Saturday, September 28, 2024
spot_img
More

    Latest Posts

    ದಿ ಕಪ್ : ಆಯ್ಕೆ ಸ್ವಾತಂತ್ರ್ಯದತ್ತ ಕೊಂಡೊಯ್ಯುವ ಚಿತ್ರ

    ವಿಮರ್ಶಕ ವಿ. ಎನ್. ಲಕ್ಷ್ಮೀನಾರಾಯಣರು ಬರೆದ “ದಿ ಕಪ್” ಚಿತ್ರದ ಕುರಿತ ಬರಹವಿದು. ಓದಿ ಹೇಳಿ.

    ಶಾಬ್ದಿಕ ಭಾಷೆನುಡಿಚಿತ್ರಗಳನ್ನು ಬಳಸಿ ಸಂವಹನವನ್ನು ಸಾಧ್ಯಮಾಡುವ ಭಾಷಾವ್ಯವಸ್ಥೆ. ಚಲನಚಿತ್ರದ ಭಾಷೆಚಿತ್ರನುಡಿಗಳನ್ನು ಬಳಸಿ ಸಂವಹನವನ್ನು ಸಾಧಿಸುತ್ತದೆ. ಅನುಭವದಸಂವಹನೆಯಲ್ಲಿನ ಭಾವನೆ, ಶಬ್ದ, ಸಂಗೀತ, ದೃಶ್ಯ, ಮನೋಹರತೆ, ನಾಟ್ಯ, ನಾಟಕೀಯತೆ-ಸಂಘರ್ಷ ಮತ್ತು ವಿಚಾರಗಳ ಸಾಧ್ಯತೆ-ಆಯಾಮಗಳನ್ನು ಪಡೆಯಲು ಶಾಬ್ದಿಕ ಭಾಷೆಯಲ್ಲಿ ಕಲ್ಪನಾಶಕ್ತಿಯನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ದೃಶ್ಯಮಾಧ್ಯಮವಾದ ಚಲನಚಿತ್ರದಲ್ಲಿ ಬಳಸುವ ಚಿತ್ರನುಡಿಯಭಾಷೆ ಏಕಕಾಲಕ್ಕೆ ಈ ಎಲ್ಲಾ ಸಾಧ್ಯತೆ-ಆಯಾಮಗಳನ್ನು ಒಳಗೊಂಡಿರುವುದರಿಂದ ಕಲ್ಪನಾಶಕ್ತಿಯ ಬಳಕೆಗಿಂತ ಚಿತ್ರನುಡಿಭಾಷೆಯ ಪರಿಚಯ ಅದರ ವ್ಯಾಕರಣಜ್ಞಾನ ಹೆಚ್ಚು ಅಗತ್ಯವಾಗುತ್ತದೆ. ಇದೇಚಲನಚಿತ್ರಸಹೃದಯತೆ. ಇದಿಲ್ಲದಿದ್ದಾಗ ನಮ್ಮಚಲನಚಿತ್ರರಸಗ್ರಹಣ, ಕೇವಲ ಶಾಬ್ದಿಕಭಾಷೆಗೆ ಅನುವಾದಗೊಂಡ ಸಾಹಿತ್ಯಕಚರ್ಚೆಯಾಗಿಮಾರ್ಪಟ್ಟು ಚಲನಚಿತ್ರದ ಆಸ್ವಾದನೆ ಕಷ್ಟವಾಗುತ್ತದೆ. ಈ ಅರಿವಿನೊಂದಿಗೆ, ಅತ್ಯುತ್ತಮ ಚಲನಚಿತ್ರಗಳೆಂದು ಸಾರ್ವರ್ತಿಕವಾಗಿ ಮನ್ನಣೆ ಪಡೆದಿರುವ ಚಿತ್ರಗಳನ್ನು ನೋಡಿ, ಅವನ್ನುಚಲನಚಿತ್ರಗಳನ್ನಾಗಿಚರ್ಚಿಸುವುದು ಚಲನಚಿತ್ರಸಹೃದಯತೆಯನ್ನು ಸಾಧಿಸುವ ಒಂದು ಪ್ರಮುಖ ವಿಧಾನ. ಮೈಸೂರು ಚಿತ್ರಸಮಾಜ ಏರ್ಪಡಿಸುತ್ತಾಬಂದಿರುವ ಪ್ರದರ್ಶನಗಳು ಈ ಉದ್ದೇಶದತ್ತ ಸಹೃದಯರನ್ನು ಕೊಂಡೊಯ್ಯುವ ಪ್ರಯತ್ನಗಳು.

    ಚಿತ್ರದಿ ಕಪ್‌ ಮೇಲ್ಪದರದಲ್ಲಿ ಚೀನಾದ ಆಕ್ರಮಣಶೀಲತೆ, ಭಾರತದ ಔದಾರ್ಯ ಮತ್ತು ಟಿಬೆಟ್ ಬೌದ್ಧಭಿಕ್ಷುಗಳ ತಾಯ್ನಾಡಿನ ಹಂಬಲ ಇವುಗಳನ್ನೊಳಗೊಂಡ ರಾಜಕೀಯವನ್ನು ಬಿಂಬಿಸುತ್ತದೆ. ಕೆಳಪದರದಲ್ಲಿ ಬೌದ್ಧಧರ್ಮದ ತತ್ವ ಮತ್ತು ಜೀವನಶೈಲಿಯನ್ನು ಎಳೆಯರಿಗೆ ಕಲಿಸುವ ಮಠದಲ್ಲಿ ಬೇರೆಬೇರೆ ಸ್ತರದ ಮನಸ್ಸುಗಳು ವರ್ತಮಾನವನ್ನು ನೋಡುವ ರೀತಿಗಳನ್ನು ವಿನೋದ-ಗಂಭೀರ ಪ್ರಸಂಗಗಳಮೂಲಕ ತೆರೆದಿಡುತ್ತದೆ. ಆಳದಲ್ಲಿ ಬೌದ್ಧಧರ್ಮ ಪ್ರತಿಪಾದಿಸುವ ಮಧ್ಯಮಮಾರ್ಗದ ವಿರಾಗದ ಆದರೆ ಭಾವನಾತ್ಮಕ ಸಂಬಂಧಗಳಮೇಲೆ ನಿಂತ ನೆಮ್ಮದಿಯಜೀವನಕ್ರಮ; ಮತ್ತು ಪಾಶ್ಚಾತ್ಯರೀತಿಯ ಇಂದ್ರಿಯಸುಖಕೇಂದ್ರಿತ ಆಧುನಿಕ ಸ್ಪರ್ಧಾತ್ಮಕ ಜೀವನಕ್ರಮಗಳನ್ನು ಮುಖಾಮುಖಿಯಾಗಿಸಿ ಆಯ್ಕೆಯನ್ನು ನೋಡುಗರಿಗೇ ಬಿಡುತ್ತದೆ.

    ಬೌದ್ಧಧರ್ಮದ ಸಾರಸಂಗ್ರಹ ನಾಲ್ಕುಮಾತುಗಳಲ್ಲಿವೆ. ೧.ಸರ್ವಮ್ ಕ್ಷಣಿಕಮ್ ಕ್ಷಣಿಕಮ್ ೨. ಸರ್ವಮ್ಸ್ವಲಕ್ಷಣಮ್ ಸ್ವಲಕ್ಷಣಮ್ ೩. ಸರ್ವಮ್ ದುಃಖಮ್ ದುಃಖಮ್ ೪. ಸರ್ವಮ್ಶೂನ್ಯಮ್ಶೂನ್ಯಮ್. ಅಂದರೆ ಎಲ್ಲವೂ ಕ್ಷಣಿಕವಾಗಿದ್ದು ಬದಲಾವಣೆಗೆ ಒಳಪಟ್ಟಿವೆ. ಎಲ್ಲವೂ ಹೋಲಿಕೆಗೆ ಸಿಗದಂತೆ ವಿಶಿಷ್ಟವಾಗಿವೆ, ಎಲ್ಲವೂ ದುಃಖದಿಂದಕೂಡಿವೆ ಮತ್ತು ಎಲ್ಲವು ಶೂನ್ಯವೆ.
    ಹುಟ್ಟು-ಸಾವುಗಳು ವ್ಯಕ್ತಿಯ ಕೈಲಿಲ್ಲ. ಹುಟ್ಟಿನಮುಂಚಿನಸ್ಥಿತಿ, ಸಾವಿನನಂತರದಸ್ಥಿತಿ ಎರಡೂ ಅವ್ಯಕ್ತ. ಇವೆರಡರ ಬದುಕು ಮಾತ್ರ ವ್ಯಕ್ತ. ವ್ಯಕ್ತಮಧ್ಯದ ಈ ಬದುಕಿನಲ್ಲಿ ಅತಿರೇಕಗಳಿಗೆ ಹೋಗದೆ ಅಹಿಂಸಾತ್ಮಕಮಧ್ಯಮಮಾರ್ಗದಲ್ಲಿ ಸಾಂಘಿಕವಾಗಿ ನೆಮ್ಮದಿಯಿಂದ ಬದುಕುವುದು ವಿವೇಕದ ಮಾರ್ಗ.

    ಚಿತ್ರದ ಶೀರ್ಷಿಕೆ ಕಪ್?ಗೆ(ಕನ್ನಡದಲ್ಲಿ ಲೋಟ) ಫುಟ್ಬಾಲ್‌ಕಪ್, ಕೋಕಕೋಲದ ಲೋಟ, ಚಹಾಕಪ್ಪು, ಇಹಜೀವನದಲ್ಲಿ ನಾವುಪಡೆದದ್ದು(ಪಾಲಿಗೆ ಬಂದ ಪಂಚಾಮೃತ) ಮತ್ತು ಜ್ಞಾನದಿಂದತುಂಬಬೇಕಾದ ಖಾಲಿಕಪ್ಪು, ಹೀಗೆ ನಾನಾ ಅರ್ಥಗಳು ಚಿತ್ರದ ಘಟನಾವಳಿಯಲ್ಲಿ ಪ್ರಾಪ್ತವಾಗುತ್ತವೆ. ಹುಡುಗಾಟದ ಎಳೆಯ ಭಿಕ್ಷುಗಳ ಕಾಲಿಗೆ ಚೆಂಡಾಗಿ, ಶಾಸ್ತ್ರಹೇಳುವವನಿಗೆ ದೇವರ ದೀಪವಾಗುವ ಕೋಕಕೋಲ ಕಪ್ಕಪ್?ನ ಅಧುನಿಕ ಸಾಧ್ಯತೆಗಳು.
    ಬುದ್ಧಗುರು, ದಲೈಲಾಮಾ; ತಾಯ್ನಾಡಿಗೆಮರಳುವ ನಿರಂತರ ಹಂಬಲಹೊತ್ತ,ಫುಟ್ಬಾಲ್ ಎಂದರೇನೆಂದೇ ಅರಿಯದ ಮಠದಮುಖ್ಯಸ್ಥ; ಎಳೆಯಭಿಕ್ಷುಗಳೊಂದಿಗೆ ಅವರಪ್ರೀತಿ-ಆಸಕ್ತಿಗಳನ್ನುಶಿಸ್ತು-ಸಹಾನುಭೂತಿಗಳೊಟ್ಟಿಗೇ ಹಂಚಿಕೊಳ್ಳುವ ವಾರ್ಡನ್; ಅತ್ಯಂತಚೂಟಿ, ತುಂಟ, ಫುಟ್ಬಾಲ್ ಪ್ರಿಯ ಎಳೆಯಭಿಕ್ಷು, ಈ ಚಿತ್ರದಲ್ಲಿ ಬೇರೆಬೇರೆಸ್ತರದ ಮುಂದಾಳು-ಮಾರ್ಗದರ್ಶಿಗಳು.

    ಮುಗ್ಧತೆ, ಮೌಢ್ಯ, ಸಹಾನುಭೂತಿ, ವ್ಯಾವಹಾರಿಕತೆ, ಜೀವನರತಿ, ಹುಡುಗಾಟಿಕೆ, ಪ್ರೀತಿ, ಜ್ಞಾನಗಳನ್ನುಪ್ರತಿನಿಧಿಸುವ ಪಾತ್ರಗಳನ್ನು ಒಟ್ಟಿಗೆನಿರ್ವಹಿಸುವ ರೀತಿ ಮತ್ತು ಮಠದಲ್ಲೆಫುಟ್ಬಾಲ್ ಕಪ್ ನೋಡಲು ಟೀವಿ ಬಾಡಿಗೆಗೆತರಲು ಹಣಹೊಂದಿಸುವಾಗ ಹುಡುಗ ಪಡುವಕಷ್ಟಗಳು, ಉತ್ಸಾಹ, ತೋರಿಸುವ ಜಾಣ್ಮೆ, ಹಿರಿಯರಿಂದಪಡೆಯುವ ಸಹಾನುಭೂತಿ, ವ್ಯಕ್ತಪಡಿಸುವ ಪ್ರಬುದ್ಧಮಾನವೀಯತೆ ಇದನ್ನು ಸಾಧ್ಯ ಮಾಡಲು ಬಳಸುವ ಪರಿಣಾಮಕಾರಿಯಾದ ಚಿತ್ರನುಡಿಭಾಷೆಯ ಮೇಲಿನ ಪ್ರಭುತ್ವ ಈಚಿತ್ರದ ವಿಶೇಷತೆಗಳು. ವೇದಘೋಷವನ್ನು ನೆನಪಿಸುವ ಪ್ರಾರ್ಥನೆ, ಬೌದ್ಧಮಠದ ವಿಶಿಷ್ಟ ವಾದ್ಯಸಂಗೀತ, ಶಹನಾಯ್ ಮತ್ತು ಸಿತಾರ್ ವಾದನ, ಗುನುಗುವ ಹಿಂದಿಸಿನೆಮಾಹಾಡು,ಇವು ಈ ಚಿತ್ರದಲ್ಲಿ ಸಹಜವೆಂಬಂತೆ ಆದರೆ ಔಚಿತ್ಯಪೂರ್ಣವಾಗಿ ಬಳಕೆಯಾಗಿರುವ ಸಂಗೀತ. ಪ್ರಕೃತಿಯ ಹಿನ್ನೆಲೆ, ಚಿತ್ರಸೌಂದರ್ಯವನ್ನು ಹೆಚ್ಚಿಸಲೆಂದೇನೂ ವಿಶೇಷವಾಗಿ ಬಳಕೆಯಾಗಿಲ್ಲ.

    ಆಟವನ್ನು ನೋಡುವುದಕ್ಕಿಂತಸಹಪಾಠಿಯಭಾವನೆಗೆ ಹೆಚ್ಚುಬೆಲೆಕೊಡುವಹುಡುಗನ ದೃಷ್ಟಿ, ಗೋಲಿಗಿಂತಆಟ ಮುಖ್ಯ, ಗುರಿಗಿಂತಪ್ರಕ್ರಿಯೆ ಮುಖ್ಯಮತ್ತುಸಾಧನೆಗಿಂತಬದುಕುವ ಭಾವನಾತ್ಮಕಸಂಬಂಧವೇ ದೊಡ್ಡದು ಎಂದು ಸಾರುವಂತೆ ತೋರುತ್ತದೆ. ವ್ಯಕ್ತಮಧ್ಯದ ಬದುಕಿಗೆ ಬೌದ್ಧಧರ್ಮದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ಚಿತ್ರ ಕೊನೆಯಾಗುವುದು ಮಠದ ಮುಖ್ಯಸ್ತನ ಧರ್ಮಪ್ರವಚನದಿಂದ.

    ಕಾಡಿನಲ್ಲಿನ ಮುಳ್ಳುತಾಗದಿರಲು ಕಾಡಿಗೆಲ್ಲಾ ಚರ್ಮ ಹಾಸಲಾಗದು. ಆದರೆ ಕಾಲಿಗೆ ಚರ್ಮಕಟ್ಟಿಕೊಂಡರೆ ಕಾಡಿಗೆಲ್ಲಾ ಹಾಸಿದಂತೇ ಆಗುತ್ತದೆ. ಸುತ್ತಾ ಅಸಂಖ್ಯಾತ ಶತ್ರುಗಳಿರುವಾಗ ಒಬ್ಬೊಬ್ಬಶತ್ರುವನ್ನೂ ಕೊಲ್ಲುವುದಕ್ಕಿಂತ ಶತ್ರುತ್ವಕ್ಕೆ ಮೂಲವಾದ ದ್ವೇಷವನ್ನೆ ಇಲ್ಲವಾಗಿಸಿದರೆ ಶತ್ರುಗಳಿಲ್ಲದಂತೆ ಇರಬಹುದು.ಆಸೆ ಅತೃಪ್ತಿ ನರಳಿಕೆಗಳೆ ತುಂಬಿರುವ ಈ ಬದುಕಿನಲ್ಲಿ ನಿಸ್ವಾರ್ಥತೆಯಿಂದ ಮಾತ್ರ ಆನಂದವನ್ನು ಹೊಂದಬಹುದು.ಇದು ಬೌದ್ಧಧರ್ಮ ಸಾರುವ ಸತ್ಯ.
    ಚಿತ್ರದ ಕೊನೆಯಲ್ಲಿಹೇಳಿಕೆಯಾಗಿನಿರೂಪಿತವಾಗುವ ಅಂಶಗಳುಮಠದಗುರುವಿನವ್ಯಕ್ತಿತ್ವದ ಬಗ್ಗೆ,ವರ್ತಮಾನದರಾಜಕೀಯದಬಗ್ಗೆ ಚಿತ್ರನುಡಿಭಾಷೆಯಲ್ಲಿಹೇಳುವ ಸಂಗತಿಗಳಇನ್ನೊಂದುಮುಖದಂತಿವೆ. ಹಿಂಸೆ, ಸುಖಲೋಲುಪತೆಗಳೆ ಪ್ರಧಾನವಾದ, ಕ್ರೀಡೆಗಳೂ ಯುದ್ಧಗಳೇ ಆಗಿರುವ, ಸ್ಪರ್ಧಾತ್ಮಕವಾದ ವರ್ತಮಾನದ ಆಧುನಿಕ ಜೀವನದ ಸವಾಲುಗಳನ್ನು ಸಾತ್ವಿಕ-ಶಿಷ್ಟಮನಸ್ಸುಗಳು ಎದುರಿಸುವ ಬಗೆಯನ್ನುದಿ ಕಪ್?ನಮ್ಮ ಮುಂದಿಡುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

    ಯಾವುದೆ ಉತ್ತಮ ಚಿತ್ರ ಉತ್ತಮ ಕಲಾಕೃತಿಯಂತೆ, ಮಾಹಿತಿಯಿಂದ ತಾತ್ವಿಕತೆಯತ್ತ, ಮನರಂಜನೆಯಿಂದ ಚಿಂತನೆಯತ್ತ, ವಾದದಿಂದ ಸಂವಾದದತ್ತ, ಒರಟು ಹೇಳಿಕೆಗಳಿಂದ ಸೂಕ್ಷ್ಮತೆಯತ್ತ, ಸಿದ್ಧತೀರ್ಮಾನಗಳಿಂದ ಆಯ್ಕೆಯಸ್ವಾತಂತ್ರ್ಯದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎಂದು ನನ್ನ ತಿಳವಳಿಕೆ.

    ದಿ ಕಪ್? ಅಂಥ ಚಿತ್ರ ಎಂದು ನನ್ನ ಅಭಿಪ್ರಾಯ. (ಲೇಖನ ಕೃಪೆ – ಸಾಂಗತ್ಯ ಬ್ಲಾಗ್)

    Latest Posts

    spot_imgspot_img

    Don't Miss

    Stay in touch

    To be updated with all the latest news, offers and special announcements.