Saturday, April 19, 2025
spot_img
More

    Latest Posts

    Manorathangal:ಬಹುನಟರ, ಬಹು ನಿರ್ದೇಶಕರ ಕಥಾ ಗುಚ್ಛ ಆಗಸ್ಟ್‌ ನಲ್ಲಿ ಬಿಡುಗಡೆ ಜೀ5 ನಲ್ಲಿ

    ಎಂಟಿ ವಾಸುದೇವನ್‌ ನಾಯರ್‌ ಮಲಯಾಳ ಸಾಹಿತ್ಯ ರಂಗದ ದೊಡ್ಡ ಹೆಸರು. ಹಾಗೆಂದು ಬರೀ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾದವರಲ್ಲ. ಚಿತ್ರ ಕಥೆಗಾರರೂ ಹೌದು. ನಿರ್ದೇಶಕರೂ ಸಹ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೋರಥಂಗಳ್‌ ಸಿನಿಮಾ (ಅಂಥಾಲಜಿ) ರೂಪುಗೊಳ್ಳುತ್ತಿದೆ.

    ಒಂಬತ್ತು ಕಥೆಗಳಿರುವ ಗುಚ್ಛವಿದು. ಎಂಟು ಮಂದಿ ನಿರ್ದೇಶಕರು ನಿರ್ದೇಶಿಸುತ್ತಿರುವಂಥದ್ದು. ಕಥಾಗುಚ್ಛ ರೂಪುಗೊಳ್ಳುತ್ತಿರುವುದು ಭಾರತೀಯ ಸಿನಿಮಾದಲ್ಲಿ ಹೊಸತೇನೂ ಅಲ್ಲ. ಬಹಳಷ್ಟು ಪ್ರಯೋಗಗಳು ನಡೆದಿವೆ.

    ಕನ್ನಡದಲ್ಲೂ ಕಥಾ ಸಂಗಮದಿಂದ ಹಿಡಿದು ಹತ್ತಾರು ಪ್ರಯತ್ನಗಳು ನಡೆದಿವೆ. ಪ್ರತಿ ಭಾರತೀಯ ಭಾಷೆಯಲ್ಲೂ ಇಂಥದೊಂದು ಪ್ರಯೋಗ ನಡೆದಿದೆ.

    ಈ ಸಿನಿಮಾ ಗುಚ್ಛದಲ್ಲಿ ಮಲಯಾಳ ಭಾಷೆಯ ಅತಿರಥ ಮಹಾರಥ ನಟರೆಲ್ಲ ನಟಿಸುತ್ತಿರುವುದು ವಿಶೇಷವೇ. ಎಷ್ಟೋ ಬಾರಿ ಆಫ್‌ ಬೀಟ್‌ ಚಿತ್ರಗಳೆಂದರೆ ಬೇರೆ ಭಾಷೆಗಳಲ್ಲಿ ಅದಕ್ಕಾಗಿಯೇ ಎಂದಿರುವಂಥ ನಟರನ್ನು ಹುಡುಕಿಕೊಂಡು ಹೋಗಬೇಕು.

    ಆದರೆ ಮಲಯಾಳದಲ್ಲಿ ಈ ಪ್ರವೃತ್ತಿ ಕಡಿಮೆ. ದೊಡ್ಡ ದೊಡ್ಡ ನಟರೂ ಇಂಥದೊಂದು ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಮುಮ್ಮುಟ್ಟಿಯ ಇತ್ತೀಚಿನ ಚಿತ್ರಗಳೂ ಇದಕ್ಕೆ ಉದಾಹರಣೆ.

    ಆಗಸ್ಟ್‌ ನಲ್ಲಿ ಜೀ 5 ಕ್ಕೆ ಬಿಡುಗಡೆಗೊಳ್ಳಲು ರೂಪುಗೊಳ್ಳುತ್ತಿರುವ ಗುಚ್ಛವಿದು. ಇದರ ಟ್ರೇಲರ್‌ ಇತ್ತೀಚೆಗೆ ನಾಯರ್‌ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿವೀಕ್ಷಣೆಗೆ ಲಭ್ಯವಾಗುತ್ತಿರುವ ಗುಚ್ಛವಿದು.

    ಈ ಕಥಾಗುಚ್ಛದಲ್ಲಿ ಕಾಣಿಸಿಕೊಳ್ಳುವವರಲ್ಲ, ನಟಿಸುವವರು ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮಿ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ಎಲ್ಲರೂ ಇದ್ದಾರೆ.

    Kalki 2898 AD: ಕಲ್ಕಿಯಲ್ಲಿ ತ್ರಿಮೂರ್ತಿಗಳದ್ದೇ ದರಬಾರು

    ಹಾಗೆಯೇ ಮೋಹನ್‌ಲಾಲ್ ನಟನೆಯ ‘ಒಲ್ಲವುಮ್ ತೀರವುಮ್’ ಕಪ್ಪು ಬಿಳುಪಿನಲ್ಲಿ ನಿರ್ದೇಶಿಸಿರುವುದು ಪ್ರಿಯದರ್ಶನ್. ‘ಕಾಡುಗನ್ನವ ಒರು ಯಾತ್ರೆ ಕುರಿಪ್ಪು’ ಕಥೆಯಲ್ಲಿ ನಟಿಸಿರುವುದು ಮಮ್ಮುಟ್ಟಿ. ನಿರ್ದೇಶಿಸಿರುವುದು ರಂಜಿತ್.

    ಪ್ರಿಯದರ್ಶನ್ ನಿರ್ದೇಶನದ ಮತ್ತೊಂದು ಕಥೆ  ‘ಶಿಲಾಲಿಖಿತಂ’. ಇದರಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಮತ್ತು ಜಾಯ್ ಮ್ಯಾಥ್ಯೂ ನಟಿಸಿದ್ದಾರೆ.

    ಶ್ಯಾಮಪ್ರಸಾದ್ ನಿರ್ದೇಶನದ ಮತ್ತೊಂದು ಚಿತ್ರ ‘ಕಜ್ಚಾ’ ದಲ್ಲಿ ಪಾರ್ವತಿ ತಿರುವೋತ್ತು ಮತ್ತು ಹರೀಶ್ ಉತ್ತಮನ್ ನಟಿಸಿದ್ದಾರೆ.

     ಅಶ್ವತಿ ನಾಯರ್ ಅವರ ನಿರ್ದೇಶನದ ‘ವಿಲ್ಪನಾ’ ದಲ್ಲಿ ಮಾಧೂ ಮತ್ತು ಆಸಿಫ್ ಅಲಿ ನಟಿಸಿದ್ದಾರೆ.

    ಅಭಿನವ ಮಹೇಶ್ ನಾರಾಯಣನ್ ನಿರ್ದೇಶಿಸಿದ ‘ಶರ್ಲಾಕ್’ ಕಥೆಯಲ್ಲಿ ಫಹಾದ್ ಫಾಸಿಲ್ ಮತ್ತು ಜರೀನಾ ಮೊಯ್ದು ಅಭಿನಯಿಸಿದ್ದಾರೆ.

    Indian cinema : ಹೊಂದಿಕೆಯೋ? ಹೊಂದಾಣಿಕೆಯೋ? ಆಂಖೋನ್‌ ದೇಖಿ ನೋಡಿ

    ‘ಸ್ವರ್ಗಂ ತುರಕ್ಕುನ್ನ ಸಮಯ’ ಜಯರಾಜನ್ ನಾಯರ್ ನಿರ್ದೇಶನದ ಚಿತ್ರ. ಕೈಲಾಶ್, ಇಂದ್ರನ್ಸ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್ ಮತ್ತು ಸುರಭಿ ಲಕ್ಷ್ಮಿ ನಟಿಸಿರುವಂಥದ್ದು.

    ಸಂತೋಷ್‌ ಶಿವನ್‌ ನಿರ್ದೇಶಿಸಿರುವ ಚಿತ್ರ ‘ಅಭ್ಯಾಮ್ ತೀಡಿ ವೀಂದುಂ’. ಸಿದ್ಧಿಕ್, ಇಶಿತ್ ಯಾಮಿನಿ ಮತ್ತು ನಜೀರ್ ನಟಿಸಿರುವುದು ವಿಶೇಷ.

    ಮತ್ತೊಂದು ಚಿತ್ರ ‘ಕಡಲ್‌ಕಾಟ್ಟು’ ವಿನಲ್ಲಿ ರತೀಶ್ ಅಂಬಾಟ್ ನಿರ್ದೇಶನದ ಈ ಕಥೆಯಲ್ಲಿ ಇಂದ್ರಜಿತ್ ಮತ್ತು ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.

    Latest Posts

    spot_imgspot_img

    Don't Miss