ಬೆಂಗಳೂರು: ನಟ ವಿಜಯ ರಾಘವೇಂದ್ರರ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಅಭೇದ್ಯಂ ಚಿತ್ರ ಚಿತ್ರೀಕರಣ, ಸಂಸ್ಕರಣಾ ಕಾರ್ಯವೆಲ್ಲವನ್ನೂ ಬಹುತೇಕ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ.
ಈ ಚಿತ್ರವನ್ನು ನಿರ್ಮಿಸಿರುವವರು ಅರುಣ್ ರೈ ತೋಡಾರು. ಇವರು ಈ ಹಿಂದೆ ದಕ್ಷಿಣ ಕನ್ನಡದ ಕಂಬಳದ ಕುರಿತಾಗಿ ವೀರ ಕಂಬಳ ಚಿತ್ರವನ್ನು ನಿರ್ಮಿಸಿದ್ದರು.

ಅಭೇದ್ಯಂ ಚಿತ್ರಕ್ಕೆ ಕಥೆ ಒದಗಿಸಿ ನಿರ್ದೇಶಿಸಿದವರು ಸಂದೀಪ್ ಬಾರಾಡಿ. ಯುವಾ ಶೆಟ್ಟಿ ಚಿತ್ರಕಥೆ ಬರೆದಿದ್ದಾರೆ. ಚಿತ್ರತಂಡ ಹೇಳಿಕೊಳ್ಳುವಂತೆ ಹಾಸ್ಯಲೇಪನ ಇರುವ ಥ್ರಿಲ್ಲರ್ ಚಿತ್ರವಂತೆ.
BIFFes: ಬೆಂಗಳೂರು ಚಿತ್ರೋತ್ಸವ: ಸಿನಿಮಾಯೆ ಶಿಫಾರಸು !
ಬೆಂಗಳೂರು, ಮಂಗಳೂರು ಮತ್ತಿತರ ಕಡೆ ಚಿತ್ರೀಕರಣ ಮುಗಿಸಲಾಗಿದೆ. ಚಿತ್ರೀಕರಣ ನಂತರದ ಕಾರ್ಯ ಪೋಸ್ಟ್ ಪ್ರೊಡಕ್ಷನ್ ಭರದಿಂದ ನಡೆಯುತ್ತಿದೆ. ಆದಷ್ಟು ಬೇಗ ಸಿನಿ ಪ್ರೇಮಿಗಳಿಗೆ ವೀಕ್ಷಣೆಗೆ ಲಭ್ಯವಾಗಲಿದೆ ಎನ್ನುತ್ತದೆ ಚಿತ್ರ ತಂಡ.
IIFA: ಪ್ರಶಸ್ತಿ ಬಾಚಿಕೊಂಡ ಲಾಪತಾ ಲೇಡೀಸ್, ಭೂಲ್ ಭೂಲಯ್ಯಾ 3 ಹಾಗೂ ಕಿಲ್ ಚಿತ್ರಗಳು
ವಿಜಯ ರಾಘವೇಂದ್ರರಿಗೆ ತಾರಾ ಬಳಗದಲ್ಲಿ ಸಿಂಚನ ಪಿ. ರಾವ್, ರೋಶನ್ ವೇಗಸ್, ಸುಂದರ್ ವೀಣ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ಮೋಹನ್ ಶೇಣಿ ಮತ್ತಿತರರು ಇದ್ದಾರೆ.
ಸಂಗೀತ ನಿರ್ದೇಶನ ವರುಣ್ ಉನ್ನಿ ಕೊಚ್ಚಿನ್, ಕಿಶೋರ್, ಕುಮಾರ್ ಶೆಟ್ಟಿ ಅವರದ್ದು, ಮಯೂರ್ ಆರ್ ಶೆಟ್ಟಿ ಛಾಯಾಗ್ರಹಣವಿದೆ.