2024 ರ ಅಸ್ಕರ್ ಪ್ರಶಸ್ತಿ ಪ್ರಕಟವಾಗಿದೆ.
ಬಹುನಿರೀಕ್ಷೆಯಂತೆ ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಚಿತ್ರ ಒಪೆನ್ಹೆಮರ್ (Oppenheimer) ಚಲನಚಿತ್ರವು ಅತ್ಯುತ್ತಮ ಚಿತ್ರವಲ್ಲದೇ ಬಹು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ. ಹಾಗೆಯ ದಿ ಝೋನ್ ಆಫ್ ಇಂಟರೆಸ್ಟ್ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಚಲನಚಿತ್ರ ಪುರಸ್ಕಾರ ಸಂದಾಯವಾಗಿದೆ.
ಅತ್ಯುತ್ತಮ ಚಿತ್ರಕ್ಕಾಗಿ ಒಪೆನ್ಹೆಮರ್ ಅಲ್ಲದೇ ಅಮೆರಿಕನ್ ಫಿಕ್ಷನ್, ಅನಾಟಮಿ ಅಫ್ ಎ ಫಾಲ್, ಬಾರ್ಬಿ, ದಿ ಹೋಲ್ಡೊವರ್ಸ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್, ಮಾಸ್ಟ್ರೊ, ಪಾಸ್ಟ್ ಲಿವ್ಸ್, ಪೂರ್ ಥಿಂಗ್ಸ್, ದಿ ಝೋನ್ ಆಫ್ ಇಂಟರೆಸ್ಟ್ ಚಿತ್ರಗಳು ಸೆಣಸಿದ್ದವು.
ಹಾಗೆಯೇ ಅತ್ಯುತ್ತಮ ನಟ ಪ್ರಶಸ್ತಿಗೆ ಮಾಸ್ಟ್ರೊ ಚಿತ್ರದ ಬ್ರಾಡ್ಲಿ ಕೂಪರ್, ರಸ್ಟಿನ್ ಚಿತ್ರದ ಕೋಲ್ಮನ್ ಡೊಮಿಂಗೊ, ದಿ ಹೋಲ್ಡೊವರ್ಸ್ ನ ಪೌಲ್ ಗೈಮತಿ, ಒಪೆನ್ಹೆಮರ್ ನ ಸಿಲಿಯನ್ ಮರ್ಫಿ ಹಾಗೂ ಅಮೆರಿಕನ್ ಫಿಕ್ಷನ್ ನ ಜೆಫ್ರಿ ರೈಟ್ ಸ್ಪರ್ಧಿಸಿದ್ದರು. ಈ ಪೆಐಕಿ ಒಪೆನ್ಹೆಮರ್ ನ ಸಿಲಿಯನ್ ಮರ್ಫಿ ಪ್ರಶಸ್ತಿಗೆ ಆಯ್ಕೆಯಾದರು.
ಅತ್ಯುತ್ತಮ ನಟಿ ಪುರಸ್ಕಾರಕ್ಕೆ ನ್ಯಾಡ್ ನ ಅನೆತ್ತೆ ಬೆನಿಂಗ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ನ ಲಿಲಿ ಗ್ಲಾಡ್ ಸ್ಟೋನ್, ಅನಾಟಮಿ ಆಫ್ ಅ ಫಾಲ್ ನ ಸಾಂದ್ರಾ ಹೂಲರ್, ಮಾಸ್ಟ್ರೋನ ಕೆರೆ ಮುಲಿಗನ್ ಹಾಗೂ ಪೂರ್ ಥಿಂಗ್ಸ್ ನ ಎಮ್ಮಾಸ್ಟೋನ್ ಸ್ಪರ್ಧಿಸಿದ್ದರು. ಇವರಲ್ಲಿ ಪೂರ್ ಥಿಂಗ್ಸ್ ನ ಎಮ್ಮಾಸ್ಟೋನ್ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ನಿರ್ದೇಶನಕ್ಕಾಗಿ ಅನಾಟಮಿ ಆಫ್ ಎ ಫಾಲ್ ನ ಜಸ್ಟಿನ್ ಟ್ರೈಟ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ನ ಮಾರ್ಟಿನ್ ಸೊರೆಸ್, ಒಪೆನ್ಹೆಮರ್ ನ ಕ್ರಿಸ್ಟೋಫರ್ ಅಲೆನ್, ಪೂರ್ ಥಿಂಗ್ಸ್ ನ ಯೋರ್ಗೊಸ್ ಲತಿಮೋಸ್ ಹಾಗೂ ದಿ ಝೋನ್ ಆಫ್ ಇಂಟರೆಸ್ಟ್ ನ ಜೊನಾಥನ್ ಗ್ಲೇಜರ್ ಸ್ಪರ್ಧಿಸಿದ್ದರು. ಈ ಪೈಕಿ ಕ್ರಿಸ್ಟೋಫರ್ ಅಲೆನ್ ಪ್ರಶಸ್ತಿ ಗೆದ್ದಿದ್ದಾರೆ.
ಇದಲ್ಲದೇ ಅತ್ಯುತ್ತಮ ಅನಿಮೇಷನ್ ಫಿಲ್ಮ್ ಪ್ರಶಸ್ತಿ ದಿ ಬಾಯ್ ಅಂಡ್ ದಿ ಹೆರೊನ್, ಅತತ್ಯುತ್ತಮ ಸಿನೆ ಛಾಯಾಗ್ರಹಣ ಒಪೆನ್ಹೆಮರ್, ಅತ್ಯುತ್ತಮ ಸಾಕ್ಷ್ಯ ಕಥಾಚಿತ್ರ 20 ಡೇಸ್ ಇನ್ ಮಾರಿಯಪೊಲ್, ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ ದಿ ಲಾಸ್ಟ್ ರಿಪೇರ್ ಶಾಪ್, ಅತ್ಯುತ್ತಮ ಸಂಕಲನ ಒಪೆನ್ಹೆಮರ್, ಅತ್ಯುತ್ತಮ ವಿದೇಶಿ ಚಿತ್ರ ದಿ ಝೋನ್ ಆಫ್ ಇಂಟರೆಸ್ಟ್ ಗಳಿಸಿಕೊಂಡಿವೆ.
ಇನ್ನೂ ಹಲವಾರು ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗಿದೆ.
ಇದನ್ನೂ ಓದಿ: ಸುಷ್ಮಿತಾ: ವಂಚಕನೊಬ್ಬನ ಅಸ್ಪಷ್ಟ ಮಾನವೀಯ ಮುಖ