ನಟ ಗಣೇಶ್ ರುದ್ರ ಆದರೆ ಹೇಗೆ?
ಒಬ್ಬ ನಟ ಯಾವ ಪಾತ್ರ ವಹಿಸಿದರೂ ಸೈ ಎನಿಸಿಕೊಳ್ಳಬೇಕು. ಆಗಲೇ ಅವನು ಮಹಾನಟನಾಗುವುದು. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ರಂಗ ಪ್ರಪಂಚದಲ್ಲೂ ಇವೆ. ಸಿನಿಮಾ ಪ್ರಪಂಚದಲ್ಲೂ ಇವೆ. ಅದಕ್ಕೇ ಹಲವು ಬಾರಿ ಹೇಳುವ ಮಾತಿದೆ. ಕೆಲವರು ಪಾತ್ರ ಹಾಕಿದರೆ ಪಾತ್ರಗಳೇ ಆಗಿ ಬಿಡುತ್ತಾರೆ. ಇನ್ನು ಕೆಲವರು ಪಾತ್ರಗಳು ಹಾಕಿದರೆ ಅವರೇ ಅಗಿ ಬಿಡ್ತಾರೆ !
ಒಳ್ಳೆಯ ನಟನೆ ಎಂಬುದು ಪಾತ್ರವಾಗೋದು, ಪಾತ್ರಗಳಾಗಿ ಉಳಿಯೋದು. ಅವರಾಗಿ ಉಳಿಯೋದಲ್ಲ. ಏನು ಮಾಡುವುದು ? ನಮ್ಮ ಹೀರೋ ಪರಂಪರೆಯಲ್ಲಿ ಈ ಮಾತುಗಳೆಲ್ಲ ಬೇಸರ ತರುವಂಥದ್ದು ಎನ್ನೋಣ. ಯಾಕೆಂದರೆ ನಮ್ಮ ಹೀರೋಗಳಿಗೆ ಎಲ್ಲ ಪಾತ್ರಗಳೂ ಹೀರೋ ಪಾತ್ರಗಳೇ !
New Movie: ಛೂ ಮಂತರ್,ಶರಣರ ಜಾದೂ ನಡೆಯುತ್ತಾ ನೋಡಬೇಕು ಈ ಸಂಕ್ರಾಂತಿಗೆ
ಕಥೆ,ಸನ್ನಿವೇಶ, ಸಂದರ್ಭಕ್ಕಿಂತ ನಮ್ಮ ಹೀರೋ ಇಮೇಜ್ ಗೆ ತಕ್ಕಂತೆ ಅವೆಲ್ಲವೂ ಬದಲಾಗಬೇಕು. ಈ ಸಮಸ್ಯೆ ನಮ್ ಬಾಲಿವುಡ್ಡಿನಲ್ಲೂ ಇದೆ, ಸ್ಯಾಂಡಲ್ ವುಡ್ಡಿನಲ್ಲೂ ಇದೆ, ತೆಲುಗುವುಡ್ ನಲ್ಲಿ ಇನ್ನೂಜಾಸ್ತಿ ಇದೆ, ತಮಿಳು ವುಡ್ ನಲ್ಲೂ ಬೇಕಾದಷ್ಟಿದೆ. ಇದೊಂದು ರೀತಿಯಲ್ಲಿ ಹರಿದು ಹೋಗುವ ನದಿ ನನ್ನ ಮನೆ ಅಂಗಳಕ್ಕೂ ಯಾಕೆ ಬರೋದಿಲ್ಲ ಎಂದು ಒಬ್ಬ ಶ್ರೀಮಂತ ಕೇಳ್ತಿದ್ದನಂತೆ. ಹಾಗೆಯೇ ಇದೂ ಸಹ.
ಇರಲಿ. ಈಗ ಗಣೇಶ್ ಅವರು ರುದ್ರ ಆಗುತ್ತಿರುವುದು. ಪಿನಾಕ ಈ ಹೊಸ ಸಿನಿಮಾದ ಹೆಸರು. ಒಂದು ಪೋಸ್ಟರ್ ಬಂದಾಗ ಗಣೇಶ್ ಕೈಯಲ್ಲಿ ತ್ರಿಶೂಲ, ಬೆನ್ನ ಹಿಂದೆ ತಲೆ ಬುರುಡೆಗಳ ರಾಶಿ, ಕಪಾಲನ ವೇಷದಂತೆ ಕಾಣಿಸಿತು. ಇದನ್ನು ಕಂಡ ಮೇಲೆ ಇದು ಹೊಸ ವೇಷವೇ ಎನಿಸಿದ್ದು ಪಕ್ಕ. ಜತೆಗೆ ಚಿತ್ರತಂಡವೂ ಹೇಳಿದೆ. ಇದು ಗಣೇಶರದ್ದು ಹೊಸ ವೇಷವೇ.
Sandalwood :ಹೊಸ ವರ್ಷ ಮತ್ತಷ್ಟು ಚಿತ್ರ ಬಂದರೆ ಸಾಕೇ? ಒಂದೆರಡಾದರೂ ದಾಖಲೆ ಬೇಡವೇ?
ಪೀಪಲ್ ಮೀಡಿಯಾ ಫ್ಯಾಕ್ಟರಿಯ ಸಿನಿಮಾ ಇದು. ತೆಲುಗಿನ ನಿರ್ಮಾಪಕ ಟಿಜಿ ವಿಶ್ವ ಪ್ರಸಾದರ ಕಂಪೆನಿ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ರೂಪಿಸಿರುವ ಕಂಪೆನಿ. ಕನ್ನಡದ ಕಡೆ ಮುಖ ಮಾಡಿದೆ.
ಈ ಸಿನಿಮಾಕ್ಕೆ ಬಿ. ಧನಂಜಯರದ್ದು ನಿರ್ದೇಶನ. ನೃತ್ಯ ನಿರ್ದೇಶನದ ಮೂಲಕ ಜನಪ್ರಿಯರಾದವರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಕಥೆ ಗಟ್ಟಿಯಾದುದಂತೆ. ಇದು ದಂತ ಕಥೆಯಂತೆ.
PIFF : ಪುಣೆ ಚಿತ್ರೋತ್ಸವ ಫೆಬ್ರವರಿ 13 ಕ್ಕೆ ಮುಂದೂಡಿಕೆ ; ಇಲ್ಲಿವೆ ವಿಶ್ವ ಸಿನಿಮಾಗಳ ಪಟ್ಟಿ
ಮುಂಗಾರು ಮಳೆ, ಕೃಷ್ಣಂ ಪ್ರಣಯ ಸಖಿ ಇತ್ಯಾದಿ ಚಿತ್ರಗಳಲ್ಲಿ ನಟಿಸಿ ಯಶಸ್ಸು ಗಳಿಸಿ ತಂಗಾಳಿಯಂತೆ ಬೀಸಿರುವ ಗಣೇಶ್ ಈಗ ಬಿರುಗಾಳಿಯಂತೆ ಬೀಸುತ್ತಾರೋ ಗೊತ್ತಿಲ್ಲ. ಅದರ ಬಿರುಸು (ವೇಗ) ಎಷ್ಟಿರುತ್ತದೋ ಗೊತ್ತಿಲ್ಲ. ಸ್ಮಶಾನ ರುದ್ರನ ಭೀಕರತೆಯೋ, ಕೈಲಾಸವಾಸ ಗೌರೀಶಂಕರನ ರೀತಿಯೋ ಗೊತ್ತಿಲ್ಲ. ತಾಂಡವ ನೃತ್ಯ, ಡಮರುಗದ ಸದ್ದು ಎಲ್ಲವೂ ಇರಬಹುದು. ಪುಣ್ಯಕ್ಕೆ ಸದ್ಯಕ್ಕೆ ಧನುಸ್ಸು – ಪಿನಾಕ ಕೊಟ್ಟಿದ್ದಾರೆ, ತ್ರಿಶೂಲ ಕೈಯಲ್ಲಿದೆ, ಝಳಪಿಸುತ್ತಾ ಇಲ್ಲ.
ಇದರಲ್ಲಿ ಯಾವ ವೇಷ ಹಾಕೋದು ನಿರ್ದೇಶಕರ ಕೈಯಲ್ಲಿದೆ ಮತ್ತು ವೇಷ ಹಾಕಿಕೊಳ್ಳುವವರ ಕೈಯಲ್ಲಿದೆ. ಆಗಲಿ, ಗಣೇಶರ ಹೊಸ ಅವತಾರ ಬರಲಿ.