Sunday, December 22, 2024
spot_img
More

    Latest Posts

    MAMI2024: ಮಾಮಿ ಉತ್ಸವಕ್ಕೆ ಕ್ಷಣಗಣನೆ; ಶನಿವಾರದಿಂದ ಆರು ದಿನಗಳ ಚಿತ್ರ ಹಬ್ಬ

    ಮುಂಬಯಿ ಚಲನಚಿತ್ರೋತ್ಸವ ಮಾಮಿ () 2024 ರ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಅ. 19 ರ ಶನಿವಾರದಿಂದ ಅ. 24 ರವರೆಗೆ ಮುಂಬಯಿನಲ್ಲಿ ಚಿತ್ರೋತ್ಸವ ನಡೆಯಲು ಸಂಪೂರ್ಣ ಸಿದ್ಧತೆ ಮುಗಿದಿದೆ.

    ಈ ಬಾರಿಯ ಚಿತ್ರೋತ್ಸವದ ಉದ್ಘಾಟನಾ ಚಿತ್ರ ಹಾಗೂ ಸಮಾರೋಪ ಚಿತ್ರಗಳೆರಡೂ ಈ ಬಾರಿಯ ಕಾನ್‌ ಚಿತ್ರೋತ್ಸವದಲ್ಲಿ ಸದ್ದು ಮಾಡಿದ ಹಾಗೂ ಪ್ರಶಸ್ತಿ ಪಡೆದ ಚಿತ್ರಗಳು.

    All We Imagine as Light
    All We Imagine as Light

    ಉದ್ಘಾಟನಾ ಚಿತ್ರವಾಗಿ ಕಾನ್‌ ಗೆ ಹಲವಾರು ವರ್ಷದ ಬಳಿಕ ಪ್ರಧಾನ ಪ್ರಶಸ್ತಿಗೆ ಸೆಣಸಿದ ಭಾರತೀಯ ಚಿತ್ರ ಪಾಯಲ್‌ ಕಪಾಡಿಯಾ ಅವರ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಚಿತ್ರ ಪ್ರದರ್ಶನಗೊಳ್ಳಲಿದೆ. ಸಮಾರೋಪ ಚಿತ್ರವಾಗಿ ಕಾನ್‌ ಚಿತ್ರೋತ್ಸವದಲ್ಲಿ ಕಾನ್‌ ನ ಪಾಮೆದೋರ್‌ ಪ್ರಶಸ್ತಿ ಪಡೆದ ಸೀನ್‌ ಬೇಕರ್‌ ರ ಅನೋರಾ ಚಿತ್ರ ಪ್ರದರ್ಶನಗೊಳ್ಳಲಿದೆ. 138 ನಿಮಿಷಗಳ ಈ ಚಿತ್ರ ದಕ್ಷಿಣ ಏಷ್ಯಾದ ಪ್ರೀಮಿಯರ್‌ ಆಗಿಯೂ ಇಲ್ಲಿ ಪ್ರದರ್ಶನಗೊಳ್ಳಲಿದೆ.

    ಸೌತ್‌ ಏಷ್ಯಾ ಸಿನಿಮಾಗಳ ಸ್ಪರ್ಧೆಯಲ್ಲಿ 11 ಚಿತ್ರಗಳು ಪುರಸ್ಕಾರಕ್ಕಾಗಿ ಸೆಣಸುತ್ತಿವೆ. ಭಾರತವಲ್ಲದೇ ನೇಪಾಳ, ಶ್ರೀಲಂಕಾ ಮತ್ತಿತರ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಿನಿಮಾಗಳು ಸ್ಪರ್ಧಿಸಿವೆ.

    ಬಹಳ ವಿಶೇಷವಾಗಿ ಇಬ್ಬರು ನಟಿಯರ ಮಾಸ್ಟರ್‌ ಕ್ಲಾಸಸ್‌ ಗಳು ಆಯೋಜಿತವಾಗಿವೆ. ಶಬನಾ ಅಜ್ಮಿ ಮತ್ತು ವಿದ್ಯಾ ಬಾಲನ್‌ ತಮ್ಮ ನಟನೆಯ ಕೌಶಲ ಗಳ ಕುರಿತು ಮಾತನಾಡುವರು.

    MAMI: ಮಾಮಿ ವೇದಿಕೆ ಸಜ್ಜು; ಅಕ್ಟೋಬರ್‌ 19-24 ದಕ್ಷಿಣ ಏಷ್ಯಾದ ಪ್ರಮುಖ ಸಿನಿಮೋತ್ಸವ

    ಇದಲ್ಲದೇ ಫೋಕಸ್‌ ಸೌತ್‌ ಏಷ್ಯಾದಲ್ಲಿ 23 ಚಿತ್ರಗಳು ಪ್ರದರ್ಶನಕ್ಕೆ ಸಜ್ಜಾಗಿವೆ. ಜಾಗತಿಕ ಸಿನಿಮಾ ವಿಭಾಗದಲ್ಲಿ ದಿ ಸಬ್‌ ಸ್ಟ್ಯಾನ್ಸ್‌, ದಿ ವಿಲೇಜ್‌ ನೆಕ್ಟ್ಸ್‌ ಟು ಪ್ಯಾರಡೈಸ್‌, ವೈಲ್ಡ್‌ ಡೈಮಂಡ್‌, ದಿ ರೂಮ್‌ ನೆಕ್ಟ್ಸ್‌ ಡೋರ್‌, ಹಾರ್ವೆಸ್ಟ್‌ ಚಿತ್ರವೂ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶಿತವಾಗುತ್ತಿವೆ.

    ನಟಿ ಶಬನಾ ಅಜ್ಮಿ ತಮ್ಮ ಚಿತ್ರರಂಗದ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿಈ ಸಂದರ್ಭವನ್ನು ಸ್ಮರಣೀಯಗೊಳಿಸಲು ಶಬನಾ ಅಜ್ಮಿಯವರ ಅರ್ಥ್‌ ಸಿನಿಮಾ ವಿಶೇಷ ಪ್ರದರ್ಶನವಾಗಿ ಪ್ರದರ್ಶನಗೊಳ್ಳುತ್ತಿದೆ.

    ವಿಶೇಷ ವಿಭಾಗದಂತೆ ಕಂಗೊಳಿಸುತ್ತಿರುವುದು ಕಿರುಚಿತ್ರಗಳದ್ದು. ಮುಂಬಯಿ ಡೈಮೆನ್ಸನ್‌ ಎನ್ನುವ ವಿಭಾಗದಲ್ಲಿ ಯುವ ಸಿನಿಮಾ ಕರ್ತೃರು ನಿರ್ಮಿಸಿದ 12 ಸಿನಿಮಾಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ.

    Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !

    2016 ರಿಂದ ಆರಂಭವಾದ ಕಿರುಚಿತ್ರಗಳ ಸ್ಪರ್ಧೆ ಈ ಬಾರಿಯೂ ಇದ್ದು, 12 ಚಿತ್ರಗಳು ಸ್ಪರ್ಧೆಯಲ್ಲಿವೆ. ರೀಸ್ಟೋರ್ಡ್‌ ಕ್ಲಾಸಿಕ್ಸ್‌ ನಲ್ಲಿ ಗಿರೀಶ್‌ ಕಾಸರವಳ್ಳಿಯವರ ಘಟಶ್ರಾದ್ಧ ಸೇರಿದಂತೆ ನಾಲ್ಕು ಚಿತ್ರಗಳು ಪ್ರದರ್ಶನವಾಗುತ್ತಿವೆ. ಕುಮಾರ್‌ ಸಾಹ್ನಿಯವರ ಶ್ರದ್ಧಾಂಜಲಿಗೆ ತರಂಗ್‌ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

    ಚಿತ್ರರಂಗದ ವಾಣಿಜ್ಯ ಕಾರ್ಯಕ್ರಮಗಳಡಿ ಹಲವಾರು ವೈವಿಧ್ಯಗಳನ್ನು ಆಯೋಜಿಸಲಾಗಿದೆ.

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]