ಕಠ್ಮಂಡು: ನೇಪಾಳ ಚಿತ್ರೋತ್ಸವ ಅದ್ಧೂರಿಯಿಂದ ನಡೆಯಿತು. ಮಾ. 20 ರಿಂದ 24 ರವರೆಗೆ ನಡೆದ ಚಿತ್ರೋತ್ಸವದಲ್ಲಿ ಸಿನಿಮಾಸಕ್ತರಿಗೆ 40 ದೇಶಗಳ 80 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶಿತವಾದವು.

ಎಂಟನೇ ಚಿತ್ರೋತ್ಸವದಲ್ಲೂ ಸಾಕ್ಷ್ಯಚಿತ್ರ, ಕಥಾ ಚಿತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಇತ್ತು. ಅಂತಿಮವಾಗಿ ತೀರ್ಪುಗಾರರು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದರು. ಆ ಚಿತ್ರಗಳ ತಂಡಕ್ಕೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪುರಸ್ಕೃತರು –ಅಂತಾರಾಷ್ಟ್ರೀಯ ವಿಭಾಗ
ಅತ್ಯುತ್ತಮ ಕಥಾಚಿತ್ರ – ಶಂಬಾಲ, ನಿರ್ದೇಶನ – ಮಿನ್ ಬಹಾದೂರ್ ಭಮ್, ನೇಪಾಳ

ಕಿರುಚಿತ್ರ – ಕೂರಾ ಸಾನಾ- ಲೂಸಿಯಾ ಜಿ. ರೊಮೆರೊ, ಸ್ಪೇನ್.
ಸಾಕ್ಷ್ಯ ಚಿತ್ರ – ಆನ್ ಮೆಲ್ಟಿಂಗ್ ಸ್ನೋ – ಮೊಯಿತಾಬ ಬಹಾದೊರಿ, ಬೆಲ್ಜಿಯಂ.
ಎಐ ಸಿನಿಮಾ – ದಿ ಅಬಿಸ್- ಆಂಡ್ರೆಸ್ ಅಲೊ, ಅರ್ಜೆಂಟೈನಾ

ರಾಷ್ಟ್ರೀಯ ವಿಭಾಗ
ಅತ್ಯುತ್ತಮ ಕಥಾ ಚಿತ್ರ – ಸತಿದೇವಿ-ಲಕ್ಷ್ಮಣ್ ಸುಬೆದಿ
ಕಿರುಚಿತ್ರ– ದಿ ವಿಟ್ನೆಸ್ ಟ್ರೀ, ನಿರಂಜನ್ ರಾಜ್ ಬೆತ್ವಾಲ್
ಸಾಕ್ಷ್ಯಚಿತ್ರ – ಗರ್ಲ್ಸ್ ರೀ ರೈಟಿಂಗ್ ಡೆಸ್ಟಿನಿ-ಲಾವಾ ಪ್ಯಾಕುರೆಲ್

ರಾಷ್ಟ್ರೀಯ ಸಾಕ್ಷ್ಯಚಿತ್ರ
ಅತ್ಯುತ್ತಮ ಸಾಕ್ಷ್ಯಚಿತ್ರ – ದೇವಿ- ಸುಬೀನಾ ಶ್ರೇಷ್ಠ, ನೇಪಾಳ

ಕಿರುಚಿತ್ರ – ದಿ ವಿಟ್ನೆಸ್ ಟ್ರೀ
ರಾಷ್ಟ್ರೀಯ ಕಥಾ ಚಿತ್ರ – ಕ್ರೌಲಿಂಗ್ ಕ್ರೌಸ್-ಅಂಖಾ, ಝಾನ್ ಯೊಂಜಾನ್, ನೇಪಾಳ
ವಿಶೇಷ ಪ್ರಶಸ್ತಿ
ರುಕ್ಮಿಣಿ-ನಿಲೆ ಪ್ರಶಾಂತ್ ರಾಜೆ, ಭಾರತ.
ವ್ಯಕ್ತಿ ಸಾಧನೆ ಪ್ರಶಸ್ತಿ

ಅತ್ಯುತ್ತಮ ನಿರ್ದೇಶಕ – ದಿನೇಶ್ ರಾವತ್( ಪೂಜಾರ್ ಸರ್ಕಿ)
ಚಿತ್ರಕಥೆ – ಝಾನ್ ಯೊಂಜಾನ್(ಕ್ರೌಲಿಂಗ್ ಕ್ರೌಸ್ – ಅಂಖಾ)

ಛಾಯಾಗ್ರಹಣ – ರಾಜೇಶ್ ಶ್ರೇಷ್‌ಠ (ಪೂಜಾರ್ ಸರ್ಕಿ)
ಅತ್ಯುತ್ತಮ ನಟ – ಆರ್ ಕೆ ಮೆಹತಾ (ಕ್ರೌಲಿಂಗ್ ಕ್ರೌಸ್-ಅಂಖಾ)
ಅತ್ಯುತ್ತಮ ನಟಿ – ಅಂಜನಾ ಬರೈಲಿ (ಪೂಜಾರ್ ಸರ್ಕಿ)