಟ್‌ ಫಿಗ್‌ ಸಾಕಷ್ಟು ಚರ್ಚೆಗೀಡಾಗಿರುವ ಚಿತ್ರ. ಕಾನ್‌ ನಲ್ಲೂ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಸೆಣಸಿತ್ತು. ಕಾನ್‌ ನಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಸೇರಿದಂತೆ ಮೂರು ಪುರಸ್ಕಾರಗಳನ್ನು ಗೆದ್ದಿತು. ಅದಲ್ಲದೇ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿದೆ. ಈ ಬಾರಿಯ ಆಸ್ಕರ್‌ ನಲ್ಲೂ ಅಂತಾರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ಜರ್ಮನಿಯಿಂದ ನಾಮ ನಿರ್ದೇಶನಗೊಂಡಿತ್ತು. ರಾಜಕಾರಣ, ಅಧಿಕಾರ, ನೈತಿಕತೆ ಇತ್ಯಾದಿ ಸಂಗತಿಗಳನ್ನು ಕುರಿತಾಗಿ ಚರ್ಚಿಸುವಂಥ ಸಿನಿಮಾ.

    Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ

    ಬ್ರೆಜಿಲ್‌ ನ ಬೆಟಾನಿಯಾ ಸಹ ಬಹಳ ಚರ್ಚೆಗೀಡಾದ ಚಿತ್ರ. ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದೆ. ಅಮೆಜಾನ್‌ ಬುಡಕಟ್ಟುಗಳ ನೆಲೆಯನ್ನು ಕುರಿತಾಗಿ ಹೇಳುವ ಚಿತ್ರ.

    ಭೂತಾನ್‌ ನ ಐ, ದಿ ಸಾಂಗ್‌  ಸಿನಿಮಾದ ಬಗ್ಗೆ ಅತ್ಯುತ್ತಮ ಅಭಿಪ್ರಾಯ ಕೇಳಿಬಂದಿದೆ. ಸ್ವಲ್ಪ ವಿಭಿನ್ನವಾಗಿರುವಂಥ ಕಥಾವಸ್ತು. ಇದನ್ನೂ ನೋಡಬಹುದು.

    ಇವು ಹೊರತು ಪಡಿಸಿದರೆ, ಕ್ವೈಟ್‌ ಲೈಫ್‌ ನೋಡಬಹುದಾದ ಚಿತ್ರ. ದಿ ಪಾರ್ಟಿ ಈಸ್‌ ಓವರ್‌ ಸಿನಿಮಾ ವಿಶೇಷ ಕಥಾವಸ್ತುವಿನ ಸಿನಿಮಾ. ಸ್ವಾತಂತ್ರ್ಯದ ವ್ಯಾಖ್ಯಾನ ಹಾಗೂ ಪರಿಧಿಯನ್ನು ಕುರಿತು ಚರ್ಚಿಸುವಂಥದ್ದು.

    world cinema: ಅಪರಿಮಿತ ಸಾಹಸದಲ್ಲಿ ಕಳೆದು ಹೋದ ಹುಡುಗ

    ಥ್ರೂ ರಾಕ್ಸ್‌ ಅಂಡ್‌ ಕ್ಲೌಡ್ಸ್‌ ಸಿನಿಮಾ ಪರಿಸರ ವಿಷಯಕ್ಕೆ ಸಂಬಂಧಿಸಿದ್ದು. ಸ್ಥಳೀಯ ಗಣಿಗಾರಿಕೆಯ ಕಂಪೆನಿಯಿಂದ ತಮ್ಮ ಪರಿಸರ, ಸರೋವರವನ್ನು ಉಳಿಸಿಕೊಳ್ಳಲು ಪಡುವ ಪ್ರಯತ್ನದ ಬಗೆಗಿನ ಚಿತ್ರ. ಸಾಕಷ್ಟು ಧನಾತ್ಮಕ ಅಭಿಪ್ರಾಯ ಕೇಳಿಬಂದಿರುವ ಚಿತ್ರವಿದು. ಬರ್ಲಿನ್‌ ಚಿತ್ರೋತ್ಸವದಲ್ಲಿ ಪುರಸ್ಕಾರ ಪಡೆದ ಚಿತ್ರವಿದು.

    ಆನ್‌ ಫಾಲಿಂಗ್‌, ಎ ಹೌಸ್‌ ಆನ್‌ ಫೈರ್‌ ಸಿನಿಮಾಗಳಿವೆ.

    ಭಾರತೀಯ ಚಿತ್ರ ವಿಭಾಗದಲ್ಲಿ ಕನ್ನಡದ ಶಿವಧ್ವಜ್‌ ಶೆಟ್ಟಿ ನಿರ್ದೇಶಿಸಿರುವ ಇಂಬು ಸಿನಿಮಾವಿದೆ. ತಮಿಳಿನ ಅರವಿಂದ ಸ್ವಾಮಿ ಹಾಗೂ ಕಾರ್ತಿ ಅಭಿನಯದ ಮೈಯಜಗನ್‌ ಚಿತ್ರವಿದೆ. ಈ ಚಿತ್ರದ ಬಗ್ಗೆಯೂ ಒಳ್ಳೆಯ ಅಭಿಪ್ರಾಯವಿದೆ.

    ಜನಪ್ರಿಯ ಕನ್ನಡ ಸಿನಿಮಾಗಳಲ್ಲಿ ಕೃಷ್ಣಂ ಪ್ರಣಯ ಸಖಿ ಇದೆ. ವಿವಿಧ ವಿಷಯಗಳ ಕುರಿತ ವಿಚಾರ ಸಂಕಿರಣಗಳೂ ಇವೆ.

    Latest Posts

    spot_imgspot_img

    Don't Miss