Wednesday, January 22, 2025
spot_img
More

    Latest Posts

    BigBoss:2025-ಈಗ ಸಿನಿಮಾಕ್ಕೆ ಮರಳಿ ಬರುವ ಸಮಯ !

    ನಟ ಸುದೀಪರ ಮ್ಯಾಕ್ಸ್‌ ಗೆದ್ದಿದೆ.

    ಮೊದಲ ವಾರದ ಗಳಿಕೆ ಕಂಡರೆ ಜೋರಾಗಿಯೇ ಇದೆ. ಆರಂಭದಲ್ಲೇ 30 ಕೋಟಿ ರೂ. ಗೂ ಹೆಚ್ಚು ಗಳಿಕೆ ಕಂಡಿರುವ 2024 ರ ಏಕೈಕ ಚಿತ್ರ. ಈ ಸಂತೋಷವನ್ನು ಸುದೀಪರು ಇತ್ತೀಚೆಗೆ ತಮ್ಮ ತಂಡದೊಂದಿಗೆ ಹಂಚಿಕೊಂಡಿದ್ದಾರೆ.

    ಎರಡೂವರೆ ವರ್ಷದ ಬಳಿಕ ಈ ಬಿಗ್‌ ಬಾಸ್‌ ನಡುವೆ ಕಳೆದು ಹೋಗಿದ್ದ ಸುದೀಪರ ನಟನೆಯ ಮ್ಯಾಕ್ಸ್‌ ಡಿಸೆಂಬರ್‌ 25 ರಂದು ಬಿಡುಗಡೆಯಾಗಿತ್ತು. ಚಿತ್ರದ ಗೆಲುವು ತಂಡದ ಎಲ್ಲರಲ್ಲೂ ನಗು ತರಿಸಿದೆ. ಅಭಿಮಾನಿಗಳಿಗೂ ಖುಷಿ ತಂದಿದೆ. ಹಾಗಾಗಿ ನನಗೂ ಖುಷಿ ಕೊಟ್ಟಿದೆ ಎಂದು ಖುಷಿಯನ್ನು ಹೀಗೆ ಎಲ್ಲ ಭಾಗಗಳಿಗೂ ವರ್ಗಾಯಿಸಿದವರು ಸುದೀಪ್.‌

    Sandalwood :ಹೊಸ ವರ್ಷ ಮತ್ತಷ್ಟು ಚಿತ್ರ ಬಂದರೆ ಸಾಕೇ? ಒಂದೆರಡಾದರೂ ದಾಖಲೆ ಬೇಡವೇ?

    ಒಂದು ಮಾತು ಸದ್ಯದ ಮಟ್ಟಿಗೆ ಹೀಗಿದೆ. ಈ ಮ್ಯಾಕ್ಸ್‌ ನ ಸೀಕ್ವೆಲ್‌, ಪ್ರೀಕ್ವೆಲ್‌ ಏನೂ ಇಲ್ಲವಂತೆ. ತಮಿಳಿನಲ್ಲೂ ಸಿನಿಮಾ ಭರ್ಝರಿಯಾಗಿ ಓಡುತ್ತಿದೆಯಂತೆ. ಆಪ್ಪ ನೋಡಿ ಇಷ್ಟಪಟ್ಟರಂತೆ. ಅಮ್ಮ ಇದ್ದರೂ ಖುಷಿ ಪಡುತ್ತಿದ್ದರು. ಈ ಸಿನಿಮಾದ ಮೂಲಕ ಸುದೀಪರ ಮಗಳು ಸಾನ್ವಿ ಗಾಯಕಿಯಾಗಿದ್ದಾಳೆ.

    ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಿಸಿದ ಚಿತ್ರವಿದು. ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದರು. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ರದ್ದು. ವಿಜಯ ಕಾರ್ತಿಕೇಯರದ್ದೂ ಮೊದಲ ಕನ್ನಡದ ಚಿತ್ರವಿದು.

    world cinema: ಅಪರಿಮಿತ ಸಾಹಸದಲ್ಲಿ ಕಳೆದು ಹೋದ ಹುಡುಗ

    ಮ್ಯಾಕ್ಸ್‌ ಚಿತ್ರದಲ್ಲಿ ಸುದೀಪರ ನಟನೆ ಇಷ್ಟವಾಗುತ್ತದೆ. ಹಲವಾರು ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ತೋರಿದ ಹಾಗೂ ತೋರುವ ಸಾಧ್ಯತೆ ಇರುವ ಸುದೀಪ್‌ ಈ ಬಿಗ್‌ ಬಾಸ್‌ ಮಧ್ಯೆ ಕಳೆದು ಹೋಗಿದ್ದರು.

    ಬರೀ ಬಿಗ್‌ ಬಾಸ್‌ ಮಧ್ಯೆ ನಿರೂಪಣೆಗೆ ನಿಂತು ಹೋಗಿದ್ದ ಸುದೀಪರು ಚಿತ್ರಮಂದಿರದಲ್ಲಿ ಎಂದು ಸಿಗುತ್ತಾರೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಎರಡೂ ವರೆ ವರ್ಷದ ಮೇಲೆ ಮ್ಯಾಕ್ಸ್‌ ಮೂಲಕ ಸಿಕ್ಕಿದ್ದಾರೆ. ಈ ಬಿಗ್‌ ಬಾಸ್‌ ಮಧ್ಯೆ ಕಳೆದು ಹೋಗಿದ್ದ ಕಲಾವಿದ ಕಿಚ್ಚ ಮತ್ತೆ ಸಿಕ್ಕಂತಾಗಿದೆ. ಈಗ ಬಿಗ್‌ ಬಾಸ್‌ ಬಿಟ್ಟು ಚಿತ್ರರಂಗಕ್ಕೆ ಮತ್ತೆ ಬರುವ ಸಮಯ.

    Latest Posts

    spot_imgspot_img

    Don't Miss