ಕೋಲ್ಕತ್ತಾ: 30 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ಇಂದು (ಬುಧವಾರ-ಡಿ.4) ಸಂಜೆ 4 ಕ್ಕೆ ಉದ್ಘಾಟನೆಗೊಳ್ಳುವ ಚಿತ್ರೋತ್ಗವ ಡಿ.11 ರವರೆಗೆ ನಡೆಯಲಿದೆ. ಪ್ರಖ್ಯಾತ ನಿರ್ದೇಶಕ ತಪನ್ ಸಿನ್ಹಾ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಚಿತ್ರೋತ್ಸವವನ್ನು ಅವರ ಸ್ಮರಣೆಗೆ ಅರ್ಪಿಸಲಾಗುತ್ತಿದೆ. ತಪನ್ ಸಿನ್ಹಾರ ಗಲ್ಪೊ ಹೊಲಿಒ ಸೊಟ್ಟಿ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗುತ್ತಿದೆ.
ಇಡೀ ಚಿತ್ರೋತ್ಸವದಲ್ಲಿ 41 ದೇಶಗಳ 175 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಭಾರತೀಯ ವಿಭಾಗದ ವಿವಿಧ ಚಿತ್ರಗಳೂ ಸೇರಿದಂತೆ ಒಟ್ಟು 290 ಕ್ಕೂ ಹೆಚ್ಚು ಚಲನಚಿತ್ರಗಳು 20 ಚಿತ್ರ ಮಂದಿರಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿವೆ.
ಈ ವರ್ಷ ಫ್ರಾನ್ಸ್ ದೇಶವನ್ನು ಕೇಂದ್ರೀಕರಿಸಿದ್ದು, ಅದಕ್ಕೆ ಪ್ರತ್ಯೇಕ ವಿಭಾಗ ರೂಪಿಸಲಾಗಿದೆ. ಇದರಲ್ಲಿ ಸಮಕಾಲೀನ ಫ್ರೆಂಚ್ ಭಾಷೆಯ ನಿರ್ದೇಶಕಿಯರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಕೆರೋಲಿನ್ ವಿನಲ್, ಸೆಲಿನಿ ರೌಜೆತ್, ಎಲಿಸಿ ಅಜೆಂಬರ್ಜರ್ ಮುಂತಾದವರ ಇತ್ತೀಚಿನ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಸಿನಿಪ್ರಿಯರಿಗಿದೆ. ಇದರೊಂದಿಗೆ ಫ್ರೆಂಚ್ ನ ಕ್ಲಾಸಿಕ್ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತಿದೆ. ಒಟ್ಟು 21 ಚಿತ್ರಗಳು ಪ್ರದರ್ಶಿತವಾಗಲಿವೆ.
ಯೋಗರಾಜರ ಮನದ ಕಡಲು ; ಪ್ಯಾನ್ ಇಂಡಿಯಾವಲ್ಲ, ಕನ್ನಡ ಸಿನಿಮಾ
ಚಿತ್ರಗಳ ಪ್ರದರ್ಶನ ಜತೆಗೆ ಸಂವಾದಗಳನ್ನೂ ಹಮ್ಮಿಕೊಳ್ಳಲಾಗಿದೆ. ನಟಿ ವಿದ್ಯಾಬಾಲನ್ ಸಹ ಒಂದು ಸಂವಾದದಲ್ಲಿ ಪಾಲ್ಗೊಳ್ಳುವರು. ಸಮಕಾಲೀನ ಸಿನಿಮಾ ಸಂಗತಿಗಳ ಕುರಿತು ವಿಚಾರ ಸಂಕಿರಣಗಳನ್ನೂ ಏರ್ಪಡಿಸಲಾಗಿದೆ. ಸತ್ಯಜಿತ್ ರೇ ಸ್ಮಾರಕ ಉಪನ್ಯಾಸವನ್ನು ನಿರ್ದೇಶಕ ಆರ್. ಬಾಲ್ಕಿ ನೀಡಲಿದ್ದಾರೆ.
ಸಿನಿಮ ಉತ್ಸವದ ನಿರ್ದೇಶಕ ಗೌತಮ್ ಘೋಷ್ ಅವರ ಪ್ರಕಾರ, ಫ್ರೆಂಚ್ ನ ಯುವ ನಿರ್ದೇಶಕಿಯರನ್ನು ಈ ಉತ್ಸವದಲ್ಲಿ ಕೇಂದ್ರೀಕರಿಸಲಾಗಿದೆ. ಅವರ ಪ್ರಸ್ತುತಿಯನ್ನು ನೋಡುವುದು ಮುಖ್ಯವಾದುದು ʼ ಎಂದಿದ್ದಾರೆ.
Rishabh: ಕಾಂತಾರದ ರಿಷಭ್ ರನ್ನು ಶಿವಾಜಿಯಾಗಿ ಕಾಣಲು ಮೂರು ವರ್ಷ ಕಾಯಬೇಕು !
ವಿಶ್ವ ಸಿನಿಮಾವಲ್ಲದೇ ಅಂತಾರಾಷ್ಟ್ರೀಯ ಸಿನಿಮಾ, ಭಾರತೀಯ ಸಿನಿಮಾ, ಬಂಗಾಳಿ ಪನೋರಮಾ, ಕಥೇತರ, ಏಷ್ಯಾ, ಸ್ಮರಣೆ- ಹೀಗೆ ಹಲವಾರು ವಿಭಾಗಗಳಿವೆ. ಉತ್ಪಲೇಂದು ಚಕ್ರವರ್ತಿ ಹಾಗೂ ಮನೋಜ್ ಮಿತ್ರರ ಸ್ಮರಣೆಯಲ್ಲಿ ಕೆಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ವಿಶೇಷವೆಂದರೆ ಕೊಂಸ್ಟ್ಯಾಟಿನ್ ಬೊಜನೊವ್ ನಿರ್ದೇಶನದ ದಿ ಶೇಮ್ ಲೆಸ್ ಇಲ್ಲಿ ಪ್ರದರ್ಶಿತವಾಗುತ್ತಿದೆ. ಕೋಲ್ಕತ್ತಾದ ಅನಸೂಯಾ ಗುಪ್ತ ಈ ಚಿತ್ರದ ನಟನೆಗಾಗಿ ಕಾನ್ ನಲ್ಲಿ ಪ್ರಶಸ್ತಿ ಗಳಿಸಿದ್ದರು.