ಮುಂಗಾರು ಮಳೆ ಸುರಿದು ಎಷ್ಟು ವರ್ಷವಾಯಿತಲ್ಲವಾ? ಈಗಲೂ ಅದರ ಒಂದೊಂದು ಹನಿ ಹನಿ ಆಗಾಗ ತೊಟ್ಟಿಕ್ಕುತ್ತಲೇ ಇರುತ್ತದೆ. ಮಳೆ ನಿಂತು ಹೋದ ಮೇಲೆ ಹನಿಯೊಂದು..
ಎನ್ನುವ ಹಾಗೆ. ಈಗ ಅದೇ ಜೋಡಿ ಅಂದರೆ ನಿರ್ದೇಶಕ ಯೋಗರಾಜಭಟ್ ಮತ್ತು ನಿರ್ಮಾಪಕ ಇ ಕೃಷ್ಣಪ್ಪ ಮತ್ತೊಂದು ಮುಂಗಾರಿಗೆ ಜೊತೆಯಾಗಿಲ್ಲ. ಬದಲಾಗಿ ಕಡಲು ನಿರ್ಮಿಸಲು ಸೇರಿಕೊಂಡಿದ್ದಾರೆ.
ಇನ್ನೊಂದು ಸಂಗತಿಯೆಂದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಕನ್ನಡ ಸಿನಿಮಾ.
ನಿರ್ಮಾಣ ಹಂತದಲ್ಲಿರುವ ಚಿತ್ರದ ಹೆಸರು ಮನದ ಕಡಲು. ಇದೊಂದು ವಿಭಿನ್ನ ಪ್ರೇಮ ಕಥಾನಕ ಎಂಬ ವಿವರಣೆಯೂ ಚಿತ್ರತಂಡದ್ದಿದೆ.
ನೇಪಾಳದಲ್ಲೂ ಅತಿ ಹೆಚ್ಚು ಗಳಿಕೆ ಪಡೆದ ಐದರಲ್ಲಿಒಂದು ಕನ್ನಡದ ಸಿನಿಮಾ !
ಮನದ ಕಡಲಿನಲ್ಲಿ ನಾಯಕ, ನಾಯಕಿಯರು ಮತ್ತು ಒಂದಿಷ್ಟು ನಟರು ಅದಲು ಬದಲಾಗಿದ್ದಾರೆ. ಇದು ಹೊಸ ಪ್ರೇಮಕಥೆ ಎಂದೂ ಇರಬಹುದು. ಸುಮುಖ ಈ ಚಿತ್ರದ ನಾಯಕ. ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಕಥಾ ನಾಯಕಿಯರು. ರಂಗಾಯಣ ರಘುವಿಗೆ ವಿಶಿಷ್ಟವಾದ ಪಾತ್ರ ಇದೆಯಂತೆ.
ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂಗಾರು ಮಳೆ ಬಳಿಕ ಇಬ್ಬರೂ ಸೇರಿ ಮತ್ತೊಂದು ಚಿತ್ರ ಮಾಡುವ ಆಲೋಚನೆಯಿತ್ತು. ಈಗ ಆ ಕಾಲ ಸನ್ನಿಹಿತವಾಗಿದೆ ಎಂದವರು ಯೋಗರಾಜ ಭಟ್ ಮಾಧ್ಯಮದವರೊಂದಿಗೆ.
ಈ ಚಿತ್ರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣವಾಗಿದೆಯಂತೆ. ವಿಶೇಷವೆಂದರೆ ರಾಜ್ಯದ 12 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಮಹಾರಾಷ್ಟ್ರದ ಮುರುಡ್ ಝಂಜೀರ ಎನ್ನುವಲ್ಲಿ ಸಮುದ್ರದ ಮಧ್ಯೆ ಇರುವ ಕೋಟೆಯಲ್ಲಿ ಚಿತ್ರೀಕರಣವಾಗಿದೆಯಂತೆ. ಈ ಅನುಭವ ವಿಭಿನ್ನವಾದುದು ಎಂದವರು ಭಟ್.
ರಂಗಾಯಣ ರಘು ಅವರದ್ದು ಆದಿವಾಸಿ ಪಾತ್ರ. ಅವರಿಗೆ ತಕ್ಕನಾದ ಹೊಸ ಭಾಷೆ, ವೇಷ ಎಲ್ಲವೂ ಮಾಡಲಾಗಿದೆ.
ಕಥೆ ಚೆನ್ನಾಗಿರಬೇಕು, ಕನ್ನಡಿಗರಿಗೆ ಇಷ್ಟವಾಗುವಂತೆ ಮಾಡಬೇಕ, ಹೊಸ ಪ್ರತಿಭೆಗಳಿಗೂ ಅವಕಾಶ ಕೊಡಬೇಕು-ಮೂರೂ ಸೇರಿದರೆ ಮನದ ಕಡಲು ಎಂದವರು ನಿರ್ಮಾಪಕ ಇ. ಕೃಷ್ಣಪ್ಪ.
Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಭಾಷೆ ಭಾವ ಗೊತ್ತಿರದ ಜಿಮ್ ನಿಂದ ಹೊರಬಂದ ನಟನಲ್ಲಿ ಅಭಿನಯ ಎಲ್ಲಿಂದ ತರುವುದು ಇಂಥದೊಂದು ಪ್ರಶ್ನೆ ರಂಗಾಯಣ ರಘು ಅವರದ್ದು. ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಕನ್ನಡ ಸಿನಿಮಾ. ಎಲ್ಲರೂ ಅಲ್ಲಿಗೆ ಹೋದರೆ ಮನೆ ನೋಡಿಕೊಳ್ಳೋರು ಯಾರು ಎನ್ನುವ ರಘುವಿನವರ ಮಾತಿಗೆ ತಕ್ಕಂತೆ ಮನದ ಕಡಲು ರೂಪಿತವಾಗುತ್ತಿದೆ. ಈ ಚಿತ್ರದ ಸಹ ನಿರ್ಮಾಪಕ ಗಂಗಾಧರ್. ಸಂಗೀತ ನಿರ್ದೇಶನ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ, ಪ್ರತಾಪ್ ರಾವ್ ಎಲ್ಲರೂ ಈ ಚಿತ್ರದ ಬೆಂಬಲಕ್ಕಿದ್ದಾರೆ.
ಮುಂಗಾರು ಸುರಿದು ಹದಿನೆಂಟು ವರ್ಷಗಳಾಯಿತು. ಈಗ ಮಳೆಯ ದಿಕ್ಕು ದಿಸೆಯೇ ಬದಲಾಗಿದೆ. ಅದಕ್ಕೇ ಏನೋ ಈ ಜೋಡಿ ಕಡಲನ್ನು ಹಿಡಿದು ಕೊಂಡಿರುವುದು. ಕನ್ನಡ ಪ್ರೇಕ್ಷರ ಪ್ರೀತಿ ಬತ್ತದಂತೆ ಮಾಡದಿರಲಿ ಈ ಚಿತ್ರ. ಪ್ರೀತಿಯಿಂದ ಕಡಲು ಉಕ್ಕುವಂತಾಗಲಿ, ಕಾದು ನೋಡೋಣ.