ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ‘ಕಣ್ಣಪ್ಪ; ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಸಿನಿಮಾಕ್ಕೆ ಈಗ ಅಕ್ಷಯ ಕುಮಾರ್ ಪ್ರವೇಶವಾಗಿದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಸಿನಿಮಾವಿದು. ಇದರ ಮುಖ್ಯ ಆಕರ್ಷಣೆಯೇ ತಾರಾಗಣ. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಚಿತ್ರವಿದು.
ರಾಷ್ಟ್ರಮಟ್ಟದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣದ ಸೆಟ್ ಹಾಕಲಾಗಿದ್ದು, ಚಿತ್ರೀಕರಣವೂ ಭರದಿಂದ ನಡೆಯುತ್ತಿದೆ. ಸಾಹಸ ದೃಶ್ಯಗಳಲ್ಲಿ ಅಕ್ಷಯ್ ಕಾಣಿಸಿಕೊಳ್ಳುವರು.
ವಿಷ್ಣು ಮಂಚು ಪ್ರಕಾರ “ಇದೊಂದು ರೋಮಾಂಚಕ ಅನುಭವ. ಅಕ್ಷಯ್ ಜೊತೆ ನಟಿಸುತ್ತಿರುವುದೇ ದೊಡ್ಡ ಸಂಗತಿ. ಅಕ್ಷಯ್ ಸೇರ್ಪಡೆ ಮೂಲಕ ನಮ್ಮ ಚಿತ್ರ ನಿಜಕ್ಕೂ ರಾಷ್ಟ್ರೀಯ ಮಟ್ಟದ್ದಾಗಲಿದೆʼ ಎನ್ನುತ್ತಾರೆ.
ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರದಲ್ಲಿ ಶಿವರಾಜ ಕುಮಾರ್, ಪ್ರಭಾಸ್, ಮೋಹನ್ ಲಾಲ್ ಅಲ್ಲದೇ ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ ಆಭಿನಯಿಸುತ್ತಿದ್ದಾರೆ. ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ, ಸಾಹಸ ನಿರ್ದೇಶಕ ಕೆಚ ಖಂಫಕ್ಡಿ, ನಟ ಪ್ರಭುದೇವ ತಾಂತ್ರಿಕ ಬಳಗದಲ್ಲಿದ್ದಾರೆ.