Friday, March 14, 2025
spot_img
More

    Latest Posts

    IIFA: ಪ್ರಶಸ್ತಿ ಬಾಚಿಕೊಂಡ ಲಾಪತಾ ಲೇಡೀಸ್‌, ಭೂಲ್‌ ಭೂಲಯ್ಯಾ 3 ಹಾಗೂ ಕಿಲ್‌ ಚಿತ್ರಗಳು

    ನವದಿಲ್ಲಿ: ಈ ವರ್ಷದ ಐಐಎಫ್‌ ಎ (ಇಂಟರ್‌ ನ್ಯಾಷಲನ್‌ ಇಂಡಿಯನ್‌ ಫಿಲ್ಮ್‌ ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿ ಪ್ರಕಟವಾಗಿದೆ.

    ಆಸ್ಕರ್‌ ಗೆ ನಾಮ ನಿರ್ದೇಶನಗೊಂಡಿದ್ದ ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡೀಸ್‌ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.

    ಸಾಮಾಜಿಕ ಸಂಗತಿಯನ್ನು ಆಧರಿಸಿ ರೂಪಿಸಿದ್ದ ಚಿತ್ರ ಲಾಪತಾ ಲೇಡೀಸ್.‌ ಈ ಸಿನಿಮಾಕ್ಕೆ ಹತ್ತು ಪ್ರಶಸ್ತಿಗಳು ಸಂದಾಯವಾಗಿವೆ. ಅತ್ಯುತ್ತಮ ನಿರ್ದೇಶನಕ್ಕೆ ಕಿರಣ್‌ ರಾವ್‌ ಪುರಸ್ಕಾರ ಗಳಿಸಿದ್ದಾರೆ.

    ಲಾಪತಾ ಲೇಡೀಸ್‌ ಚಿತ್ರವು ಅತ್ಯುತ್ತಮ ನಟನೆ (ನಾಯಕಿ), ಅತ್ಯುತ್ತಮ ಪೋಷಕ ನಟ ಸೇರಿದಂತೆ ಹತ್ತು ಪ್ರಶಸ್ತಿಗಳನ್ನು ಗಳಿಸಿದೆ. ಇದರೊಂದಿಗೆ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ನಟ ರಾಕೇಶ್‌ ರೋಷನ್‌ ಅವರಿಗೂ ಪುರಸ್ಕಾರವಿತ್ತು ಸನ್ಮಾನಿಸಲಾಗಿದೆ.

    Biffes: ಬೆಂಗಳೂರು ಚಿತ್ರೋತ್ಸವ : ಶಬನಾ ಅಜ್ಮಿಗೆ ಪುರಸ್ಕಾರ, ಇರಾನ್‌ ಚಿತ್ರಕ್ಕೆ ಏಷ್ಯನ್‌, ಮಿಕ್ಕ ಬಣ್ಣದ ಹಕ್ಕಿಗೆ ಕನ್ನಡ ಚಿತ್ರ ಪ್ರಶಸ್ತಿ

    ಪುರಸ್ಕೃತರ ವಿವರ ಇಲ್ಲಿದೆ :

    ಅತ್ಯುತ್ತಮ ಚಿತ್ರ – ಲಾಪತಾ ಲೇಡೀಸ್‌

    ಅತ್ಯುತ್ತಮ ನಟ – ಕಾರ್ತಿಕ್‌ ಆರ್ಯನ್‌ (ಭೂಲ್‌ ಭುಲೈಯಾ 3)

    ಅತ್ಯುತ್ತಮ ನಟಿ – ನಿತಾಂಶಿ ಗೋಯಲ್‌ (ಲಾಪತಾ ಲೇಡೀಸ್‌ )

    ಅತ್ಯುತ್ತಮ ನಿರ್ದೇಶನ – ಕಿರಣ್‌ ರಾವ್‌ (ಲಾಪತಾ ಲೇಡೀಸ್)‌

    ಅತ್ತುತ್ತಮ ಖಳ ನಾಯಕ – ರಾಘವ್‌ ಜುಯಾಲ್‌ (ಕಿಲ್)‌

    ಅತ್ಯುತ್ತಮ ಪೋಷಕ ನಟ – ರವಿ ಕಿಷನ್‌ (ಲಾಪತಾ ಲೇಡೀಸ್)‌

    ಅತ್ಯುತ್ತಮ ಪೋಷಕ ನಟಿ – ಜಾನಕಿ ಬೋದಿವಾಲ (ಶೈತಾನ್‌)

    ಅತ್ಯುತ್ತಮ ಕಥೆ (ಜನಪ್ರಿಯ ವಿಭಾಗ)- ಬಿಪ್ಲಬ್‌ ಗೋಸ್ವಾಮಿ (ಲಾಪತಾ ಲೇಡೀಸ್)‌

    ಅತ್ಯುತ್ತಮ ಕಥೆ (ಅಡಾಪ್ಟೇಷನ್‌ )- ಶ್ರೀರಾಂ ರಾಘವನ್‌, ಅರ್ಜಿತ್‌ ಬಿಸ್ವಾಸ್‌, ಪೂಜಾ ಲಾಧಾ ಸುರತಿ, ಅನುಕೃತಿ ಪಾಂಡೆ (ಮೆರಿ ಕ್ರಿಸ್‌ ಮಸ್)

    ಅತ್ಯುತ್ತಮ ಚಿತ್ರ ಕಥೆ – ಸ್ನೇಹಾ ದೇಸಾಯಿ (ಲಾಪತಾ ಲೇಡೀಸ್)

    ಅತ್ಯುತ್ತಮ ಸಂಭಾಷಣೆ – ಅರ್ಜುನ್‌ ಧವನ್‌, ಆದಿತ್ಯ ಧಾರ್‌, ಆದಿತ್ಯ ಸುಹಾಸ್‌ ಜಂಬಲೆ, ಮೊನಾಲ್‌ ಥಕರ್‌ (ಆರ್ಟಿಕಲ್‌ 370)

    ಮಲಯಾಳಂ ಚಿತ್ರರಂಗ: ಉಳಿದವುಗಳ ಕಥೆ ಇನ್ನೂ ತಿಳಿಯಬೇಕಿದೆ !

    ಅತ್ಯುತ್ತಮ ಗೀತ ಸಾಹಿತ್ಯ – ಪ್ರಶಾಂತ್‌ ಪಾಂಡೆ (ಲಾಪತಾ ಲೇಡೀಸ್)‌

    ಅತ್ಯುತ್ತಮ ಚೊಚ್ಚಲ ನಿರ್ದೇಶನ – ಕುನಾಲ್‌ ಕೆಮ್ಮು (ಮಡಗಾಂವ್‌ ಎಕ್ಸ್‌ ಪ್ರೆಸ್)‌

    ಉದಯೋನ್ಮುಖ ನಟ – ಲಕ್ಷ್ಯ ಲಲ್ವಾನಿ (ಕಿಲ್‌)

    ಉದಯೋನ್ಮುಖ ನಟಿ – ಪ್ರತಿಭಾ ರಾಂತಾ (ಲಾಪತಾ ಲೇಡೀಸ್)‌

    ಅತ್ಯುತ್ತಮ ಸಂಗೀತ ನಿರ್ದೇಶನ – ರಾಮ್‌ ಸಂಪತ್‌ (ಲಾಪತಾ ಲೇಡೀಸ್)‌

    ಅತ್ಯುತ್ತಮ ಹಿನ್ನೆಲೆ ಗಾಯಕ – ಜುಬಿನ್‌ ನೌಟಿಯಾಲ (ಆರ್ಟಿಕಲ್‌ 370)

    ಅತ್ಯುತ್ತಮ ಹಿನ್ನೆಲೆ ಗಾಯಕಿ – ಶ್ರೇಯಾ ಘೋಷಾಲ್‌ ( ಭೂಲ್‌ ಭುಲಯ್ಯಾ 3)

    ಅತ್ಯುತ್ತಮ ಧ್ವನಿ ವಿನ್ಯಾಸ – ಸುಭಾಷ್‌ ಸಾಹೂ, ಬೋಲೊಯ್‌ ಕುಮಾರ ದೊಲೊಯಿ, ರಾಹುಲ್‌ ಕರ್ಪೆ (ಕಿಲ್)‌

    ಅತ್ಯುತ್ತಮ ಸಂಕಲನ – ಜಬೀನ್‌ ಮರ್ಚೆಂಟ್‌ (ಲಾಪತಾ ಲೇಡೀಸ್)‌

    Sky Force: ಅಕ್ಷಯ್ ಕುಮಾರ್‌ ಚಿತ್ರ ಜಗತ್ತೇ ಹಾವು ಏಣಿ ಆಟ

    ಅತ್ಯುತ್ತಮ ಛಾಯಾಗ್ರಹಣ – ರಫೀ ಮೊಹ್ಮೊದ್‌ (ಕಿಲ್)‌

    ಅತ್ಯುತ್ತಮ ನೃತ್ಯ ನಿರ್ದೇಶನ – ಬೊಸ್ಕೊ ಸೀಸರ್‌ (ಬ್ಯಾಡ್‌ ನ್ಯೂಜ್)‌

    ಅತ್ಯುತಮ ಸ್ಪೆಷಲ್‌ ಎಫೆಕ್ಟ್ಸ್‌ – ರೆಡ್‌ ಚಿಲ್ಲಿಸ್‌ ವಿಎಫ್‌ ಎಕ್ಸ್‌ (ಭೂಲ್ ಭುಲಯ್ಯಾ 3)

    Latest Posts

    spot_imgspot_img

    Don't Miss