ನಟರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯಿಸಿ, ಅರ್ಜುನ್ ಜನ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ 45 ಚಿತ್ರೀಕರಣ ಮುಗಿಸಿತಂತೆ.
ಅದೇನೋ ಸರಿ, ಬಿಡುಗಡೆ ಯಾವಾಗ ಹೇಳಿ? ದೀಪಾವಳಿಗೋ, ಹೊಸವರ್ಷಕ್ಕೋ, ಸಂಕ್ರಾಂತಿಗೋ ಎಂದು ಕೇಳುತ್ತಿದ್ದಾರೆ ಪ್ರೇಕ್ಷಕರು.
ಸದ್ಯಕ್ಕೆ ಸಿನಿಮಾ ಕುತೂಹಲ ಮೂಡಿಸಿರುವುದು ನಿಜ. ಒಬ್ಬ ನಟರಿದ್ದರೆ ಬೇರೆ ರೀತಿ. ಇದು ಬಹುಹೀರೋಗಳ ಸಿನಿಮಾ. ಮೂರು ಹೀರೋಗಳು ಒಟ್ಟಾಗಿದ್ದಾರೆ ಎನ್ನುವುದು ಒಂದೆಡೆ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಸಂಗೀತ ನಿರ್ದೇಶನ ಮಾಡಿಕೊಂಡಿದ್ದ ಅರ್ಜುನ್ ಜನ್ಯ ನಿರ್ದೇಶಕರ ಟೊಪ್ಪಿ ಏರಿಸಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !
ಹಾರ್ಮೋನಿಯಂ ಹಿಡಿಯುವುದಕ್ಕೂ, ಆಕ್ಷನ್ ಕಟ್ ಹೇಳುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆಯಲ್ಲ. ನೋಡಬೇಕು, ಯಾವ ವ್ಯತ್ಯಾಸವೂ ಇಲ್ಲ ಎನ್ನುತ್ತಾರೆಯೇ ಅರ್ಜುನ್ ಜನ್ಯ, ಗೊತ್ತಿಲ್ಲ. ಒಟ್ಟಿನಲ್ಲಿ ದುಬಾರಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿದೆ.
ಇತ್ತೀಚೆಗೆ ನಡೆದ ಮಾಧ್ಯಮದವರೊಂದಿಗಿನ ಮಾತುಕತೆಯಲ್ಲಿನಟ ಶಿವರಾಜ ಕುಮಾರ್,(ಟೀಸರ್ ಇಲ್ಲಿದೆ) ಒಳ್ಳೆಯ ಕ್ಷಣ. ನಾವು ಮೂವರೂ ಒಟ್ಟಿಗೇ ಅಭಿನಯಿಸಿದ್ದೇವೆ. ಅರ್ಜುನ್ ಜನ್ಯ ಅವರೂ ಚೆನ್ನಾಗಿ ನಿರ್ದೇಶಿಸಿದ್ದಾರೆ. ಸಾಹಸ ದೃಶ್ಯಗಳು ಬಹಳ ಚೆನ್ನಾಗಿವೆ. ಒಳ್ಳೆಯ ಆಕ್ಷನ್ ಸಿನಿಮಾ ಆಗಲಿದೆ ಎಂದರಂತೆ.
ಕಥೆಯನ್ನು ಅನಿಮೇಷನ್ ಮೂಲಕ ಹೇಳಲು ಪ್ರಯತ್ನಿಸಿದ್ದಾರಂತೆ ಅರ್ಜುನ್. ಇವೆಲ್ಲ ಹಾಲಿವುಡ್ ಟೆಕ್ನಿಕ್ಸ್, ಇಲ್ಲೂ ಸಾಧ್ಯವಾಗಿದೆಯಂತೆ. ಅದೂ ಕನ್ನಡದಲ್ಲೇ ಆಗಿರುವುದು ಇನ್ನೂ ಸಂತೋಷವಂತೆ. ಶಿವಣ್ಣ, ರಾಜ್ ಬಿ ಶೆಟ್ಟಿ ಜತೆ ನಟಿಸುವುದಕ್ಕೆ ಖುಷಿಯಾಯಿತು ಎಂದವರು ಉಪೇಂದ್ರ.
From Ground Zero: ಪ್ಯಾಲೆಸ್ತೀನ್ ನ ಪ್ರಸ್ತುತ ಸ್ಥಿತಿಗೆ ಈ 22 ಸಿನಿಮಾ ಕನ್ನಡಿ
ಶಿವಣ್ಣ ಅವರ ಚಿತ್ರಗಳಿಗೆ ವಿಷಲ್ ಹಾಕಿದವನು ನಾನು. ಉಪೇಂದ್ರ ಅವರ ಎ ಚಿತ್ರ ಪೋಸ್ಟರ್ ನೋಡಿ ಕಣ್ ಕಣ್ ಬಿಟ್ಟಿದ್ದೆ ನಾನು. ಅವರಿಬ್ಬರ ಅಭಿಮಾನಿ. ಈಗ ಇವರೊಟ್ಟಿಗೆ ನಟಿಸಲು ಅವಕಾಶ ಸಿಕ್ಕಿದೆ ಎಂದರೆ ಇನ್ನೇನು ಬೇಕು? ಇದು ನನ್ನ ಭಾಗ್ಯ ಎಂದು ಮನದುಂಬಿಕೊಂಡವರು ರಾಜ್ ಬಿ. ಶೆಟ್ಟಿ. ಅವರ ಪ್ರಕಾರ ಕನ್ನಡಿಗರು ಹೆಮ್ಮೆ ಪಡುವ ಸಿನಿಮಾ 45 ಆಗುತ್ತಂತೆ.
ಬ್ರಹ್ಮ ವಿಷ್ಣು ಮಹೇಶ್ವರ ಇದ್ದಂತೆ ಈ ಮೂವರು. ಇವರೆಲ್ಲರ ಸಹಕಾರದಿಂದ ಚಿತ್ರೀಕರಣ ಮುಗಿದಿದೆ. ಇನ್ನೇನಿದ್ದರೂ ಉಳಿದ ಕೆಲಸ ಎಂದವರು ಅರ್ಜುನ್ ಜನ್ಯ. ಇದೇ ಸಂದರ್ಭದಲ್ಲಿ ಮೂವರೂ ನಟರನ್ನು ಸನ್ಮಾನಿಸಲಾಯಿತು.
45 ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿನಿರ್ಮಿಸಿದ್ದಾರೆ. ಸತ್ಯ ಹೆಗಡೆ ಅವರ ಸಿನೆಮಾಟೊಗ್ರಫಿ, ರವಿವರ್ಮರ ಸಾಹಸವಿದೆ. ಆದರೆ ಚಿತ್ರ ಬಿಡುಗಡೆ ಯಾವಾಗ ಎನ್ನುವುದು ನಿಖರವಾಗಿ ಪ್ರಕಟವಾಗಬೇಕಿದೆ.