Thursday, April 24, 2025
spot_img
More

    Latest Posts

    ವೆನಿಸ್‌ ನಲ್ಲಿ ಘಟಶ್ರಾದ್ಧಕ್ಕೆ ಅಭಿನಂದನೆ ; ಜಾಫ್ನಾ ಚಿತ್ರೋತ್ಸವದಲ್ಲಿ ಗಿರೀಶ್‌ ಕಾಸರವಳ್ಳಿಯವರಿಗೆ ಪುರಸ್ಕಾರ

    ಪುನರ್‌ ರೂಪಿತ ಗಿರೀಶ್‌ ಕಾಸರವಳ್ಳಲಿಯವರ ಘಟಶ್ರಾದ್ಧ ಸಿನಿಮಾ ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆಯಿತು.

    “ಇದೊಂದು ಅಪೂರ್ವ ಕ್ಷಣ ಎನ್ನುವುದಕ್ಕಿಂತಲೂ ಯಾವುದು ಸಾಧ್ಯವಿಲ್ಲವೇ ಎಂದುಕೊಂಡಿರುತ್ತೇವೆಯೋ ಅದೂ ಸಾಧ್ಯವಾಗಿರುವಂಥ ಕ್ಷಣ. ಹಾಗಾಗಿ ಅಚ್ಚರಿ, ಬೆರಗು, ಸಂತೋಷ ಎಲ್ಲವೂ ಇದೆʼ ಎಂದು ವೆನಿಸ್‌ ಚಿತ್ರೋತ್ಸವದ ಸಂದರ್ಭದಲ್ಲಿ ಗಿರೀಶ್‌ ಕಾಸರವಳ್ಳಿಯವರು ಹೇಳಿದ್ದರು.

    Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !

    ವೆನಿಸ್‌ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಅವರು, ಘಟಶ್ರಾದ್ಧದ ಕಾಪಿ ಎಲ್ಲ ಹಾಳಾಗಿ ಹೋಗಿತ್ತು. ಧ್ವನಿ ಎಲ್ಲದರ ಗುಣಮಟ್ಟವೂ ಕರಗಿತ್ತು. ಈ ಸಿನಿಮಾ ಮತ್ತೊಮ್ಮೆ ಅದೇ ವೈಭವದಲ್ಲಿ ನೋಡಲು ಸಾಧ್ಯವೇ ಇಲ್ಲ ಎಂದು ಮನಸಿಗೆ ಅನಿಸಿತ್ತು. ಆದರೆ ಫಿಲ್ಮ್‌ ಹೆರಿಟೇಜ್‌ ಫೌಂಡೇಷನ್‌ ನ ಶಿವೇಂದ್ರ ಡುಂಗರ್‌ ಪುರ್‌ ಹಾಗೂ ನಿರ್ದೇಶಕ ಮಾರ್ಟಿನ್‌ ಸೊರ್ಸಸ್‌ ರ ಫೌಂಡೇಷನ್‌ ಅದನ್ನು ಸಂಪೂರ್ಣವಾಗಿ ಪುನರ್‌ ರೂಪಿಸಿದೆ. ಇದಕ್ಕಿಂತ ಖುಷಿಯಾದುದು ಏನಿದೆ?ʼ ಎಂಬುದು ಗಿರೀಶರ ಅಭಿಪ್ರಾಯವಾಗಿತ್ತು.

    New Movie: ರಮೇಶ್‌ ಅರವಿಂದ್-‌ಗಣೇಶರಲ್ಲದೇ ಈ ನಿಮ್ಮ ಪ್ರೀತಿಯ ರಾಮ್‌ ಯಾರು?

    ವಾಸ್ತವವಾಗಿ ತಮ್ಮ ಮೆಚ್ಚಿನ ವಸ್ತುವೊಂದು ಕಳೆದು ಹೋಗಿ ಬೇಸರದಲ್ಲಿದ್ದಾಗ ಅಲ್ಲೇ ಎಲ್ಲೋ ಕಾಲಿಗೆ ತಾಗುವಂತೆ ತಾಗಿ ಸಿಕ್ಕಿಬಿಟ್ಟರೆ ಹೇಗನ್ನಿಸಬಹುದೋ ಹಾಗೆಯೇ ಒಬ್ಬ ಸಿನಿಮಾ ನಿರ್ದೇಶಕನಿಗೆ ಒಂದು ಸಿನಿಮಾ ತನ್ನ ಕೈಯಲ್ಲಿದ್ದ ಪಕ್ಷಿಯಂತೆ. ಅದು ಎಲ್ಲೆಲ್ಲೋ ಹಾರಿ ವಾಪಸು ಕೈಗೆ ಬಂದು ಕುಳಿತರೆ ಹೇಗಾಗುತ್ತದೋ ಅದರಂತೆಯೇ ಘಟಶ್ರಾದ್ಧ ಪುನರ್‌ ರೂಪಿತವಾಗಿದೆ.

    ವೆನಿಸ್ ಚಿತ್ರೋತ್ಸವದಲ್ಲಿಘಟಶ್ರಾದ್ಧಕ್ಕೆ ಸಿಕ್ಕ ಪ್ರತಿಕ್ರಿಯೆ ಅಮೋಘವಾದುದು. ಚಿತ್ರದ ಕಥಾವಸ್ತುವಿನಿಂದ ಹಿಡಿದು ಅದನ್ನು ನಿರೂಪಿಸಿದ ಬಗೆ, ಲಯ ಹಾಗೂ ಸಂಗೀತದ ಬಗ್ಗೆ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ಚಿತ್ರ ಹೆಚ್ಚು ಚರ್ಚೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಗಿರೀಶರಿಗೆ ಮತ್ತೊಂದು ಖುಷಿ ಕೊಡುವ ಸಂಗತಿ ಒಲಿದು ಬಂದಿದೆ.

    ಭಾರತೀಯ ಹಾಗೂ ಕನ್ನಡ ಚಿತ್ರರಂಗದಲ್ಲಿನ ಅವರ ಜೀವಮಾನ ಸಾಧನೆಗಾಗಿ ಜಾಫ್ನಾ ಚಿತ್ರೋತ್ಸವದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

    IFFM:ಕಿರುಚಿತ್ರಗಳೆಂದು ಕಡೆಗಣಿಸಬೇಡಿ, ಗಂಭೀರವಾಗಿ ಪರಿಗಣಿಸಿ

    ಸೆ. 3 ರಿಂದ ಆರಂಭವಾಗಿರುವ ಸಿನಿಮೋತ್ಸವ ಸೆ. 9 ರಂದು ಸಮಾರೋಪಗೊಳ್ಳಲಿದೆ. ಈ ಸಂದರ್ಭದಲ್ಲಿ ಗಿರೀಶ್‌ ಕಾಸರವಳ್ಳಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ. ಈ ಚಿತ್ರೋತ್ಸವದಲ್ಲಿ ಗಿರೀಶರ ಘಟಶ್ರಾದ್ಧ, ಕನಸೆಂಬೋ ಕುದುರೆಯನ್ನೇರಿ, ದ್ವೀಪ ಹಾಗೂ ತಾಯಿಸಾಹೇಬ ಚಲನಚಿತ್ರಗಳು ಪ್ರದರ್ಶಿಸಲಾಗಿದೆ. ಜತೆಗೆ ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಕ್ಲಾಸ್‌ ಹಾಗೂ ಗಿರೀಶ ಕಾಸರವಳ್ಳಿಯವರ ಸಂವಾದವನ್ನೂ ಏರ್ಪಡಿಸಲಾಗಿತ್ತು. ಪ್ರೊ. ಅಂಕುರ್‌ ದತ್‌ ರದ್ದು ಈ ಸಂವಾದದ ನಿರ್ವಹಣೆಯ ಹೊಣೆ.

    Latest Posts

    spot_imgspot_img

    Don't Miss