Friday, March 21, 2025
spot_img
More

    Latest Posts

    FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

    ಮಿಣುಕು ಹುಳು ಅಥವಾ ಮಿಂಚುಹುಳು. ಸೀದಾ ಸಾದಾ ಹೇಳುವುದಾದರೆ ಮಿಂಚುಳು. ತುಂಬಿದ ಕತ್ತಲೆಯ ಮಧ್ಯೆ ಅಲ್ಲಲ್ಲಿ ಹಾರುತ್ತಾ ಮಿನುಗುವ ಮಿಂಚು ಹುಳು ಹೇಗೋ ಹಾಗೆಯೇ ಬದುಕಿನ ಗವಿಯ ಪಯಣದಲ್ಲೂ ಸಣ್ಣ ಸಣ್ಣ ಸಂಗತಿ, ಸುಖ, ಸಮಾಧಾನಗಳೇ ಮಿಂಚು ಹುಳುವಿನಂತೆಯೇ ದಾರಿ ತೋರುತ್ತವೆ. ಅದಕ್ಕೇ ಕತ್ತಲೆಯನ್ನು ಸೀಳಿ ಬಿಟ್ಟೇನೆಂಬ ಅಹಂಕಾರವಲ್ಲ; ಸೀಳಿಯಾನೆಂಬ ಆತ್ಮವಿಶ್ವಾಸ.

    ಮಾಧ್ಯಮಗಳಲ್ಲಿ ನ್ಯೂಸ್‌ ಅಂಕರ್‌ ಅಗಿದ್ದ, ನಿರೂಪಕಿಯಾಗಿದ್ದ ಶೀತಲ್‌ ಶೆಟ್ಟಿ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಿಂಚು ಹುಳುವಾಗಿ.

    Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

    ನಟ ಶಿವರಾಜಕುಮಾರ್‌ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್‌ ಶ್ರೀ ಮುತ್ತು ಸಿನಿ ಸರ್ವೀಸಸ್‌ ಮೂಲಕ ನಿರ್ಮಿಸುತ್ತಿರುವ ಚಿತ್ರದ ಹೆಸರು ʼಫೈರ್‌ ಫ್ಲೈʼ. ಶೀತಲ್‌ ಶೆಟ್ಟಿ ಸಹ ನಿರೂಪಕಿ ಸಾಕೆನಿಸಿ ಸಿನಿಮಾ ರಂಗಕ್ಕೆ ಬಂದರು. ನಟಿಸಿದರು, ನಿರ್ದೇಶಿಸಿದರು. ಚೇಸ್‌, ಪತಿಬೇಕು.ಕಾಮ್‌ ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ ಶೀತಲ್‌ ಶೆಟ್ಟಿ ದಿವ್ಯವಾಗಿ ಕಾಣಿಸಿಕೊಳ್ಳುತ್ತಿರುವುದು ಫೈರ್‌ ಫ್ಲೈನಲ್ಲಿ.

    ಈ ಚಿತ್ರದ ನಿರ್ದೇಶಕರು ವಂಶಿ. ಅವರಿಗೆ ಇದು ಚೊಚ್ಚಲ ಚಿತ್ರ. ಚಿತ್ರ ನಿರ್ಮಾಪಕಿ ನಿವೇದಿತಾರಿಗೂ ಇದು ಚೊಚ್ಚಲ ಚಿತ್ರ. ಒಟ್ಟಿನಲ್ಲಿ ಫೈರ್‌ ಫ್ಲೈ ಮೂಲಕ ಮೂರು ಮಿಂಚು ಹುಳುಗಳು ಹಾರತೊಡಗಲಿವೆ. ಈ ಸಿನಿಮಾದಲ್ಲಿ ವಂಶಿ ನಾಯಕ ನಟ ಸಹ. ಎರಡು ಪಾತ್ರ. ಹೇಳಿ ಮಾಡಿಸುವುದು ಹಾಗೂ ಮಾಡುವುದು.

    ಸಿನಿಮಾದಲ್ಲಿ ಶೀತಲ್‌ ರದ್ದು ತುಂಬಾ ಪ್ರಬುದ್ಧ ಪಾತ್ರವಂತೆ. ಬದುಕಿನ ಓಘವನ್ನು ಅನುಭವಿಸುತ್ತಲೇ ಸಂಬಂಧಗಳ ಸಂಕೀರ್ಣತೆ, ಸೂಕ್ಷ್ಮತೆಯನ್ನು ಅರಿತುಕೊಳ್ಳುವ, ಅರ್ಥ ಮಾಡಿಕೊಳ್ಳುವಂಥ ಪಾತ್ರ. ಹಾಗೆಯೇ ಇಡೀ ಚಿತ್ರದುದ್ದಕ್ಕೂ ಲವಲವಿಕೆಯಿಂದ ಇರುವ ಪಾತ್ರ. ಹಲವು ಬಾರಿ ನಾವು ಆಯ್ದುಕೊಳ್ಳುವ ಪಾತ್ರಗಳು ನಮ್ಮ ಬದುಕಿನಲ್ಲೇ ಇರುತ್ತವೆ ಎಂಬ ಮಾತಿದೆ. ಇದರಂತೆ ಶೀತಲ್‌, ನನಗೆ ಹೇಳಿ ಮಾಡಿಸಿದ ಪಾತ್ರ. ನಾನು ಇದನ್ನು ಎದುರುಗೊಳ್ಳುತ್ತಿರುವುದರಿಂದ ನಟನೆಯೂ ಸುಲಭವಾಯಿತು ಎಂದದ್ದಿದೆ.

    Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !

    ವಂಶಿ ಅವರು ಪಿಆರ್‌ ಕೆ ಪ್ರೊಡಕ್ಷನ್ಸ್‌ ನ ಮಾಯಾ ಬಜಾರ್‌ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಪೆಂಟಗನ್‌ ಚಿತ್ರದಲ್ಲಿ ನಟಿಸಿದ್ದರೂ ಸಹ.

    ನೋಡುವ, ಮೂರು ಮಿಂಚುಹುಳಗಳು ಒಟ್ಟಿಗೆ ಪರದೆ ತುಂಬಾ ಹಾರಾಡುತ್ತಾ ಕತ್ತಲೆಯನ್ನು ಸೀಳುತ್ತಾವೆಯೇ ಕಾದು ನೋಡೋಣ.

    ಇದರ ಮಧ್ಯೆ, ಈ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಜಯರಾಮ್‌, ಛಾಯಾಗ್ರಹಕರಾಗಿ ಅಭಿಲಾಷ್‌ ಕಳತ್ತಿ, ಸಂಗೀತ ನಿರ್ದೇಶಕರಾಗಿ ಚರಣರಾಜ್‌ ನಿರ್ವಹಿಸಿದರೆ, ಸಂಭಾಷಣೆದ ಪೂರೈಸಿದವರು ರಘು ನಿಡುವಳ್ಳಿ.

    Karlovy Vary IFF : ಜೂನ್‌ 28-ಜುಲೈ 6 ರವರೆಗೆ ಮತ್ತೊಂದು ಸಿನಿಮೋತ್ಸವ

    ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ದೀಪಾವಳಿಗೆ ಪಟಾಕಿಗಳೊಂದಿಗೆ ಮಿಂಚು ಹುಳು ಕೋರೈಸಬಹುದು.  ಬೆಳಕಿನ ಹಬ್ಬದ ಬೆಳಕು ಇನ್ನಷ್ಟು ಹೆಚ್ಚಬಹುದು.

    Latest Posts

    spot_imgspot_img

    Don't Miss