Friday, March 21, 2025
spot_img
More

    Latest Posts

    ಮಾಮಿ ಚಿತ್ರೋತ್ಸವ: ಘಟಶ್ರಾದ್ಧ,ಮಾಯಾ ಮೃಗ ಸೇರಿ ನಾಲ್ಕು ಸಿನಿಮಾಗಳ ಅಪರೂಪದ ಪ್ರದರ್ಶನ

    ಶನಿವಾರದಿಂದ (ಅ. 19) ಆರಂಭವಾಗುತ್ತಿರುವ ಮುಂಬಯಿ ಸಿನಿಮೋತ್ಸವ (ಮಾಮಿ) ದಲ್ಲಿ ಈ ಬಾರಿ ಭಾರತೀಯ ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿಯವರ ಘಟಶ್ರಾದ್ಧ ಸೇರಿದಂತೆ ನಾಲ್ಕು ಕ್ಲಾಸಿಕ್ಸ್‌ ರೀಸ್ಟೋರ್ಡ್‌ ಕ್ಲಾಸಿಕ್ಸ್‌ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

    1977 ರಲ್ಲಿ ಗಿರೀಶ್‌ ಕಾಸರವಳ್ಳಿ ನಿರ್ದೇಶಿಸಿದ ಚೊಚ್ಚಲ ಸಿನಿಮಾ ಘಟಶ್ರಾದ್ಧ. ಅದನ್ನುಇತ್ತೀಚೆಗಷ್ಟೇ ಪುನರ್‌ ರೂಪಿಸ(ರೀಸ್ಟೋರ್ಡ್) ಲಾಗಿತ್ತು. ಈ ಪುನರ್‌ ರೂಪಿತ ಪ್ರತಿಯನ್ನು ಮೊದಲ ಬಾರಿಗೆ ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ಬಳಿಕ ಶ್ರೀಲಂಕಾದ ಜಾಫ್ನಾ ಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿತ್ತು. ಈಗ ಮುಂಬಯಿ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಅಣಿಯಾಗಿದೆ. ಅಕ್ಟೋಬರ್‌ 20 ರಂದು ಜುಹೂ ಪಿವಿಆರ್‌ ಡೈನಾಮಿಕ್ಸ್‌ ಮಾಲ್‌ ನ 5 ನೇ ಸ್ಕ್ರೀನ್‌ ನಲ್ಲಿ 4.15 ಕ್ಕೆ ಪ್ರದರ್ಶನಗೊಂಡರೆ ಅಕ್ಟೋಬರ್‌ 22 ರಂದು ಕೊಲಾಬ ದ ರೀಗಲ್‌ ಸಿನಿಮಾದಲ್ಲಿ ಪ್ರದರ್ಶನವಿರಲಿದೆ.

    ಸಾಹಿತಿ ಡಾ. ಯು. ಆರ್.‌ ಅನಂತಮೂರ್ತಿಯವರ ಕತೆಯನ್ನು ಆಧರಿಸಿ ಗಿರೀಶ ಕಾಸರವಳ್ಳಿಯವರು ಘಟಶ್ರಾದ್ಧ ಸಿನಿಮಾವನ್ನು ನಿರ್ದೇಶಿಸಿದ್ದರು. ಇಂದಿಗೂ ಈ ಸಿನಿಮಾ ಜಗತ್ತಿನ ನೂರು ಅತ್ಯುತ್ತಮ ಚಿತ್ರವಾಗಿ ಪರಿಗಣಿಸಲಾಗಿದೆ. ಈ ಸಿನಿಮಾಕ್ಕೆ ಗಿರೀಶರಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಾಯವಾಗಿದ್ದವು.

    MAMI2024: ಮಾಮಿ ಉತ್ಸವಕ್ಕೆ ಕ್ಷಣಗಣನೆ; ಶನಿವಾರದಿಂದ ಆರು ದಿನಗಳ ಚಿತ್ರ ಹಬ್ಬ

    ಕ್ಲಾಸಿಕ್‌ ನಡಿ ಪ್ರದರ್ಶನಗೊಳ್ಳುತ್ತಿರುವ ಮತ್ತೊಂದು ರೀಸ್ಟೋರ್ಡ್‌ ಸಿನಿಮಾ ಎಂದರೆ ನೀರದ್‌ ಮೊಹಾಪಾತ್ರರ ಮೊದಲ ಹಾಗೂ ಏಕೈಕ ಸಿನಿಮಾ ಮಾಯಾ ಮೃಗ. 1984 ರಲ್ಲಿ ರೂಪುಗೊಂಡ ಒಡಿಯಾ ಭಾಷೆಯ ಸಿನಿಮಾ. ಅವಿಭಕ್ತ ಕುಟುಂಬಗಳ ಪತನವನ್ನು ವಿವರಿಸುವ ಸಿನಿಮಾ. ಈ ಸಿನಿಮಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಸಿದ್ಧಿಯಾಯಿತಲ್ಲದೇ ಕಾನ್‌ ನ ಕ್ರಿಟಿಕ್ಸ್‌ ವೀಕ್‌ ನಲ್ಲಿಯೂ ಆಯ್ಕೆಯಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರುಸ್ಕಾರವನ್ನೂ ಪಡೆಯಿತು. ಅಕ್ಟೋಬರ್‌ 19 ರಂದು ಜುಹೂ ಪಿವಿಆರ್‌ ನ 5 ನೇ ಸ್ಕೀನ್‌ ನಲ್ಲಿ 3.30 ಕ್ಕೆ ಪ್ರದರ್ಶನಗೊಳ್ಳಲಿದೆ.

    ಮತ್ತೊಂದು ಕಲ್ಟ್‌ ಡಾಕ್ಯುಮೆಂಟರಿ ಬರ್ಡನ್‌ ಆಫ್‌ ಡ್ರೀಮ್ಸ್.‌ ಅಮೆಜಾನ್‌ ನ ಪ್ರದೇಶದಲ್ಲಿ ಒಪೆರಾ ಹೌಸ್‌ ನಿರ್ಮಿಸಲು ಪಡುವ ಹರಸಾಹಸವನ್ನು ಬಿಂಬಿಸುತ್ತದೆ. 1982 ರಲ್ಲಿ ವೆರ್ನರ್‌ ಹಜ್ರೊಗ್‌ ರೂಪಿಸಿದ್ದು. ಅಕ್ಟೋಬರ್‌ 20 ರಂದು ಜುಹೂ ಡೈನಾಮಿಕ್ಸ್‌ ಮಾಲ್‌ ನಲ್ಲಿ ಪಿವಿಆರ್‌ ನಲ್ಲಿ 1.45 ಕ್ಕೆ ಸ್ಕೀನ್‌ 4 ಹಾಗೂ ಅಕ್ಟೋಬರ್‌ 22 ರಂದು ಸಂಜೆ 4.15 ಕ್ಕೆ ಸ್ಕ್ರೀನ್‌ 1 ರಲ್ಲಿ ಪ್ರದರ್ಶನಗೊಳ್ಳಲಿದೆ.

    IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ

    ನಾಲ್ಕನೆಯ ಸಿನಿಮಾ ಕ್ಯಾಂಪ್‌ ದಿ ತರೊಯಿ. ಸೆನೆಗಲ್‌ ದೇಶದ ಸಿನಿಮಾ. ಒಸ್ಮಾನೆಎ ಸೆಂಬೆನೆ ನಿರ್ದೇಶಿಸಿರುವ ಸಿನಿಮಾ. 35 ಎಂಎಂ ನಲ್ಲಿ ಚಿತ್ರೀಕರೀಸಿದ ಸಿನಿಮಾ. 1988 ರಲ್ಲಿ ವೆನಿಸ್‌ ಚಿತ್ರೋತ್ಸವದಲ್ಲಿ ಈ ಸಿನಿಮಾಕ್ಕೆ ಗ್ರ್ಯಾಂಡ್‌ ಸ್ಪೆಷಲ್‌ ಜೂರಿ ಪ್ರೈಜ್‌ ಸಿಕ್ಕಿತ್ತು. ಅಕ್ಟೋಬರ್‌ 20 ರಂದು ಜುಹೂ ಡೈನಾಮಿಕ್ಸ್‌ ಮಾಲ್‌ ನ ಪಿವಿಆರ್‌ ಸ್ಕ್ರೀನ್‌ 4 ರಲ್ಲಿ 10.15 ಬೆಳಗ್ಗೆ ಹಾಗೂ ಅಕ್ಟೋಬರ್‌ 22 ರಂದು ಸ್ಕ್ರೀನ್‌ 1 ರಲ್ಲಿ 9.30 ರಾತ್ರಿ ಪ್ರದರ್ಶನಗೊಳ್ಳಲಿದೆ. ಇವೆಲ್ಲವೂ ರೀಸ್ಟೋರ್ಡ್‌ ಆಗಿರುವ ಸಿನಿಮಾಗಳಾಗಿದ್ದು ಅಂತಾರಾಷ್ಟ್ರೀಯ ನೆಲೆಯಲ್ಲಿ ಸಾಕಷ್ಟು ಪ್ರಸಿದ್ಧಿ ಹಾಗೂ ಚರ್ಚೆಗೆ ಒಳಗಾದ ಸಿನಿಮಾಗಳು.

    ಮಾಮಿ ಚಿತ್ರೋತ್ಸವ ಅಕ್ಟೋಬರ್‌ 19 ರಿಂದ 24 ರವರೆಗೆ ನಡೆಯಲಿದೆ.

    Latest Posts

    spot_imgspot_img

    Don't Miss