ಬೆಂಗಳೂರು: ರಾಜ್ಯ ಸರಕಾರವು ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಿಂಕಿ ಎಲ್ಲಿ ಚಿತ್ರವು ಪಡೆದಿದೆ. ನಿರ್ದೇಶಕ ಪೃಥ್ವಿ ಕೊಣನೂರು ಹಾಗೂ ನಿರ್ಮಾಪಕರಾದ ಕೃಷ್ಣೇಗೌಡ ಅವರಿಗೆ ತಲಾ ಒಂದು ಲಕ್ಷ ರೂ ಬಹುಮಾನದೊಂದಿಗೆ ಕ್ರಮವಾಗಿ ಎಚ್. ಎಲ್.ಎನ್. ಸಿಂಹ ಹಾಗೂ ಕೆಸಿಎನ್ ಗೌಡ ಪ್ರಶಸ್ತಿಯನ್ನು ಪಾರಿತೋಷಕದೊಂದಿಗೆ ನೀಡಲಾಗುತ್ತಿದೆ.

ಎರಡನೇ ಪ್ರಶಸ್ತಿಯನ್ನು ವರ್ಣ ಪಟಲ (Trailer) ಚಿತ್ರಕ್ಕೆ ನೀಡಲಾಗಿದೆ. ನಿರ್ದೇಶಕ ಚೇತನ್ ಮುಂಡಾಡಿ ಹಾಗೂ ನಿರ್ಮಾಪಕರಾದ ಕವಿತಾ ಸಿ. ಹಿರೇಮಠ ಅವರಿಗೆ ತಲಾ 75 ಸಾವಿರ ರೂ. ನಗದು, ಪಾರಿತೋಷಕ ನೀಡಲಾಗುವುದು.
ಮೂರನೇ ಪ್ರಶಸ್ತಿಯನ್ನು ಹರಿವ ನದಿಗೆ ಮೈಯೆಲ್ಲ ಕಾಲು ಸಿನಿಮಾ ಪಡೆದಿದೆ. ಬಾಬು ಈಶ್ವರ ಪ್ರಸಾದ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಐವತ್ತು ಸಾವಿರ ರೂ. ನಗದು ಹಾಗೂ ಪಾರಿತೋಷಕವನ್ನು ನೀಡಲಾಗುವುದು.
ವಿಶೇಷ ಸಾಮಾಜಿಕ ಕಾಳಜಿಯುಳ್ಳ ಚಿತ್ರ ಪ್ರಶಸ್ತಿಯನ್ನುರಾಮದಾಸ್ ನಾಯ್ಡು ಹಾಗೂ ಶಿವಧ್ವಜ್ ಶೆಟ್ಟಿಅವರ ಗಿಳಿಯು ಪಂಜರದೊಳಗಿಲ್ಲ ಮತ್ತು ಈ ಮಣ್ಣು ಸಿನಿಮಾಗಳಿಗೆ ನೀಡಲಾಗಿದೆ. 75 ಸಾವಿರ ರೂ. ನಗದು ಹಾಗೂ ಪಾರಿತೋಷಕವಿದೆ.

ಜನಪ್ರಿಯ ಮನರಂಜಾನ ಚಿತ್ರದಡಿ ಟಿ ವಿಶ್ವನಾಥ ನಾಯ್ಕ ನಿರ್ಮಿಸಿ ಸಂಗಮೇಶ್ ಸಜ್ಜನರ್ ನಿರ್ದೇಶಿಸಿರುವ ಫೋರ್ ವಾಲ್ಸ್ ಚಿತ್ರ ಪಡೆದಿದೆ. ಮಕ್ಕಳ ಚಿತ್ರ ಪ್ರಶಸ್ತಿ ಆದಿತ್ಯ ಆರ್ ಚಿರಂಜೀವಿ ನಿರ್ಮಿಸಿ, ನಿರ್ದೆಶಿಸಿದ ಪದಕ ಚಿತ್ರ ಪಡೆದಿದೆ. ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಸಂತೋಷ್ ಮಾಡ ನಿರ್ದೇಶನ ಜೀಟಿಗೆ ಪಡೆದಿದೆ.
ವಿವಿಧ ಪ್ರಶಸ್ತಿ
ಜಂಟಲ್ ಮ್ಯಾನ್ ಚಿತ್ರದಲ್ಲಿನ ನಟನೆಗಾಗಿ ಪ್ರಜ್ವಲ್ ದೇವರಾಜ್ ಗೆ ಅತ್ಯುತ್ತಮ ನಟ ಪ್ರಶಸ್ತಿ, ಪಿಂಕಿ ಎಲ್ಲಿ ಚಿತ್ರದ ಅಭಿನಯಕ್ಕಾಗಿ ಅಕ್ಸತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ಪೋಷಕ ನಟ ಪ್ರಶಸ್ತಿ ರಮೇಶ್ ಪಂಡಿತ್, ಕಥೆ- ಶಶಿಕಾಂತ್ ಗಟ್ಟಿ(ರಾಂಚಿ). ಚಿತ್ರಕಥೆ- ರಾಘವೇಂದ್ರ ಕುಮಾರ್ ಅವರ ಚಾಂದಿನಿ ಬಾರ್, ಸಂಭಾಷಣೆ- ವೀರಪ್ಪ ಮಡಿವಾಳ-ಹೂವಿನ ಹಾರ ಚಿತ್ರಕ್ಕೆ, ಛಾಯಾಗ್ರಹಣ- ಅಶೋಕ್ ಕಶ್ಯಪ್ (ತಲೆದಂಡ), ಸಂಗೀತ ನಿರ್ದೇಶನ – ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್), ಸಂಕಲನ- ನಾಗೇಂದ್ರ ಕೆ. ಉಜ್ಜಿನಿ (ಆಕ್ಟ್ 1978) ಗೆ ಲಭಿಸಿದೆ.
New Movie:ವಿಜಯ ರಾಘವೇಂದ್ರರ ಮತ್ತೊಂದು ಹೊಸ ಚಿತ್ರ ಶೀಘ್ರವೇ ತೆರೆಗೆ
ಬಾಲನಟ ಪ್ರಶಸ್ತಿಗೆ ಅಹಿಲ್ ಅನ್ಸಾರಿ (ದಂತ ಪುರಾಣ), ಬಾಲನಟಿ ಪ್ರಶಸ್ತಿಗೆ ಹಿತೈಷಿ ಪೂಜಾರ್ (ಪಾರು), ಕಲಾ ನಿರ್ದೇಶನ – ಕೆ. ಗುಣಶೇಖರ್ (ಬಿಚ್ಚು ಗತ್ತಿ), ಗೀತ ರಚನೆ – ಗಾರ್ಗಿ ಕಾರೆಹಕ್ಲು (ಪರ್ಜನ್ಯ), ಸಚಿನ್ ಶೆಟ್ಟಿ ಕುಂಬ್ಳೆ (ಈ ಮಣ್ಣು), ಹಿನ್ನೆಲೆ ಗಾಯನ – ಅನಿರುದ್ಧ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ), ಗಾಯಕಿ – ಆರುಂಧತಿ ವಶಿಷ್ಟ (ದಂತ ಪುರಾಣ), ತೀರ್ಪುಗಾರರ ಪ್ರಶಸ್ತಿ ನಟನೆಯಲ್ಲಿ ಸಂಚಾರಿ ವಿಜಯ್ (ಮರಣೋತ್ತರ), ವಸ್ತ್ರ ವಿನ್ಯಾಸ- ಶ್ರೀ ವಲ್ಲಿ, ಪ್ರಸಾಧನ – ರಮೇಶ್ ಬಾಬು, ಶಬ್ದ ಗ್ರಹಣ – ವಿ.ಜಿ. ರಾಜನ್ ಅವರಿಗೆ ನೀಡಲಾಗಿದೆ. ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಗೆ ಚಂಪಕಧಾಮ ಬಾಬು ಭಾಜನರಾಗಿದ್ದಾರೆ.