Saturday, September 28, 2024
spot_img
More

    Latest Posts

    SFF : ‌ಸಿಡ್ನಿಯ 71 ನೇ ಚಿತ್ರೋತ್ಸವದಲ್ಲಿ197 ಸಿನಿಮಾಗಳು

    ಸಿಡ್ನಿಯ 71 ನೇ ಸಿನಿಮೋತ್ಸವ (ಎಸ್‌ ಐ ಎಫ್‌ ಎಫ್)ಕ್ಕೆ ಆಸ್ಟ್ರೇಲಿಯದ ರಾಜಧಾನಿ ಸಿಡ್ನಿ ಸಜ್ಜಾಗಿದೆ. ಈ ಬಾರಿ ಉತ್ಸವವು ಜೂನ್‌ 5 ರಿಂದ 16 ರವರೆಗೆ ನಡೆಯಲಿದೆ. ಹನ್ನೆರಡು ದಿನಗಳ ಉತ್ಸವಗಳಲ್ಲಿ ಹನ್ನೆರಡು ಸಿನಿಮಾ ಮಂದಿರಗಳಲ್ಲಿ ಸಿನಿಮಾಗಳು ಸಿನಿಮಾ ಪ್ರೇಕ್ಷಕರಿಗೆ ವೀಕ್ಷಿಸಲು ಲಭ್ಯವಾಗಲಿದೆ.

    ಈ ಬಾರಿ ಕಾನ್ಸ್‌ ಚಿತ್ರೋತ್ಸವದಲ್ಲೂ ಸ್ಪರ್ಧಾ ಮತ್ತು ಇತರೆ ವಿಭಾಗಗಳಲ್ಲಿರುವ ಹಲವು ಸಿನಿಮಾಗಳು ಸಿಡ್ನಿ ಚಿತ್ರೋತ್ಸವದಲ್ಲೂ ಭಾಗವಹಿಸುತ್ತಿವೆ. ಮುಖ್ಯವಾಗಿ 38 ವರ್ಷಗಳ ಬಳಿಕ ಪ್ರಶಸ್ತಿಯ ಸೆಣಸಿಗೆ ಬಿದ್ದು, ಗ್ರ್ಯಾಂಡ್‌ ಪ್ರಿಕ್ಸ್‌ ಪ್ರಶಸ್ತಿ ಪಡೆದ ಪಾಯಲ್‌ ಕಪಾಡಿಯಾ ಅವರ ʼ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್ ʼ ಸಿನಿಮಾ, ಯೋರ್ಗೋಸ್‌ ಲಂತಿಮೊಸ್‌ ರ ʼಕೈಂಡ್ಸ್‌ ಆಫ್‌ ಕೈಂಡ್‌ ನೆಸ್‌ʼ ಸಿನಿಮಾದ ಜತೆಗೆ ವಿಶ್ವ ಪ್ರೀಮಿಯರ್‌ ಕಾಣುತ್ತಿರುವ ಕಿಡ್‌ ಸ್ನೋ, ಲೀ ತಮಾಹೊರಿ ಅವರ ದಿ ಕನ್ವರ್ಟ್‌ ಮತ್ತಿತರ ಚಲನಚಿತ್ರಗಳು ಪ್ರದರ್ಶಿತವಾಗಲಿವೆ.

    ಸಿನಿಮೋತ್ಸವ ನಿರ್ದೇಶಕ ನಶೇನ್‌ ಮೂಡ್ಲೆ ಅವರ ಪ್ರಕಾರ, ಮಾನವ ಸಂಬಂಧದ ಕುರಿತಾಗಿ ಹೇಳಲಾಗುವ ಹತ್ತಾರು ಒಳ್ಳೆಯ ಕಥೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಈ ವರ್ಷ 69 ದೇಶಗಳ 197 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಇವುಗಳಲ್ಲಿ 28 ವಿಶ್ವ ಪ್ರೀಮಿಯರ್‌ ಗಳು, 133 ಆಸ್ಟ್ರೇಲಿಯಾ ಪ್ರೀಮಿಯರ್‌ ಗಳನ್ನು ಒಳಗೊಂಡಿವೆ. 92 ಕಥಾ ಮತ್ತು 54 ಕಥೇತರ ಪ್ರಸ್ತುತಿಗಳಿಗೂ ಅವಕಾಶ ಕಲ್ಪಿಸಲಾಗಿದೆʼ ಎನ್ನುತ್ತಾರೆ.

    NYIFF: ಕನ್ನಡದ ಮಿಥ್ಯದೊಂದಿಗೆ ಭಾರತೀಯ ಚಿತ್ರಗಳ ಸಂಭ್ರಮ ಈ ಸಿನಿಮೋತ್ಸವದಲ್ಲಿ

    ಮಿಡ್ನೈಟ್‌ ಆಯಿಲ್‌ : ದಿ ಹಾರ್ಡೆಸ್ಟ್‌ ಲೈನ್ – ಪೌಲ್‌ ಕ್ಲಾರ್ಕ್‌ ನಿರ್ದೇಶನದ ಚಿತ್ರದ ಮೂಲಕ ಉತ್ಸವ ಆರಂಭವಾಗಲಿದೆ. ಸಮಾರೋಪ ಚಿತ್ರವಾಗಿ ದಿ ಸಬ್‌ ಸ್ಟ್ಯಾನ್ಸ್‌ ಪ್ರದರ್ಶಿತವಾಗಲಿದೆ. ಇದಲ್ಲದೇ ಪ್ರಶಸ್ತಿಯ ಸ್ಪರ್ಧೆಗೆ ಕೈಂಡ್ಸ್‌ ಆಫ್‌ ಕೈಂಡ್‌ ನೆಸ್‌, ಮಿಗುಯಲ್‌ ಗೋಮ್ಸ್‌ ರ ದಿ ಗ್ರ್ಯಾಂಡ್‌ ಟೂರ್‌, ಕ್ರಿಸ್ಟೋಫರ್‌ ಹಾನೊರ್‌ ಅವರ ಮಾರ್ಸೆಲೊ ಮಿಯೊ, ಪಾಯಲ್‌ ಕಪಾಡಿಯ ಅವರ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಸಿನಿಮಾಗಳು ಆಗಮಿಸಿವೆ. ಮಿಡ್ನೈಟ್‌ ಆಯಿಲ್‌ – ದಿ ಹಾರ್ಡೆಸ್ಟ್ ಲೈನ್‌, ಸೆಪ್ಟೆಂಬರ್‌ ಸೇಸ್‌, ಸೂಜೊ, ನೀಕ್ಯಾಪ್‌, ದೇರ್‌ ಈಸ್‌ ಸ್ಟಿಲ್‌ ಟುಮಾರೋ, ದಿ ಬೈಕ್‌ ರೈಡರ್ಸ್‌, ಅಬೌಟ್‌ ಡ್ರೈ ಗ್ರಾಸಸ್‌, ಬ್ಲ್ಯಾಕ್‌ ಗರ್ಲ್‌, ಅರ್ಮಂಡ್‌, ಬ್ಯ್ಲಾಕ್‌ ಸ್ನೊ,ದಿ ಬೋನ್ಸ್‌, ಎ ಬ್ರೀಫ್‌ ಹಿಸ್ಟರಿ ಆಫ್‌ ಫ್ಯಾಮಿಲಿ, ಡೆತ್‌ ಆಫ್‌ ಎ ವಿಶಲ್‌ ಬ್ಲೋವರ್ ಮತ್ತಿತರು ಚಿತ್ರಗಳೂ ಪ್ರದರ್ಶಿತವಾಗಲಿವೆ.

    All We Imagine as Light
    All We Imagine as Light

    ಅತ್ಯುತ್ತಮ ಚಿತ್ರಕ್ಕೆ ನೀಡುವ ಸಿಡ್ನಿ ಫಿಲ್ಮ್‌ ಪ್ರಶಸ್ತಿ, ಡಾಕ್ಯುಮೆಂಟರಿ ಆಸ್ಟ್ರೇಲಿಯ ಪ್ರಶ್ತಿ, ಸಸ್ಟೇನಬಲ್‌ ಫ್ಯೂಚರ್‌ ಪ್ರಶಸ್ತಿ, ಫರ್ಸ್ಟ್‌ ನೇಷನ್‌ ಪ್ರಶಸ್ತಿ, ಸಿಡ್ನಿ ಯುನೆಸ್ಕೊ ಸಿಟಿ ಆಫ್‌ ಫಿಲ್ಮ್‌ ಪ್ರಶಸ್ತಿ, ದಿ ಡೆಂಡಿ ಲೈವ್‌ ಆಕ್ಷನ್‌ ಶಾರ್ಟ್‌ ಪ್ರಶಸ್ತಿ, ದಿ ರೂಬನ್‌ ಮಮೊಲಿಯನ್‌ ಪ್ರಶಸ್ತಿ, ದಿ ಯೋರಮ್‌ ಗ್ರಾಸ್‌ ಅನಿಮೇಷನ್‌ ಪ್ರಶಸ್ತಿ, ದಿ ಎಎಫ್‌ ಟಿ ಆರ್‌ ಎಸ್‌ ಕ್ರಾಫ್ಟ್‌ ಪ್ರಶಸ್ತಿ, ದಿ ಈವೆಂಟ್‌ ಸಿನಿಮಾಸ್‌ ರೈಸಿಂಗ್‌ ಟ್ಯಾಲೆಂಟ್‌ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ. ಜೂನ್‌ 16 ರಂದು ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಲಾಗುವುದು.

    Cannes 2024: ಗೆಳೆತನವೂ ಕೌಟುಂಬಿಕ ಭಾವದ ಪ್ರತೀಕ-ಪಾಯಲ್‌ ಕಪಾಡಿಯ

    ಮುಕ್ತ ಚರ್ಚೆ, ಸಂವಾದವೆಲ್ಲವೂ ಚಿತ್ರೋತ್ಸವದ ಪ್ರಮುಖ ಭಾಗವಾಗಿದ್ದು, ಈ ಬಾರಿ ಚಿತ್ರರಂಗದ ಜಾರ್ಜ್‌ ಮಿಲ್ಲರ್‌, ಜಾಸೊನ್‌ ರೈಲೆ, ರಾಚೆಲ್‌ ಹೌಸ್‌, ಮಿಶೆಲ್‌ ಸ್ಟೇನ್ಲಿ ಮತ್ತಿತರರು ಸಂವಾದ, ಚರ್ಚೆಯಲ್ಲಿ ಪಾಲ್ಗೊಳ್ಳುವರು.

    ಕೃತಕ ಬುದ್ಧಿಮತ್ತೆ ವರದಾನವಾಗುವುದೇ ಶಾಪವಾಗುವುದೇ ಎಂಬ ಸಂಗತಿ ಜಗತ್ತಿನ ಎಲ್ಲ ಸಿನಿಮಾ ನಿರ್ದೇಶಕರನ್ನೂ ಕಾಡುತ್ತಿದ್ದು, ಈ ಕುರಿತು ಈ ಚಿತ್ರೋತ್ಸವದಲ್ಲಿ ಚರ್ಚೆ ನಡೆಯಲಿದೆ. ಇದಲ್ಲದೇ, ಚಿತ್ರಕಥೆ, ಹೊಸ ಬಗೆಯ ದನಿಗಳು ಇತ್ಯಾದಿ ಸಂಗತಿಗಳ ಕುರಿತೂ ಸಂವಾದವಿದೆ. ಈ ಚಿತ್ರೋತ್ಸವವು 1954 ರಲ್ಲಿ ಆರಂಭವಾಗಿದ್ದು, ಸ್ಥಳೀಯ ಸರಕಾರವೂ ಇದನ್ನು ಬೆಂಬಲಿಸುತ್ತಿದೆ.

    Latest Posts

    spot_imgspot_img

    Don't Miss

    Stay in touch

    To be updated with all the latest news, offers and special announcements.