Friday, March 14, 2025
spot_img
More

    Latest Posts

    Biffes: ಬೆಂಗಳೂರು ಚಿತ್ರೋತ್ಸವ: ಬುಧವಾರಕ್ಕೆ ಸಿನಿಮಾಯೆಯ ಸಿನಿಮಾ ಪಟ್ಟಿ ಇಲ್ಲಿದೆ !

    ಬೆಂಗಳೂರು: ಬೆಂಗಳೂರು ಚಿತ್ರೋತ್ಸವದ ಬಾರಿಯ ಸಿನಿಮಾಗಳ ಆಯ್ಕೆಗಳಲ್ಲಿ ಕೆಲವು ಒಳ್ಳೆಯದಿದೆ. ಗೋವಾ ಹಾಗೂ ಕೇರಳ ಚಿತ್ರೋತ್ಸವಗಳಲ್ಲಿ ಬಾರದೇ ಇರುವ ಕೆಲವು ಚಿತ್ರಗಳೂ ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

    ಮಂಗಳವಾರಕ್ಕೆ ಹೋಲಿಸಿದರೆ ಬುಧವಾರಕ್ಕೆ ಒಟ್ಟಾರೆ ಆಯ್ಕೆಯ ಸಂಖ್ಯೆಯಲ್ಲಿ ಕಡಿಮೆ ಇವೆ. ಆದರೆ ಹೇಗಾದರೂ ನೋಡಲೇಬೇಕಾದ ಹಾಗೂ ಒಮ್ಮೆ ನೋಡಬಹುದಾದ ಚಿತ್ರಗಳ ಸಂಖ್ಯೆ ಕೊಂಚ ಹೆಚ್ಚಿದೆ. ಬೇಡ, ಪರವಾಗಿಲ್ಲ ಎನ್ನುವ ಚಿತ್ರಗಳು ಸಿನಿಮಾಯೆಯ ಪಟ್ಟಿಯಲ್ಲಿ ಇಲ್ಲ.

    ಫೆಮಿಲಿಯರ್‌ ಟಚ್‌

    ಅಮೆರಿಕದ ಸಿನಿಮಾ ಫೆಮಿಲಿಯರ್‌ ಟಚ್‌. ವೃದ್ಧಾಪ್ಯ, ಮರೆಗುಳಿ ರೋಗ ಇತ್ಯಾದಿ ಪ್ರಸ್ತುತ ಸಮಸ್ಯೆ ಕುರಿತಾದದ್ದೇ ಸಿನಿಮಾ. ಚೆನ್ನಾಗಿದೆ. ಬಹಳ ಮುಖ್ಯವಾಗಿ ಕಥಾನಾಯಕಿಯ ಪಾತ್ರ, ಆತ್ಮವಿಶ್ವಾಸ, ಗತ್ತು ನೋಡಲೇಬೇಕಾದ ಸಿನಿಮಾ. ಸಿದ್ಧಾಂತಗಳ ಗೊಡವೆಯಲ್ಲಿ ಸಿಲುಕಿಸದೇ ಕಥಾ ಹಂದರವನ್ನು ನಿರೂಪಿಸುತ್ತದೆ. ಇದು ಸಮಕಾಲೀನ ವಿಶ್ವ ಸಿನಿಮಾ ವಿಭಾಗದಲ್ಲಿದೆ.

    Familiar touch trailer

    ಇದನ್ನು ಬಿಟ್ಟರೆ ಇರಾನಿನ ಎರಡು ಚಿತ್ರಗಳಿವೆ. ಮಿ, ಮಾರ್ಯಂ, ದಿ ಚಿಲ್ಡ್ರನ್‌ ಅಂಡ್‌ 26 ಅದರ್ಸ್‌ ತಪ್ಪಿಸುವಂಥ ಸಿನಿಮಾವಲ್ಲ. ಕಥಾವಸ್ತು ಚೆನ್ನಾಗಿದೆ. ತರುಣಿಯೊಬ್ಬಳು ಸಿನಿಮಾ ಶೂಟಿಂಗ್‌ ಗೆಂದು 15 ದಿನಕ್ಕೆ ತನ್ನ ಮನೆಯನ್ನು ಬಾಡಿಗೆ ಕೊಟ್ಟು ಎದುರಾಗುವ ಸನ್ನಿವೇಶಗಳನ್ನು ನಿಭಾಯಿಸುವುದು.

    Biffes: ಬೆಂಗಳೂರು ಚಿತ್ರೋತ್ಸವ: ಸಿನಿಮಾಯೆಯ ಶಿಫಾರಸು

    ಇದನ್ನು ಹೊರತುಪಡಿಸಿದರೆ ಸ್ಪೇನ್‌ ನ ಸಿನಿಮಾ ದಿ ಎಕ್ಷೈಲ್ಸ್‌ ನೋಡಬಹುದಾದ ಸಿನಿಮಾ. ಅಮ್ಮ-ಮಗಳು ನಗರ ಜೀವನ ತ್ಯಜಿಸಿ ಹಳ್ಳಿಗೆ ಹೋಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ಸಿನಿಮಾ. ಅಮ್ಮ ಮತ್ತು ಮಗಳು ಪಾತ್ರವನ್ನು ನಿರ್ವಹಿಸಿದ ಇಬ್ಬರಿಗೂ ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಬಂದಿದೆ.

    My favourite cake

    ಮತ್ತೊಂದು ನೋಡಲೇಬೇಕಾದ ಸಿನಿಮಾ. ಕ್ರಿಟಿಕ್ಸ್‌ ವೀಕ್‌ ವಿಭಾಗದಲ್ಲಿ ಮೈ ಫೇವರಿಟ್‌ ಕೇಕ್‌ ಸಿನಿಮಾವಿದೆ. ತಪ್ಪದೇ ನೋಡಿ. ಬಹಳಮೆಚ್ಚುಗೆ ವ್ಯಕ್ತವಾಗಿರುವ ಚಿತ್ರವಿದು.

    BIFFes: ಬೆಂಗಳೂರು ಚಿತ್ರೋತ್ಸವ: ಸಿನಿಮಾಯೆ ಶಿಫಾರಸು !

    ಒನ್‌ ಆಫ್‌ ದೋಸ್‌ ಡೇಸ್‌ ವೆನ್‌ ಹೆಮ್ಮಿ ಡೈಸ್‌ ಟರ್ಕಿ ದೇಶದ ಸಿನಿಮಾ. ಮಾನವ ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸುವ ಟರ್ಕಿ ಸಿನಿಮಾಗಳನ್ನುನೋಡಬಹುದು. ಕಥಾ ವಸ್ತು ಸಹ ಚೆನ್ನಾಗಿದೆ.

    ಥ್ರೀ ಕಿಲೋಮೀಟರ್ಸ್‌ ಟು ಎಂಡ್‌ ಆಫ್‌ ದಿ ವರ್ಲ್ಡ್‌ ಸಿನಿಮಾ ರೊಮೇನಿಯಾ ದೇಶದ್ದು. ಒಳ್ಳೆಯ ಅಭಿಪ್ರಾಯವಿದೆ. ಬೊಲಿವಿಯಾ ದೇಶದ ಸಿನಿಮಾ ದಿ ಡಾಗ್‌ ಥೀಫ್‌ ಸಹ ವಿಭಿನ್ನ ಕಥಾ ಹಂದರ ಇರುವ ಸಿನಿಮಾ.  ವಿಂಡ್‌ ಲೆಸ್‌ ಬಲ್ಗೇರಿಯಾದ ಸಿನಿಮಾ ದ ಬಗ್ಗೆಯೂ ಒಳ್ಳೆಯ ಅಭಿಪ್ರಾಯವಿದೆ. ಮಲೇಶಿಯಾ ಸಿನಿಮಾ ಟು ಕಿಲ್‌ ಎ ಮಂಗೋಲಿಯನ್‌ ಹಾರ್ಸ್‌ ಗೂ ಸಾಕಷ್ಟು ಸಕಾರಾತ್ಮಕ ಅಭಿಪ್ರಾಯವಿದೆ. ಸಿನಿಮಾಯೆ ಆಯ್ಕೆಯ ಕೊನೆಯ ಸಿನಿಮಾ ಸಿಮಾಸ್‌ ಸಾಂಗ್.‌ ಆಫ್ಘಾನಿಸ್ತಾನ ದ ಸಿನಿಮಾ. ಎರಡು ರಾಜಕೀಯ ಸಿದ್ಧಾಂತಗಳ ಮಂದಿ ಒಟ್ಟಿಗೆ ಬದುಕಲು ಸಾಧ್ಯವೇ ಎಂಬುದನ್ನು ಪ್ರಶ್ನಿಸುವ ಸಿನಿಮಾ.

    Me maryum

    The exiles trailer

    ಏಷ್ಯನ್‌ ಕಾಂಪಿಟೇಷನ್‌

    ಈ ವಿಭಾಗದಲ್ಲಿ ಎರಡು ಚಿತ್ರಗಳಿವೆ ನೋಡಬಹುದಾದದ್ದು. ಪರ್ಷಿಯನ್‌ ಭಾಷೆಯ ಇನ್‌ ದಿ ಲ್ಯಾಂಡ್‌ ಆಫ್‌ ಬ್ರದರ್ಸ್.‌ ಮತ್ತೊಂದು ಕೊರಿಯನ್‌ ಭಾಷೆಯ ವೆನ್‌ ದಿಸ್‌ ಸಮ್ಮರ್‌ ಈಸ್‌ ಓವರ್.‌ ಎರಡೂ ಏಷ್ಯಾದ ಥೀಮ್‌ ಇರುವುದರಿಂದ ನೋಡಬಹುದು. ವಿಭಿನ್ನವಾದ ಕಥಾವಸ್ತುಗಳನ್ನುನಿರ್ವಹಿಸುತ್ತಿವೆ.

    ಕನ್ನಡ ಸಿನಿಮಾ

    ಕನ್ನಡ ಸಿನಿಮಾ ವಿಭಾಗದಲ್ಲಿ ಪಿದಾಯಿ, ಮರ್ಯಾದೆ ಪ್ರಶ್ನೆ, ಬೆಳ್ಳಿ ಹೂ, ಅಂತಿಮ ಯಾತ್ರೆ ಪ್ರದರ್ಶನಕ್ಕೆ ಲಭ್ಯವಿವೆ.

    ನೀವು ನೋಡಿದ ಸಿನಿಮಾಗಳ ರಿವ್ಯೂ, ಅಭಿಪ್ರಾಯ, ಅನಿಸಿಕೆ ಇದ್ದರೆ cinemaye9@gmail.com ಗೆ ಕಳುಹಿಸಿ.

    Latest Posts

    spot_imgspot_img

    Don't Miss