ಪುಣೆ ಅಂತಾರಾಷ್ಟ್ರೀಯ ಸಿನಿಮೋತ್ಸವ (PIFF) ದ 23 ನೇ ಆವೃತ್ತಿ ಅನಿವಾರ್ಯ ಕಾರಣಗಳಿಂದ ಫೆಬ್ರವರಿಗೆ ಮುಂದೂಡಲಾಗಿದೆ.
ಈ ಹಿಂದೆ ಘೋಷಿಸಿದಂತೆ ಜನವರಿ 16 ರಿಂದ ಚಿತ್ರೋತ್ಸವ ಆರಂಭವಾಗಬೇಕಿತ್ತು. ಆದರೆ ಆಯೋಜಕರ ಸಮಿತಿ ಈ ಸಂಬಂಧ ಹೊಸ ಮಾಹಿತಿ ನೀಡಿದ್ದು, ಚಿತ್ರೋತ್ಸವದ ಸಿದ್ಧತೆ ಭರದಿಂದ ನಡೆಯುತ್ತಿದೆ. ಚಿತ್ರೋತ್ಸವ ಜನವರಿ 16 ರ ಬದಲಾಗಿ ಫೆಬ್ರವರಿ 13 ಕ್ಕೆ ಪ್ರಾರಂಭವಾಗಲಿದೆ. ಫೆಬ್ರವರಿ 20 ರಂದು ಸಮಾರೋಪಗೊಳ್ಳಲಿದೆ.
ಸಿನಿಮೋತ್ಸವದಲ್ಲಿ ಭಾಗವಹಿಸುವ ಉತ್ಸಾಹಿಗಳು ನೋಂದಣಿ ಮಾಡಿಕೊಳ್ಳಬೇಕಿದೆ. ಜನವರಿ 15ರಿಂದ ಪ್ರತಿನಿಧಿಗಳ ನೋಂದಣಿ ಆರಂಭವಾಗಲಿದೆ. ಪ್ರತಿನಿಧಿ ಶುಲ್ಕ 800 ರೂ. ಗಳೆಂದು ನಿಗದಿಪಡಿಸಲಾಗಿದೆ. ಮಾಹಿತಿ ಇಲ್ಲಿ ಲಭ್ಯ.
Train Drivers Dairy: ಸಾಮಾನ್ಯ ಕಥೆಯ ಅಸಾಮಾನ್ಯ ಚಿತ್ರಗಳು
ಸಮಿತಿಯು ಈಗಾಗಲೇ ವಿಶ್ವ ಸಿನಿಮಾದ ಸ್ಪರ್ಧಾ ವಿಭಾಗಕ್ಕೆ ನಾಮನಿರ್ದೇಶನಗೊಂಡ ಸಿನಿಮಾಗಳ ಹೆಸರನ್ನು ಪ್ರಕಟಿಸಿದೆ. ಒಂದು ಭಾರತೀಯ ಚಿತ್ರವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ 14 ಸಿನಿಮಾಗಳು ಈ ಬಾರಿ ಪ್ರಶಸ್ತಿಗೆ ಸೆಣಸುತ್ತಿವೆ.
BigBoss:2025-ಈಗ ಸಿನಿಮಾಕ್ಕೆ ಮರಳಿ ಬರುವ ಸಮಯ !
ಮೈಸನ್ ಅಲಿ ನಿರ್ದೇಶಿಸಿರುವ ಟಿಬೆಟ್ ಭಾಷೆಯಲ್ಲಿರುವ ʼದಿ ರಿಟ್ರೀಟ್ ದಿ ರಿಟ್ರೀಟ್ʼ ಸಿನಿಮಾ ಪ್ರದರ್ಶನಗೊಂಡರೆ, ಕೊರಿಯನ್ ಚಿತ್ರ ʼಎ ಟ್ರಾವೆಲರ್ಸ್ ನೀಡ್ಸ್ʼ, ಜಾರ್ಜಿಯಾದ ಏಪ್ರಿಲ್, ನಾರ್ವೆಯ ಆರ್ಮಂದ್, ಐವೊರಿ ಕೋಸ್ಟ್ ನ ಬ್ಲ್ಯಾಕ್ ಟೀ, ಕೆನಡಾದ ಡಾರ್ಕೆಸ್ಟ್ ಮಿರಿಯಾಮ್, ಜರ್ಮನಿಯ ಎಲೆಕ್ಟ್ರಿಕ್ ಫೀಲ್ಡ್ಸ್, ಪೋರ್ಚುಗೀಸ್ ನ ಗ್ರ್ಯಾಂಡ್ ಟೂರ್, ಎಕುಡೇರ್ ನ ಆನ್ ದಿ ಇನವೆನ್ಸನ್ ಆಫ್ ಸ್ಪೀಸಿಸ್, ನಾರ್ವೆಯ ಸೆಕ್ಸ್, ಚೀನಾದ ಸಮ್ ರೈನ್ ಮಸ್ಟ್ ಫಾಲ್, ರೊಮೇನಿಯಾದ ಥ್ರೀ ಕಿಲೋಮೀಟರ್ಸ್ ಟು ದಿ ಎಂಡ್ ಆಫ್ ದಿ ವರ್ಲ್ಡ, ಗ್ರೀಕ್ ನ ಟು ಎ ಲ್ಯಾಂಡ್ ಅನ್ ನೋನ್, ಉಕ್ರೇನಿಯಾದ ಅಂಡರ್ ದಿ ವಾಲ್ಕಾನೊ ಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ.
ಇದರಲ್ಲಿ ಆಯ್ಕೆಯಾಗುವ ಚಿತ್ರಕ್ಕೆ ಪ್ರಭಾತ್ ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಹತ್ತು ಲಕ್ಷ ರೂ. ನಗದು, ಪಾರಿತೋಷಕವನ್ನು ಒಳಗೊಂಡಿರುತ್ತದೆ. ಬಳಿಕ ಮರಾಠಿ ಸಿನಿಮಾಗಳಿಗೆ ಸಂತ ತುಕಾರಾಂ ಅತ್ಯುತ್ತಮ ಅಂತಾರಾಷ್ಟ್ರೀಯ ಮರಾಠಿ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ. ಇದು 5 ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿರುತ್ತದೆ. ಇದಲ್ಲದೇ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನೂ ನೀಡಲಾಗುತ್ತದೆ.
NIFF : ಡಿ. 31 ರೊಳಗೆ ನೇಪಾಳ ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಕಳುಹಿಸಿ
ಡಾ. ಜಬ್ಬಾರ್ ಪಟೇಲ್ ಚಿತ್ರೋತ್ಸವದ ನಿರ್ದೇಶಕರಾಗಿದ್ದು, ಈ ಹಿಂದೆ ಜನವರಿ 16 ರಿಂದ 23 ರವರೆಗೆ ನಿಗದಿಪಡಿಸಲಾಗಿತ್ತು.
ಟ್ರಿ ಫೋಕಸ್, ಥೀಮ್ ಸೆಕ್ಷನ್, ರೆಟ್ರಾಸ್ಪೆಕ್ಟಿವ್, ಭಾರತೀಯ ಸಿನಿಮಾ, ಟ್ರಿಬ್ಯೂಟ್, ವಿದ್ಯಾರ್ಥಿಗಳ ಅನಿಮೇಷನ್ ಚಿತ್ರಗಳು ಹಾಗೂ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಲಾದ ಚಿತ್ರಗಳನ್ನು ಪ್ರದರ್ಶಿಸಲಾಗುವುದು.ಸಿನಿಮಾ ಕಾರ್ಯಾಗಾರ, ವಿಚಾರ ಸಂಕಿರಣ, ಸಂವಾದವೂ ಇರಲಿದೆ. 2010 ರಲ್ಲಿ ಮಹಾರಾಷ್ಟ್ರ ಸರಕಾರ ಈ ಸಿನಿಮೋತ್ಸವಕ್ಕೆ ಸಹಯೋಗ ನೀಡಿದೆ.