ಬೆಂಗಳೂರು: ಪ್ರತಿಷ್ಠಿತ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಬಿಫೆಸ್) ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸಿದ್ಧತೆಗಳು ಬ ಹುತೇಕ ಮುಗಿದಿದೆ. ಆದ್ದರಿಂದ ಇಲ್ಲಿಯವರೆಗೂ ಓಟ, ನಾಳೆಯಿಂದ ಆಟ ಎಂದಾಗಿದೆ.
ಸಂಜೆ 5 ಕ್ಕೆ ವಿಧಾನಸೌಧದ ಅವರಣಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿತ್ರೋತ್ಸವವನ್ನು ಉದ್ಘಾಟಿಸುವರು.

ಮಾರ್ಚ್ 1 ರಿಂದ 8 ರವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಮೂರು ಸ್ಥಳಗಳಲ್ಲಿ 13 ಚಿತ್ರಮಂದಿರಗಳಲ್ಲಿ (ಸ್ಕ್ರೀನ್ಸ್) 60 ಕ್ಕೂ ಹೆಚ್ಚು ದೇಶಗಳ 200 ಕ್ಕೂ ಹೆಚ್ಚು ಸಿನಿಮಾಗಳು ಒಟ್ಟೂ 400 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣಲಿವೆ.
ಈಗಾಗಲೇ ಪ್ರತಿನಿಧಿ ನೋಂದಣಿ ಚಾಲ್ತಿಯಲ್ಲಿದ್ದು, ಸಾಕಷ್ಟು ಮಂದಿ ನೋಂದಾಯಿಸಿದ್ದಾರೆ. ಮುಖ್ಯವಾಗಿ ರಾಜಾಜಿನಗರದ ಓರಿಯಾನ್ ಮಾಲ್‌ನ ಪಿವಿಆರ್ ಸಿನಿಮಾ, ಚಾಮರಾಜಪೇಟೆಯ ಡಾ. ರಾಜಕುಮಾರ್ ಭವನ ಹಾಗೂ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಚಿತ್ರ ಪ್ರದರ್ಶನಗಳಿವೆ.

ಚಿತ್ರೋತ್ಸವದ ಆರಂಭಿಕ ಅಥವಾ ಉದ್ಘಾಟನಾ ಚಿತ್ರ ಭಾರತೀಯ ಭಾಷೆಯ ಪೈರ್. ಬಹಳ ವಿಶಿಷ್ಟವಾದ ಕಥೆಯುಳ್ಳ ಸಿನಿಮಾ. ಹಳ್ಳಿಗಳ ಭಾರತದ ನಗರ ವಲಸೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಮಸ್ಯೆಗೆ ಉತ್ತರವಾಗುವಂತೆ ಹೊಸ ನೋಟ ನೀಡುವಂತ ಕಥಾ ವಸ್ತುವಿನ ಸಿನಿಮಾ. ಭಾಷೆ ಹಿಂದಿಯದ್ದು. ಹಿಮಾಲಯದ ತಪ್ಪಲಿನ ಒಂದು ಹಳ್ಳಿಯೊಂದರ ಕಥೆ. ವಿನೋದ್ ಕಾಪ್ರಿ ಇದರ ನಿರ್ದೇಶಕ. 111 ನಿಮಿಷಗಳ ಚಿತ್ರ.
ಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಿವೆ. ಈ ಬಾರಿ ಕಂಟ್ರಿ ಫೋಕಸ್ ವಿಭಾಗದಲ್ಲಿ ಬ್ರೆಜಿಲ್ ಹಾಗೂ ಜಾರ್ಜಿಯಾ ದೇಶಗಳ ಸಿನಿಮಾಗಳು ಬಿತ್ತರಗೊಳ್ಳಲಿವೆ. ಶತಮಾನೋತ್ಸವ ಸಂಸ್ಮರಣೆಯಲ್ಲಿ ಕನ್ನಡದ ಹಿರಿಯ ನಟ ಕೆ.ಎಸ್. ಅಶ್ವತ್ಥ್, ಹಿಂದಿಯ ಗುರುದತ್ ಹಾಗೂ ಬಂಗಾಳಿ ಸಿನಿಮಾದ ನಿರ್ದೇಶಕ ಋತ್ವಿಕ್ ಘಟಕ್ ಅವರ ಸಿನಿಮಾಗಳು ವೀಕ್ಷಣೆಗೆ ಲಭ್ಯವಿರಲಿವೆ.

BigBoss:2025-ಈಗ ಸಿನಿಮಾಕ್ಕೆ ಮರಳಿ ಬರುವ ಸಮಯ !
ಭಾರತೀಯ ಉಪ ಭಾಷೆಗಳ ವಿಶಿಷ್ಟ ವಿಭಾಗದಲ್ಲಿ ಮೂರು ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಆರ್ಯನ್ ಚಂದ್ರ ಪ್ರಕಾಶ್ ಅವರ ಆಜೂರ್, ಡಾ. ಜಯಂತ ಮಧಬ್ ದತ್ತರ ಯಕಾಶಿಸ್ ಡಾಟರ್ ಹಾಗೂ ಪರಮೇಶ್ ದೇಕಾರ ಸೆವೆನ್ ಡೇಸ್ ಸಿನಿಮಾಗಳು ಪ್ರದರ್ಶಿತವಾಗುತ್ತಿವೆ.
ಜೀವನಗಾಥೆ ವಿಭಾಗದಲ್ಲಿ ಸಂಗೀತಗಾರ ಸಿ. ಅಶ್ವಥ್ ಅವರ ಬದುಕಿನ ಕುರಿತು ಮಾಯಾಚಂದ್ರ ರೂಪಿಸಿರುವ ಚಿತ್ರವೂ ಪ್ರದರ್ಶಿತವಾಗಲಿದೆ. ಇದಲ್ಲದೇ ಫ್ರಾಮ್ ಹಿಲ್ಡೆ ವಿಥ್ ಲವ್, ಐ ಆಮ್ ನೆವೆಂಕಾ, ನಿಕಿ, ಸಮಿಯಾ ಹಾಗೂ ದಿ ಸ್ವೀಡಿಷ್ ಟೊರ್ಪೊಡೋ ಚಿತ್ರಗಳಿವೆ.
Kannada Classics: ಮಾಗಿಯ ಕಾಲದಲ್ಲಿ ಮುಂಗಾರು ಮಳೆಯ ನೆನಪು ಹೂ ದುಂಬಿಯ ಜತೆಗೆ

ರೀಸ್ಟೋರ್ಡ್ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರಮುಖವಾದ ಆರು ಚಿತ್ರಗಳಿವೆ. ಅವುಗಳಲ್ಲಿ ಒಂದೆಂದರೆ ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ. ಉಳಿದವು ಇಶಾನೊ, ಕುಮ್ಮಟ್ಟಿ, ಮಾಯಾ ಮೃಗ, ಪಲ್ಲವಿ ಹಾಗೂ ಥಂಪು ಚಿತ್ರಗಳಿವೆ.
ಏಷ್ಯನ್ ಸಿನಿಮಾ, ಚಿತ್ರ ಭಾರತಿ ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗಗಳಿವೆ. ಜನಪ್ರಿಯ ಸಿನಿಮಾ, ಶ್ರದ್ಧಾಂಜಲಿ ಇತ್ಯಾದಿ ವಿಭಾಗಗಳಲ್ಲಿ ಸಾಕಷ್ಟು ಸಿನಿಮಾಗಳು ಚಿತ್ರರಸಿಕರಿಗೆ ವೀಕ್ಷಣೆಗೆ ಲಭ್ಯವಾಗಲಿವೆ.