Friday, March 21, 2025
spot_img
More

    Latest Posts

    ಬ್ಲೆಸ್ಸಿಯ ಅಡುಜೀವಿತಂ ಸಿನಿಮಾ ಬಿಡುಗಡೆಗೆ ವೇದಿಕೆ ಸಿದ್ಧ

    ಮಲಯಾಳಂ ಭಾಷೆಯ ಚಲನಚಿತ್ರ ನಿರ್ದೇಶಕ ಬ್ಲೆಸ್ಸಿ ನಿರ್ದೇಶಿಸಿರುವ “ಆಡು ಜೀವಿತಂ” ಚಲನಚಿತ್ರ ಮಾರ್ಚ್‌ 28 ರಂದು ತೆರೆ ಕಾಣಲಿದೆ.

    ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಚಿತ್ರ ಕಾರಣಾಂತರಗಳಿಂದ ಮುಂದೂಡಿಕೆ ಆಗಿತ್ತು. ಮೊದಲು ನಿಗದಿಪಡಿಸಿದಂತೆ ಕಳೆದ ವರ್ಷದ ಕಾನ್‌ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶಿತವಾಗಬೇಕಿತ್ತು. ಬಳಿಕ ವೆನಿಸ್‌ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗುವ ಮಾತು ಕೇಳಿಬಂದಿತ್ತು. ಆದರೆ ಅದ್ಯಾವುದೂ ಅಗಿರಲಿಲ್ಲ.

    2024 ರ ಎಪ್ರಿಲ್‌ ನಲ್ಲಿ ಬಿಡುಗಡೆಗೆ ಯೋಚಿಸಿದ್ದ ಚಿತ್ರತಂಡವು ದಿಢೀರನೇ ಮಾರ್ಚ್‌ 28 ಕ್ಕೆ ಬಿಡುಗಡೆ ಮಾಡುತ್ತಿದೆ. ನಟ, ನಿರ್ದೇಶಕ ಪೃಥ್ವಿರಾಜ ಸುಕಮಾರನ್‌ ಪ್ರಧಾನ ಪಾತ್ರದಲ್ಲಿದ್ದು, ಅಮಲಾ ಪೌಲ್‌ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಈ ಸಿನಿಮಾ ಮಲಯಾಳಂ ಅಲ್ಲದೇ ಹಿಂದಿ, ತಮಿಳು, ತೆಲುಗು, ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿದೆ.

    ಸತ್ಯ ಬದುಕಿನ ಕಥೆಯನ್ನು ಆಧರಿಸಿದ ಸಿನಿಮಾ ಇದು. ಲೇಖಕ ಬೆನ್ಯಾಮಿನ್‌ ಅವರು ಬರೆದ ಕಥೆಯನ್ನು ಸಿನಿಮಾಕ್ಕೆ ಆಳವಡಿಸಲಾಗಿದೆ. ಒಬ್ಬ ಮಲಯಾಳಿ ವಲಸೆ ಕಾರ್ಮಿಕನು ಸೌದಿ ಅರೇಬಿಯಾದ ಕುರಿ ಸಾಕಣೆ ಕೇಂದ್ರದಲ್ಲಿ ಸವೆಸುವ ಗುಲಾಮಗಿರಿ ಬದುಕಿನ ಕಥೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ.

    ಚಿತ್ರಕಥೆ ಮತ್ತು ನಿರ್ದೇಶನ ಹೊಣೆ ಬ್ಲೆಸ್ಸಿಯವರದ್ದು. ತಾರಾಗಣದಲ್ಲಿ ಜಿಮ್ಮಿ ಜೀನ್‌ ಲೂಯಿಸ್‌, ರಿಕ್‌ ಆಬೆ, ಕೆಆರ್‌ ಗೋಕುಲ್‌ಮತ್ತಿತರರು ಆಭಿನಯಿಸಿದ್ದಾರೆ. ಎ.ಆರ್.‌ ರೆಹಮಾನ್‌ ಸಂಗೀತವನ್ನು ಒದಗಿಸಿದ್ದರೆ, ಧ್ವನಿ ವಿನ್ಯಾಸ ಹೊಣೆ ರಸೂಲ್‌ ಪೂಕುಟ್ಟಿಯವರದ್ದು.

    ಚಿತ್ರದ ಚಿತ್ರೀಕರಣ ಕೇರಳದ ಕೆಲವು ಭಾಗವಲ್ಲದೇ, ಜೋರ್ಡಾನ್‌, ಸಹರಾ ಮರುಭೂಮಿ, ಆಲ್ಜೀರಿಯಾ ದೇಶಗಳಲ್ಲಿ ನಡೆಸಲಾಗಿದೆ.

    ಕೋವಿಡ್‌ ಗಿಂತ ಮುನ್ನ ಚಿತ್ರೀಕರಣಕ್ಕೆ ತೆರಳಿದ್ದ ಚಿತ್ರತಂಡವು ಕೋವಿಡ್‌ ಸಂದರ್ಭದಲ್ಲಿ ಜೋರ್ಡಾನ್‌ ನಲ್ಲಿ ಕಷ್ಟಕ್ಕೆ ಸಿಲುಕಿಸಿತ್ತು.

     

    Latest Posts

    spot_imgspot_img

    Don't Miss