Sunday, December 22, 2024
spot_img
More

    Latest Posts

    Thangalan Review: ವಿಕ್ರಮರ ನಿರೀಕ್ಷೆಯ ಬಲೂನು ಅನುಭವದ ದೃಷ್ಟಿಯಿಂದ ಠುಸ್ಸಾಗಿಲ್ಲ !

    ನಟ ವಿಕ್ರಮರ ತಂಗಲನ್‌ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಪ್ರೇಮಿಗಳ ವಿಮರ್ಶೆ ಸಮ್ಮಿಶ್ರವಾಗಿದೆ. ಒಂದಿಷ್ಟು ಮಂದಿ ಬಹಳ ಚೆನ್ನಾಗಿದೆ ಎಂದರೆ, ಇನ್ನಷ್ಟು ಮಂದಿ ಯಾಕೋ ಸಿನಿಮಾ ಹಿಡಿದಿಟ್ಟುಕೊಳ್ಳುವುದಿಲ್ಲ ಎನ್ನತೊಡಗಿದ್ದಾರೆ. ಇವರೆಲ್ಲರ ಮಧ್ಯೆ ಇನ್ನೂ ಒಂದಿಷ್ಟು ಮಂದಿ ಸುಮ್ಮನೆ ನೋಡಿ ಏನನ್ನು ಆನುಭವಿಸಬೇಕೋ ಅದನ್ನು ಅನುಭವಿಸಿ ತಣ್ಣಗಿದ್ದಾರೆ.

    ಸಿನಿಮಾಯೆ ವಿಮರ್ಶೆಯ ಪ್ರಕಾರ, ಈ ಸಿನಿಮಾವನ್ನು ನೀವು ಒಂದು ಅನುಭವವಾಗಿ ಗ್ರಹಿಸುತ್ತೀರೋ, ಮನರಂಜನೆಯಾಗಿ ಗ್ರಹಿಸುತ್ತೀರೋ ಎನ್ನುವುದು ಮುಖ್ಯ. ಒಂದು ಅನುಭವವಾಗಿ ಈ ಸಿನಿಮಾ ಗ್ರಹಿಸುವುದಾದರೆ ಇಷ್ಟವಾಗಬಹುದು. ಸಾಮಾನ್ಯ ಪ್ರೇಕ್ಷಕನಿಗೆ (ಜನರಲ್‌ ಆಡಿಯನ್ಸ್‌ ) ಸ್ವಲ್ಪ ಗೋಜಲು ಎನಿಸುವಂತಿದೆ ಚಿತ್ರಕಥೆ. ಸಿನಿಮಾಗಳಲ್ಲಿನ ಕೆಲವು ತಿರುವುಗಳು ಅನಗತ್ಯ ಎನಿಸುವಂತೆಯೂ, ಕೆಲವು ಘಟನೆಗಳು/ತಿರುವುಗಳು ಸಹಜತೆಗಿಂತ ಮಾಂತ್ರಿಕ ಎನ್ನುವಂತೆ ಘಟಿಸುವುದೂ ಇಷ್ಟವಾಗದಿರಬಹುದು. ಇಂಥ ಕೆಲವು ಸಂಗತಿಗಳ ಮಧ್ಯೆಯೂ ವಿಕ್ರಮರ ನಟನೆಗೆ ಸಿನಿಮಾ ನೋಡಬೇಕು.

    ಈಗಾಗಲೇ ವಿಕ್ರಮರೇ ಹೇಳಿಕೊಂಡಂತೆ “ಈ ಸಿನಿಮಾ ಬಹಳ ಮುಖ್ಯವಾದುದು. ನನ್ನ ಹಿಂದಿನ ಸಿನಿಮಾಗಳಿಗಿಂತ ಇದರ ಮಹತ್ವ ಹೆಚ್ಚಿದೆʼ ಎಂದಿದ್ದರು. ಅದು ಸ್ಪಷ್ಟವಾಗಿ ಎದ್ದು ಕಾಣುತ್ತದೆ ಸಿನಿಮಾದಲ್ಲಿ. ಸಿನಿಮಾ ಪೂರ್ತಿ ಆವರಿಸಿಕೊಳ್ಳುವ ವಿಕ್ರಮ್‌, ಈ ಚಿತ್ರಕ್ಕೆ ಮನಸ್‌ ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ನಟನೆಯಲ್ಲೇ ತೋರುತ್ತದೆ. Trailer here

    Thangalan: ವಿಕ್ರಮ್‌ ರ ಬಹು ನಿರೀಕ್ಷೆಯ ಬಲೂನು ಹೊಡೆಯದಿರಲಿ !

    ಅತ್ಯಂತ ಗಂಭೀರ ಹಾಗೂ ಮನೋಜ್ಞ ನಟನೆಗೆ ಹೆಸರಾದವರು ವಿಕ್ರಮ್.‌ ಪಾತ್ರಗಳನ್ನು ಗೆಲ್ಲಿಸುವತ್ತ ಹೆಚ್ಚು ಮನಸ್ಸು ಮಾಡುವವರು. ಅದೇ ಈ ಚಿತ್ರದಲ್ಲೂ ಆಗಿದೆ. ಚಿನ್ನ ಹುಡುಕುವವರ ಕಥೆಯ ಮಧ್ಯೆ ಕಥಾ ನಾಯಕ ಪಾತ್ರವನ್ನು ಗೆಲ್ಲಿಸುತ್ತಾನೆ. ಹಾಗಾಗಿಯೇ ವಿಕ್ರಮರನ್ನು ನೋಡಲಿಕ್ಕೆ ಈ ಸಿನಿಮಾಕ್ಕೆ ಹೋಗಬೇಕು. ಸಿನಿಮಾವನ್ನು ವೀಕ್ಷಿಸಿ ಎಂದೇ ಇಲ್ಲಿ ಸಿನಿಮಾಯೆ ಪೂರ್ಣ ವಿಮರ್ಶೆ ಮಾಡಿಲ್ಲ.

    ನಿರ್ದೇಶಕ ಪಾ. ರಂಜಿತ್‌ ತಮ್ಮದೇ ಶೈಲಿಯಲ್ಲಿ ಕಥೆ ಹೇಳಲು ತೊಡಗಿದ್ದಾರೆ. ವಿಶಿಷ್ಟವಾಗಿ ಕಥೆ ಹೇಳುವ ಕಲೆ ರಂಜಿತ್‌ ರಿಗಿದೆ. ಅವರ ಹಲವು ಹಿಂದಿನ ಚಿತ್ರಗಳು ಈ ನೆಲೆಯಲ್ಲೇ ನಿರೀಕ್ಷೆಯನ್ನು ಹುಟ್ಟು ಹಾಕಿದ್ದವು. ಅದರಂತೆಯೇ ಈ ಚಿತ್ರದಲ್ಲೂ ವಿಕ್ರಮ್‌ ರನ್ನು ತಮ್ಮ ಕಥೆಗೆ ದುಡಿಸಿಕೊಳ್ಳುವ ಪ್ರಯತ್ನ ಪಟ್ಟಿದ್ದಾರೆ. ಉಳಿದಂತೆ ಸಂಗೀತ ಕೆಲವು ಕಡೆ ಕೊಂಚ ಅತಿ ಎನ್ನಿಸುವುದುಂಟು. ಉಳಿದವರ ನಟನೆಯೂ ಚೆನ್ನಾಗಿದೆ. ಒಮ್ಮೆ ಅನುಭವದಂತೆ ನೋಡಲು ಅಡ್ಡಿಯಿಲ್ಲ.

    Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !

    ತಂಗಲನ್‌ ಸುಮಾರು 100- 150 ಕೋಟಿ ರೂ. ನಡಿ ನಿರ್ಮಿತವಾಗಿರುವ ಚಿತ್ರ. ಸುಮಾರು ಏಳು ವರ್ಷಗಳ ನಿರಂತರ ಕಥನದೊಂದಿಗೆ ರೂಪಿತವಾಗಿರುವಂಥದ್ದು. ನಿರ್ದೇಶಕ ಪಾ. ರಂಜಿತ್‌ ಸ್ವತಃ ಮಾಧ್ಯಮಗಳೊಂದಿಗೆ ಹಂಚಿಕೊಂಡಂತೆ, ಇದು ಚಿನ್ನ ಹುಡುಕುವ ಸಮುದಾಯದ ಕಥೆ. ಕನ್ನಡದ ಕೆಜಿಎಫ್‌ ಸರಣಿ ಚಿತ್ರಗಳು ಬಂದಾಗ ಅವು ಈ ಕಥೆಯೊಂದಿಗೆ ತಳುಕು ಹಾಕುತ್ತವೆಯೇನೋ ಎಂಬ ಆತಂಕ ಕಾಡಿತ್ತು. ಹಾಗಾಗಿ ಸಣ್ಣ ಹೋಲಿಕೆಯೂ ಬಾರದಂತೆ ಎಚ್ಚರ ವಹಿಸಿ, ಮೂಲ ಚಿತ್ರಕಥೆಯಲ್ಲಿ ಒಂದಿಷ್ಟು ಬದಲಾವಣೆಯನ್ನು ತಂದರು. ಈ ಬದಲಾವಣೆ ಎಂದರೆ ಮರು ತಿದ್ದಿದರು. ಇಷ್ಟೆಲ್ಲ ಸುಧಾರಣೆಯ ಬಳಿಕ ಚಿತ್ರವಾಗಿ ಮೂಡಿ ಬಂದಿದೆ.

    IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ

    ಸ್ಟುಡಿಯೋ ಗ್ರೀನ್‌ ನೀಲಂ ಪ್ರೊಡಕ್ಷನ್ಸ್‌, ಜಿಯೋ ಸ್ಟುಡಿಯೋಸ್‌ ಸೇರಿ ಈ ಚಿತ್ರವನ್ನು ನಿರ್ಮಿಸಿವೆ. ಕೆ ಜ್ಞಾನವೇಲು ರಾಜು ಇದರ ನಿರ್ಮಾಪಕರು. ಇವರೊಂದಿಗೆ ಇನ್ನೆರಡು ಸಂಸ್ಥೆಗಳು ವಿವಿಧ ನೆಲೆಗಳಲ್ಲಿ ಕೈ ಜೋಡಿಸಿವೆ.

    ಸಿನಿಮಾಕ್ಕೆ ಸಂಗೀತ ಒದಗಿಸಿರುವುದು ಜಿ.ವಿ. ಪ್ರಕಾಶ ಕುಮಾರ್.‌ ಸಂಕಲನ ಸೆಲ್ವ ಆರ್.‌ ಕೆ ಅವರದ್ದು. ಛಾಯಾಗ್ರಹಣ ಎ. ಕಿಶೋರ್‌ ಕುಮಾರ್‌ ರದ್ದು.

    New Movie : ಭೈರತಿ ರಣಗಲ್‌ ಸೆಪ್ಟೆಂಬರ್‌ ನಲ್ಲಿ ತೆರೆಗೆ

    ತಾರಾಗಣದಲ್ಲಿ ವಿಕ್ರಮ್‌ ಜತೆಗೆ ಮಾಳವಿಕಾ ಮೋಹನನ್‌, ಪಾರ್ವತಿ ಥಿರುವೊತು, ಡೇನಿಯಲ್‌ ಕಲ್ಟಗಿರೊನ್‌ ಮತ್ತಿತರರು ಇದ್ದಾರೆ. ಒಮ್ಮೆ ನೋಡಲಡ್ಡಿಯಿಲ್ಲ. ವಿಕ್ರಮರ ಬಹು ನಿರೀಕ್ಷೆಯ ಬಲೂನು ಠುಸ್ಸಾಗಿಲ್ಲ !

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]