ಪುಣೆ: ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವದ ನಾಲ್ಕು ದಿನಗಳ ಮುಗಿಯುತ್ತಾ ಬಂದಿವೆ. ಉಳಿದಿರುವುದು ಇನ್ನು ನಾಲ್ಕು ದಿನಗಳಷ್ಟೇ. ಆಗಲೇ ಪುಣೆ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಿದ್ಧತೆ ಆರಂಭವಾಗಿದೆ.
ಪ್ರತಿ ವರ್ಷ ಸಾಮಾನ್ಯವಾಗಿ ಜನವರಿ ಎರಡನೇ ವಾರಾಂತ್ಯದಿಂದ ಮೂರನೇ ವಾರಾಂತ್ಯದವರೆಗೆ ಪುಣೆಯ ಚಿತ್ರೋತ್ಸವ ನಡೆಯುತ್ತದೆ. ಅದರಂತೆಯೇ ಈ ಬಾರಿಯೂ ಜನವರಿ 16 ರಿಂದ 23 ರವರೆಗೆ ಪುಣೆಯಲ್ಲಿ ನಡೆಯಲಿದೆ.
ಪುಣೆ ಚಿತ್ರೋತ್ಸವ ಆರಂಭವಾಗಿದ್ದು 2002 ರಲ್ಲಿ. 2004 ರಲ್ಲಿ ಕಾರಣಾಂತರಗಳಿಂದ ನಡೆದಿರಲಿಲ್ಲ. ಉಳಿದಂತೆ ಸತತವಾಗಿ ಚಿತ್ರೋತ್ಸವ ನಡೆಸಲಾಗುತ್ತಿದೆ. ಡಾ. ಜಬ್ಬಾರ್ ಪಟೇಲ್ ಚಿತ್ರೋತ್ಸವದ ನಿರ್ದೇಶಕರು.
ಈಗಾಗಲೇ ಚಿತ್ರೋತ್ಸವಕ್ಕೆ ಸಿದ್ಧತೆ ನಡೆದಿದ್ದು. ವಿವಿಧ ವಿಭಾಗಗಳಿಗೆ ಸಿನಿಮಾಗಳನ್ನು ಆಹ್ವಾನಿಸಲಾಗಿತ್ತು. ಅವೆಲ್ಲ ದಿನಾಂಕಗಳು ಮುಗಿದಿದ್ದು, ಈಗ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
NIFF : ಡಿ. 31 ರೊಳಗೆ ನೇಪಾಳ ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಕಳುಹಿಸಿ
ಎನ್ ಎಫ್ ಎಐ, ಐನಾಕ್ಸ್, ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ವಿಶೇಷ ಎನ್ನುವಂತೆ 2020 ರಲ್ಲಿ ನಡೆಸಲಾದ ಚಿತ್ರೋತ್ಸವದಲ್ಲಿ ಚಿತ್ರ ದಿಗ್ಗಜರಾದ ಫೆಡ್ರಿಕ್ ಫೆಲಿನಿ, ಕೈಫಿ ಅಜ್ಮಿ, ಮಜ್ರೂಹ್ ಸುಲ್ತಾನಪುರಿ, ಶಂಶಾದ್ ಬೇಗಂ, ಪಂಡಿತ್ ರವಿಶಂಕರ್ ಅವರ ಜನ್ಮ ಶತಮಾನೋತ್ಸವವನ್ನೂ ಆಚರಿಸಲಾಗಿತ್ತು.
ಈ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧಾ ವಿಭಾಗವಿದೆ. ಅದರಲ್ಲಿ ಆಯ್ಕೆಯಾಗುವ ಚಿತ್ರಕ್ಕೆ ಪ್ರಭಾತ್ ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಹತ್ತು ಲಕ್ಷ ರೂ. ನಗದು, ಪಾರಿತೋಷಕವನ್ನು ಒಳಗೊಂಡಿರುತ್ತದೆ. ಬಳಿಕ ಮರಾಠಿ ಸಿನಿಮಾಗಳಿಗೆ ಸಂತ ತುಕಾರಾಂ ಅತ್ಯುತ್ತಮ ಅಂತಾರಾಷ್ಟ್ರೀಯ ಮರಾಠಿ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ. ಇದು 5 ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿರುತ್ತದೆ. ಇದಲ್ಲದೇ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನೂ ನೀಡಲಾಗುತ್ತದೆ.
Rishabh: ಕಾಂತಾರದ ರಿಷಭ್ ರನ್ನು ಶಿವಾಜಿಯಾಗಿ ಕಾಣಲು ಮೂರು ವರ್ಷ ಕಾಯಬೇಕು !
ಟ್ರಿ ಫೋಕಸ್, ಥೀಮ್ ಸೆಕ್ಷನ್, ರೆಟ್ರಾಸ್ಪೆಕ್ಟಿವ್, ಭಾರತೀಯ ಸಿನಿಮಾ, ಟ್ರಿಬ್ಯೂಟ್, ವಿದ್ಯಾರ್ಥಿಗಳ ಅನಿಮೇಷನ್ ಚಿತ್ರಗಳು ಹಾಗೂ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಲಾದ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಸಿನಿಮಾ ಕಾರ್ಯಾಗಾರ, ವಿಚಾರ ಸಂಕಿರಣ, ಸಂವಾದವೂ ಇರಲಿದೆ. 2010 ರಲ್ಲಿ ಮಹಾರಾಷ್ಟ್ರ ಸರಕಾರ ಈ ಸಿನಿಮೋತ್ಸವಕ್ಕೆ ಮಾನ್ಯತೆ ನೀಡಿ ಸರಕಾರದ ನೆರವನ್ನು ಚಾಚಿದೆ. ಈ ವರ್ಷವೂ ಸಿನಿಮಾಸಕ್ತರು ಅತ್ಯುತ್ತಮ ಸಿನಿಮಾಗಳಿಗೆ ನಿರೀಕ್ಷಿಸುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲ ವಿಭಾಗಗಳ ಸಿನಿಮಾ ವಿವರಗಳು ಲಭ್ಯವಾಗಲಿವೆ.