Friday, March 14, 2025
spot_img
More

    Latest Posts

    Biffes: ಬೆಂಗಳೂರು ಚಿತ್ರೋತ್ಸವ : ಶಬನಾ ಅಜ್ಮಿಗೆ ಪುರಸ್ಕಾರ, ಇರಾನ್‌ ಚಿತ್ರಕ್ಕೆ ಏಷ್ಯನ್‌, ಮಿಕ್ಕ ಬಣ್ಣದ ಹಕ್ಕಿಗೆ ಕನ್ನಡ ಚಿತ್ರ ಪ್ರಶಸ್ತಿ

    ಬೆಂಗಳೂರು : ಹದಿನಾರನೇ ಬೆಂಗಳೂರು ಚಿತ್ರೋತ್ಸವಕ್ಕೆ ಶನಿವಾರ ತೆರೆ ಬಿದ್ದಿದೆ. ಬಹಳ ಕುತೂಹಲ ಮೂಡಿಸಿದ್ದ ಈ ಬಾರಿಯ ಏಷ್ಯನ್‌ ಸಿನಿಮಾ ವಿಭಾಗದ ಪ್ರಶಸ್ತಿಗಳು ಇರಾನ್‌, ಇಸ್ರೇಲ್‌ ಹಾಗೂ ಬಾಂಗ್ಲಾದೇಶದ ಪಾಲಾಗಿವೆ. ಕನ್ನಡ ಚಿತ್ರ ಸ್ಪರ್ಧಾ ವಿಭಾಗದಲ್ಲಿ ಮಿಕ್ಕ ಬಣ್ಣದ ಹಕ್ಕಿ ಪ್ರಥಮ ಪ್ರಶಸ್ತಿ ಪಡೆದಿದೆ.

    ವಿವಿಧ ವಿಭಾಗದಲ್ಲಿ ಒಟ್ಟು 5 ಕನ್ನಡ ಚಿತ್ರಗಳು ಪ್ರಶಸ್ತಿ ಪಡೆದಿವೆ. ಕನ್ನಡ ಚಿತ್ರ ವಿಭಾಗದಲ್ಲಿ ಮನೋಹರ್‌ ನಿರ್ದೇಶನದ ಮಿಕ್ಕ ಬಣ್ಣದ ಹಕ್ಕಿ ಪ್ರಥಮ ಪ್ರಶಸ್ತಿ ಪಡೆದರೆ, ಎರಡನೇ ಪ್ರಶಸ್ತಿಯನ್ನು ಸಂತೋಷ್‌ ಮಾಡ ನಿರ್ದೇಶನದ ತುಳು ಭಾಷೆಯ ಚಿತ್ರ ಪಿದಾಯಿ ಪಡೆದಿದೆ. ಮೂರನೇ ಪ್ರಶಸ್ತಿಯನ್ನು ಅನೀಶ್‌ ಪೂಜಾರಿಯವರ ತುಳು ಭಾಷೆಯ ಚಿತ್ರ ದಕ್ಷತ್‌ ಚಿತ್ರ ಪಡೆದಿದೆ. ನೆಟ್‌ ಪ್ಯಾಕ್‌ ಜೂರಿ ಪ್ರಶಸ್ತಿ ಕೃಷ್ಣೇಗೌಡ ನಿರ್ದೇಶಿಸಿದ ಲಚ್ಚಿ ಚಿತ್ರ ಪಡೆದಿದೆ. ಇದು ಮಹಿಳಾ ಕಥಾಧಾರಿತ ಚಿತ್ರವಾಗಿದ್ದು, ನಟಿ ಗ್ರೀಷ್ಮಾ ಶ್ರೀಧರ್‌ ಈ ಚಿತ್ರದ ನಾಯಕ-ನಾಯಕಿ. ಇದನ್ನು ಹೊರತುಪಡಿಸಿ ಸೆಬಾಸ್ಟಿಯನ್‌ ಡೇವಿಡ್‌ ನಿರ್ದೇಶನದ ಬೆಳ್ಳಿ ಹೂ ಚಿತ್ರ ಚಿತ್ರಭಾರತಿಯಲ್ಲಿ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದಿದೆ.

    Sky Force: ಅಕ್ಷಯ್ ಕುಮಾರ್‌ ಚಿತ್ರ ಜಗತ್ತೇ ಹಾವು ಏಣಿ ಆಟ

    ಮೂರು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಇರಾನ್‌ ನಿನ ರಾಹ ಅಮಿರ್ಫಜಿಲ್‌ ಹಾಗೂ ಅಲಿರೆಜಾ ಗಸೆಮಿ ನಿರ್ದೇಶಿಸಿದ ಇನ್‌ ದಿ ಲ್ಯಾಂಡ್‌ ಆಫ್‌ ಬ್ರದರ್ಸ್‌ ಸಿನಿಮಾ ಗಳಿಸಿದೆ. ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಇಸ್ರೇಲ್‌ ನ ಮರಿಜಾ ಸ್ಟಾಚಿ ನಿರ್ದೇಶನದ ರೀಡಿಂಗ್‌ ಲೊಲಿಟಾ ಇನ್‌ ಟೆಹರಾನ್‌ ಚಿತ್ರಕ್ಕೆ ಲಭಿಸಿದೆ. ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ ಬೇರೆ ದೇಶದ್ದಾದರೂ ಎರಡೂ ಇರಾನ್‌ಸುತ್ತಮುತ್ತಲಿನ ದೇಶಗಳ ಕುರಿತ ಕಥಾವಸ್ತುವಾಗಿದೆ.

    ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಂಗ್ಲಾದೇಶದ ಮಕ್ಸುದ್‌ ಹೊಸೇನ್‌ ನಿರ್ದೇಶಿಸಿದ ಸಾಬಾ ಚಿತ್ರ ಗಳಿಸಿದೆ. ಈ ವಿಭಾಗದಲ್ಲಿ ಫಾಸಿಲ್‌ ಮುಹಮ್ಮದ್‌ ನಿರ್ದೇಶನದ ಮಲಯಾಳಂ ಚಿತ್ರ ಫೆಮಿಂಚಿ ಫಾತಿಮಾ ಹಾಗೂ ಚಿತ್ರೋತ್ಸವದ ಉದ್ಘಾಟನಾ ಚಿತ್ರ ವಿನೋದ್‌ ಕಪ್ರಿಯವರ ಪೈರ್‌ ಚಿತ್ರಕ್ಕೆ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಲಭಿಸಿದೆ.

    ಚಿತ್ರಭಾರತಿ

    ಭಾರತೀಯ ಸಿನಿಮಾಗಳ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯು ಅರಣ್ಯ ಸಹಾಯ್‌ ನಿರ್ದೇಶನದ ಹೂಮನ್ಸ್‌ ಇನ್‌ ದಿ ಲೂಪ್‌ ಚಿತ್ರ ಗೆದ್ದುಕೊಂಡಿದೆ. ಹಿಂದಿ ಚಿತ್ರ ಇದಾಗಿದ್ದು, ಮನುಷ್ಯ ಹಾಗು ಎಐ ನಡುವಿನ ಸಂಗತಿಯನ್ನು ಚರ್ಚಿಸುವುದಾಗಿದೆ. ಎರಡನೇ ಅತ್ಯುತ್ತಮ ಚಿತ್ರ ಮಲಯಾಳಂ ನ ಅರ್ಫಜ್‌ ಅಯೂಬ್‌ ನಿರ್ದೇಶನದ ಲೆವೆಲ್‌ ಕ್ರಾಸ್‌ ಪಡೆದರೆ, ಮೂರನೇ ಪ್ರಶಸ್ತಿಯನ್ನು ಮಘಾಹಿ ಭಾಷೆಯ ಅಭಿಲಾಷ್‌ ಶರ್ಮ ನಿರ್ದೇಶಿಸಿ ನಿರ್ಮಿಸಿರುವ ಸ್ವಾಹಾ ಚಿತ್ರ ಪಡೆದಿದೆ. ಫ್ರಿಫೆಸ್ಕಿ ಪ್ರಶಸ್ತಿಯೂ ಹೂಮನ್ಸ್‌ ಇನ್‌ ದಿ ಲೂಪ್‌ ಚಿತ್ರಕ್ಕೆ ಲಭಿಸಿದೆ.

    ಚಿತ್ರೋತ್ಸವದಲ್ಲಿ ನೀಡಲಾಗುವ ಜೀವಿತಾವಧಿ ಪುರಸ್ಕಾರ ನಟಿ ಶಬಾನಾ ಅಜ್ಮಿಯವರಿಗೆ ನೀಡಿ ಅಭಿನಂದಿಸಲಾಗಿದೆ.

    Latest Posts

    spot_imgspot_img

    Don't Miss