ತಿರುವನಂತಪುರಂ: ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 29 ನೇ ಆವೃತ್ತಿಯ ಮೂರನೇ ದಿನ ರವಿವಾರವೂ ಮುಗಿಯುತ್ತಾ ಬಂದಿದೆ. ನಾಲ್ಕನೆಯ ದಿನ ತೆರೆದುಕೊಳ್ಳುವ ಮುನ್ನ ಒಮ್ಮೆ ಹಿಂತಿರುಗಿ ನೋಡಿದರೆ, ರವಿವಾರ ಸಿನಿಮಾಗಳ ಸಂತೆಯೇ ಸಿನಿ ಪ್ರಿಯರ ಎದುರಿತ್ತು. ಆಯ್ಕೆಯೇ ಸವಾಲಾಗಿತ್ತು. ಹಾಗಾಗಿ ರವಿವಾರ ಸಿನಿಪ್ರಿಯರ ಹೌಸ್ ಫುಲ್ ಇದ್ದದ್ದೇ. ಆದರೆ ಸಿನಿಮಾಗಳೇ ಹೌಸ್ ಫುಲ್ ಎನಿಸಿತು !
ಅಂತಾರಾಷ್ಟ್ರೀಯ ಸಿನಿಮಾಗಳ ಸ್ಪರ್ಧೆ ವಿಭಾಗದಲ್ಲಿ ಐದು ಚಲನಚಿತ್ರಗಳು ಇದ್ದವು. ಬ್ರೆಜಿಲ್, ಕೋಸ್ಟರಿಕಾ, ಈಜಿಪ್ಟ್, ಅರ್ಜೆಂಟೈನಾ, ಸ್ಪೇನ್ ನ ಚಿತ್ರಗಳು. ಒಂದಕ್ಕಿಂತ ಮತ್ತೊಂದು ವಿಭಿನ್ನವಾದ ಕಥಾವಸ್ತುವನ್ನು ಹೊಂದಿರುವಂಥವು. ಅವುಗಳೊಂದಿಗೆ ಇಂದಿನ ಭಾರತೀಯ ಸಿನಿಮಾಗಳ ವಿಭಾಗದಲ್ಲಿ ನಾಲ್ಕು ಚಿತ್ರಗಳಿದ್ದವು. ಸಿನಿಮೋತ್ಸವಗಳಿಂದ ಬಂದದ್ದು ಐದು, ವಿಶ್ವದ ಸಿನಿಮಾಗಳ ವಿಭಾಗದಲ್ಲಿ 23.
Rishabh: ಕಾಂತಾರದ ರಿಷಭ್ ರನ್ನು ಶಿವಾಜಿಯಾಗಿ ಕಾಣಲು ಮೂರು ವರ್ಷ ಕಾಯಬೇಕು !
ಇವುಗಳೊಂದಿಗೆ ಇಂದಿನ ಮಲಯಾಳಂ ಸಿನಿಮಾಗಳಲ್ಲಿ ಐದು ಚಲನಚಿತ್ರಗಳು ವೀಕ್ಷಣೆಗೆ ಲಭ್ಯವಿದ್ದವು. ಮೊಹಮ್ಮದ್ ರಸೂಲ್ಫ್ ನವರ ದಿ ಸೀಡ್ ಆಫ್ ಸೀಕ್ರೆಡ್ ಫಿಗ್ ಸಹ ಇಂದೇ ಪ್ರದರ್ಶನಕ್ಕಿತ್ತು. ಜತೆಗೆ ಮಾತುಕತೆ ಇತ್ತು ಜೀವಿತಾವಧಿ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಆನ್ ಹೂಯಿ ಅವರೊಂದಿಗೆ.
ಸಿನಿಮೋತ್ಸವ ಡಿಸೆಂಬರ್ 20 ರವರೆಗೆ ನಡೆಯಲಿದೆ. ಮೂರು ದಿನಗಳ ಹಿಂದೆ ಡಿ. 14 ರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿನಿಮೋತ್ಸವವನ್ನು ಉದ್ಘಾಟಿಸಿ ಹೇಳಿದ ಮಾತು ಸಿನಿಮೋತ್ಸವದಲ್ಲಿ ಚರ್ಚೆಗೆ ತೆರೆದುಕೊಂಡಿದೆ.
ಸಿನಿಮಾಗಳು ವೈವಿಧ್ಯಮಯವಾಗಿರಬೇಕು. ಹೆಚ್ಚು ವೈವಿಧ್ಯಮಯ ಕಥಾವಸ್ತುಗಳು, ಕಥನಗಳು, ನಿರೂಪಣೆಗಳು ಬಂದಷ್ಟೂ ಸಿನಿಮಾ ಜಗತ್ತು ಶೋಭಿಸಲು ಸಾಧ್ಯ. ಕಾರ್ಪೋರೇಟ್ ಕಂಪೆನಿಗಳೂ ಇಂದು ಸಿನಿಮಾ ಜಗತ್ತಿಗೆ ಕಾಲಿಟ್ಟಿರುವುದು ಅಚ್ಚರಿಯ ಸಂಗತಿಯಲ್ಲ. ಆದರೆ ತಮಗೆ ಬೇಕಾದಂತೆ ಮತ್ತು ಬೇಕಾದ ಮಾದರಿಯ ನಿರೂಪಣೆ-ಕಥನಗಳನ್ನು ತಂದರೆ ವೈವಿಧ್ಯತೆಗೆ ಭಂಗವಾಗಬಹುದು ಎಂಬುದು ಉದ್ಘಾಟಕರ ಆತಂಕ.
ಮೋಡ ಮುಸುಕಿದ ಬಾನಿನಲ್ಲಿ ತಾರೆಗಳು ತೋರುತ್ತಿರಲಿಲ್ಲ; ಎಲ್ಲವೂ ಭೂಮಿ ಮೇಲೆ ಮಿಂಚುತ್ತಿದ್ದವು !
ಈ ಬಾರಿ ಜೀವಿತಾವಧಿ ಪ್ರಶಸ್ತಿಯನ್ನು ಹಾಂಗ್ ಕಾಂಗ್ ನ ಸಿನಿಮಾ ನಿರ್ದೇಶಕಿ ಆನ್ ಹೂಯಿ ಅವರಿಗೆ ನೀಡಿ ಗೌರವಿಸಲಾಗಿದೆ. ಆನ್ ಹೂಯಿ ಬಹಳ ಪ್ರಮುಖವಾದ ನಿರ್ದೇಶಕಿ ಜಾಗತಿಕ ಸಿನಿಮಾ ರಂಗದಲ್ಲಿ. ಪುರಸ್ಕಾರವನ್ನು ಸ್ವೀಕರಿಸಿ ಹೇಳಿದ ಒಂದು ವಾಕ್ಯ ಬಹಳ ಹುರುಪು ತುಂಬುವಂಥದ್ದು.
“ನಾನು ಸಿನಿಮಾ ಮಾಡಿದ್ದಕ್ಕೆ ಗೌರವಿಸುತ್ತಿರುವುದು ಸ್ವೀಕರಿಸುತ್ತೇನೆ. ಆದರೆ ಬರೀ ಸಿನಿಮಾ ಮಾಡಿದವರನ್ನು ಪುರಸ್ಕರಿಸುವುದಲ್ಲ, ಅದಕ್ಕಿಂತಲೂ ಅವರ ಸಿನಿಮಾಗಳನ್ನು ವೀಕ್ಷಿಸಿ, ಅರ್ಥ ಮಾಡಿಕೊಂಡು ಬೆಂಬಲಿಸಿದ ಸಿನಿ ಪ್ರಿಯರಿಗೂ ಈ ಗೌರವ ಸಲ್ಲಬೇಕುʼ.
ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ ಖ್ಯಾತ ನಟಿ ಶಬನಾ ಅಜ್ಮಿ ಅವರ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸುವ ಮೂಲಕ ಅಭಿನಂದಿಸುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಶಬನಾ ಅವರನ್ನೂ ಸನ್ಮಾನಿಸಲಾಯಿತು.
From Ground Zero: ಪ್ಯಾಲೆಸ್ತೀನ್ ನ ಪ್ರಸ್ತುತ ಸ್ಥಿತಿಗೆ ಈ 22 ಸಿನಿಮಾ ಕನ್ನಡಿ
ಸಿನಿಮಾ ಎಂಬುದು ಒಂದು ಒಕ್ಕೂಟ ಕಲೆ. ಹಲವರ ಶ್ರಮದಿಂದ ಒಂದು ಸಿನಿಮಾ ರೂಪುಗೊಳ್ಳುತ್ತದೆ. ಆದರೆ ಹಲವು ಬಾರಿ ನಟರು ಒಂದು ಸಿನಿಮಾದ ಯಶಸ್ಸಿನ ಬಹುಭಾಗವನ್ನು ಸವಿಯುತ್ತಾರೆ. ಸಿನಿಮಾದ ಹಿಂದಿನ ಶಕ್ತಿಯಾದ ತಾಂತ್ರಿಕ ವರ್ಗವನ್ನು ಮರೆಯುವಂತಿಲ್ಲ ಎಂದವರು ಶಬನಾ ಆಜ್ಮಿ.
ಚಿತ್ರೋತ್ಸವದಲ್ಲಿ 68 ದೇಶಗಳ 177 ಸಿನಿಮಾಗಳನ್ನು 15 ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ವಾಲ್ಟರ್ ಸೆಲೆಸ್ ನ ಐ ಆಮ್ ಸ್ಟಿಲ್ ಹಿಯರ್ ಸಿನಿಮಾ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗಿತ್ತು.
ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ 14 ಸಿನಿಮಾಗಳಲ್ಲದೇ ಮಲಯಾಳಂ ಸಿನಿಮಾ ಇಂದು, ಭಾರತೀಯ ಸಿನಿಮಾ ಇಂದು, ವಿಶ್ವ ಸಿನಿಮಾ, ಫೆಸ್ಟಿವಲ್ ಫೇವರಿಟ್ಸ್, ಕಂಟ್ರಿ ಫೋಕಸ್, ರೆಟ್ರಾಸ್ಪೆಕ್ಟಿವ್, ಫೀಮೆಲ್ ಗೇಜ್, ಲ್ಯಾಟಿನ್ ಅಮೆರಿಕನ್ ಸಿನಿಅಮ, ಕಲೆಡೊಸ್ಕೊಪ್, ಮಿಡ್ ನೈಟ್ ಸಿನಿಮಾ, ಅನಿಮೇಷನ್ ಚಿತ್ರಗಳು, ರೆಸ್ಟೋರ್ಡ್ ಕ್ಲಾಸಿಕ್ಸ್ ಹಾಗೂ ಹೋಮೇಜ್ ವಿಭಾಗಗಳಲ್ಲಿ ಸಿನಿಮಾಗಳು ಪ್ರದರ್ಶಿತವಾಗುತ್ತಿವೆ. ಈ ಬಾರಿ ಸಿನಿಮೋತ್ಸವಕ್ಕೆ 100 ಕ್ಕೂ ಹೆಚ್ಚು ಸಿನಿಮಾ ಕ್ಷೇತ್ರದವರು ಸೇರಿದಂತೆ 13 ಸಾವಿರ ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ.