ಲಾಸ್ ಎಂಜಲೀಸ್: ಲಾಸ್ ಎಂಜಲೀಸ್ ದಿ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (IFFLA) ಸಿನಿ ರಸಿಕರಿಗೆ ಭಾರತೀಯ ಚಲನಚಿತ್ರಗಳ ರಸದೌತಣ ಬಡಿಸಲು ಸಜ್ಜಾಗುತ್ತಿದೆ. 22 ನೇ ಭಾರತೀಯ ಚಿತ್ರಗಳ ಉತ್ಸವವು ಜೂನ್ 27 ರಿಂದ 30 ರವರೆಗೆ ನಡೆಯಲಿದೆ. 2003 ರಲ್ಲಿ ಆರಂಭವಾದ ಉತ್ಸವವನ್ನು ಆರಂಭಿಸಿದ್ದು ಕ್ರಿಸ್ಟಿನಾ ಮರೋಡಾ ಅವರು. ಐಎಫ್ ಎಫ್ ಎಲ್ ಎ ಅನ್ನು ಆರಂಭಿಸಿ ಭಾರತೀಯ ಸಿನಿಮಾ ಪರಂಪರೆಯನ್ನು ಅಮೆರಿಕದ ಭಾರತೀಯರಿಗೆ ಹಾಗೂ ಜಗತ್ತಿನ ಉಳಿದ ಸಿನಿಮಾಸಕ್ತರಿಗೆ ಪರಿಚಯಿಸಲು ಆರಂಭವಾದದ್ದು ಈ ವೇದಿಕೆ. ಇದರ ಮಧ್ಯೆ ಕ್ರಿಸ್ಟಿನಾ ಗ್ರೀಕ್ ದೇಶದ ಮೂಲದವರು. ಸತ್ಯಜಿತ್ ರೇ ಯವರಂತ ಸಿನಿಮಾಗಳನ್ನು ನೋಡಿ ಭಾರತೀಯ ಸಿನಿಮಾಗಳತ್ತ ಆಕರ್ಷಿತರಾಗಿದ್ದು ವಿಶೇಷ.
ಲ್ಯಾಂಡ್ ಮಾರ್ಕ್ ಥಿಯೇಟರ್ಸ್ ಸನ್ ಸೆಟ್ ನಲ್ಲಿ ನಡೆಯುವ ಉತ್ಸವದಲ್ಲಿ ಈ ಬಾರಿ ದಕ್ಷಿಣ ಏಷ್ಯಾ ವಾರ್ನರ್ಸ್ ಬ್ರದರ್ಸ್, ಡಿಸ್ನಿ, ತರ್ಸಾಡಿಯಾ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗ ಈ ಬಾರಿಯ ಉತ್ಸವಕ್ಕಿದೆ.
ಈ ಬಾರಿಯ ಉತ್ಸವದಲ್ಲಿ 20 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಇವುಗಳಲ್ಲಿ 7 ಕಥಾ, 12 ಕಿರುಚಿತ್ರಗಳು ಹಾಗೂ ಒಂದು ಸಾಕ್ಷ್ಯಚಿತ್ರ ಸರಣಿ ಪ್ರದರ್ಶಿತವಾಗಲಿದೆ. ಭಾರತವಲ್ಲದೇ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಹಾಗೂ ಅಮೆರಿಕದ ಚಿತ್ರ ನಿರ್ದೇಶಕರು ಇವುಗಳನ್ನು ರೂಪಿಸಿದ್ದಾರೆ. ಈಗ ಈ ಉತ್ಸವ ದಕ್ಷಿಣ ಏಷ್ಯಾದ ರಾಷ್ಟ್ರಗಳ ಸಿನಿಮಾಗಳ ವೇದಿಕೆಯಾಗಿ ಮಾರ್ಪಟ್ಟಿದೆ.
Movie Monsoon: ಶಿವಮ್ಮ ನೋಡಬಹುದು, ಕೋಟಿ ಆಗಬಹುದು, ಚಿದಂಬರ ಓ…ಕೆ !
ಲಾಸ್ ಎಂಜಲೀಸ್ ನ ಪ್ರೀಮಿಯರ್ ಆಗಿರುವ ತರ್ಸೆಮ್ ಸಿಂಗ್ ನ ಡಿಯರ್ ಜಸ್ಸಿ ಸಿನಿಮಾ ಉತ್ಸವದ ಉದ್ಘಾಟನಾ ಚಿತ್ರವಾಗಿದ್ದರೆ, ವಿಜಯ್ ಸೇತುಪತಿ – ಅನುರಾಗ್ ಕಶ್ಯಪ್ ಅವರ ಮಹಾರಾಜ ಉತ್ಸವದ ಸಮಾರೋಪ ಚಿತ್ರವಾಗಿ ಆಯ್ಕೆಯಾಗಿವೆ. ಇದಲ್ಲದೇ, ನಿಖಿಲ್ ನಾಗೇಶ್ ಭಟ್ ಅವರ ಕಿಲ್, ಶುಚಿ ತಲಾಟಿಯವರ ಗರ್ಲ್ಸ್ ವಿಲ್ ಬಿ ಗರ್ಲ್ಸ್, ಕ್ರಿಸ್ಟೋ ಟೋಮಿಯವರ ಅಂಡರ್ ಕರೆಂಟ್, ಶಾನ್ ಸೆನೆವಿರತ್ನಯವರ ಬೆನ್ ಅಂಡ್ ಸುಜನ್ನೆ, ಲೀಸಾ ಗಾಝಿಯವರ ಎ ಹೌಸ್ ನೇಮ್ಡ್ ಸಹನಾ ಚಿತ್ರಗಳು ಪ್ರದರ್ಶಿತವಾಗಲಿವೆ.
ಈ ಬಾರಿ ಜೂನ್ 28 ರಂದು ಇಂಡಸ್ಟಿ ಡೇ ಅನ್ನು ಉದ್ಘಾಟಿಸುತ್ತಿದೆ. ಇದು ಸಂಪೂರ್ಣವಾಗಿ ದಕ್ಷಿಣ ಏಷ್ಯಾದ ಸಿನಿಮಾ ಕರ್ತೃಗಳಿಗೆ ತಮ್ಮ ಹೊಸ ಆಲೋಚನೆಗಳು, ಯೋಜನೆಗಳನ್ನು ಹಂಚಿಕೊಳ್ಳಲು ಅವಕಾಶವಾಗಿರಲಿದೆ. ಇದರಲ್ಲಿ ಲಾಂಚ್ ಪ್ಯಾಡ್ – ಎ ಪಿಚ್ ಕಾಂಪಿಟೇಷನ್ ಎಂಬುದು ಇರಲಿದೆ. ಇದರಲ್ಲಿ ಗೆದ್ದವರಿಗೆ 10 ಸಾವಿರ ಡಾಲರ್ ನಿಧಿ ಸಿಗಲಿದೆ.
ಡಿಯರ್ ಜಸ್ಸಿ ಅನಿವಾಸಿ ಭಾರತೀಯಳ ಕಥೆಯ ಎಳೆಯನ್ನು ಹೊಂದಿದೆ. ಕೆನಡಾದಲ್ಲಿ ಹುಟ್ಟಿದ ಭಾರತೀಯ ಹುಡುಗಿ ಜಸ್ಸಿ ಒಬ್ಬ ರಿಕ್ಷಾ ಡ್ರೈವರ್ ಮಿಥು ಅವನನ್ನು ಪ್ರೀತಿಸುತ್ತಾಳೆ. ಆಗ ಎದುರಾಗುವ ಸಾಮಾಜಿಕ ಸಂಗತಿಗಳು, ಜಸ್ಸಿಯ ಕುಟುಂಬ ಒಡ್ಡುವ ಸವಾಲುಗಳು, ವಾಸ್ತವಿಕ ನೆಲೆಯ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಜಸ್ಸಿ. ಪಾವಿಯಾ ಸಿಂಧು ಹಾಗೂ ಯುಗಂ ಸೂದ್ ಅಭಿನಯಿಸಿರುವ ಚಿತ್ರವಿದು. ಅದರ ಕುರಿತಾಗಿಯೇ ಈ ಚಿತ್ರವಿದೆ.
Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ
ಅದರೊಂದಿಗೆ ಸಮಾರೋಪ ಚಿತ್ರವಾದ ಮಹಾರಾಜ, ವಿಜಯ್ ಸೇತುಪತಿಯವರ 50 ನೇ ಚಿತ್ರ. ನಿಥಿಲನ್ ಸಾಮಿನಾಥನ್ ಅವರು ನಿರ್ದೇಶಿಸಿರುವ ಚಿತ್ರವಿದು. ಒಂದು ಗುಂಪು ಕೈಗೊಳ್ಳುವ ದ್ವೇಷವನ್ನು ತೀರಿಸಿಕೊಳ್ಳುವ ಚಿತ್ರ. ಇದರಲ್ಲಿ ಅನುರಾಗ್ ಕಶ್ಯಪ್ ಅವರು ಖಳನಾಯಕನಾಗಿ ಅಭಿನಯಿಸಿದ್ದಾರೆ. ಇದು ಲಾಸ್ ಎಂಜಲೀಸ್ ನ ಪ್ರೀಮಿಯರ್ ಪ್ರದರ್ಶನವೂ ಆಗಿದ್ದು, ನಿರ್ದೇಶಕರು, ನಿರ್ಮಾಪಕರು ಹಾಗೂ ತಾರಾಗಣದವರೂ ಭಾಗವಹಿಸುವ ಸಾಧ್ಯತೆ ಇದೆ.
ಕಿಲ್ ಸಿನಿಮಾ ಮಾರ್ಷಲ್ ಆರ್ಟ್ಸ್ ನ ಕುರಿತಾದ ಸಿನಿಮಾ ಆಗಿದ್ದು, 2023 ರ ಟೊರೊಂಟೊ ಸಿನಿಮೋತ್ಸವದಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿತ್ತು. ನಿಖಿಲ್ ನಾಗೇಶ್ ಭಟ್ ಅವರ ನಿರ್ದೇಶನ ಚಿತ್ರವನ್ನು ಕರಣ್ ಜೋಹರ್ ಹಾಗೂ ಗುನೀತ್ ಮೊಂಗಾ ನಿರ್ಮಿಸಿದ್ದಾರೆ. ಈ ಚಿತ್ರ ಅಮೆರಿಕದ ಸಿನಿಮಾ ಮಂದಿರಗಳಲ್ಲಿ ಜುಲೈ 4 ಹಾಗೂ ಭಾರತದಲ್ಲಿ ಜುಲೈ 5 ರಂದು ಬಿಡುಗಡೆಯಾಗಲಿದೆ.
ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್ ಮರು ಬಿಡುಗಡೆ; ನೋಡದೇ ಇರಬೇಡಿ
ಅಮೆರಿಕದ ಪ್ರೀಮಿಯರ್ ಆಗಿ ಡಿಫೀಯನ್ಸ್ ; ಫೈಟಿಂಗ್ ದಿ ಫಾರ್ ರೈಟ್ ಸಾಕ್ಷ್ಯಚಿತ್ರದ ಸರಣಿಯ ಎರಡು ಭಾಗಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿವೆ. ಇದು 1970-80 ರಲ್ಲಿ ವಲಸೆ ವಿರೋಧಿ ಹಿಂಸೆಯ ವಿರುದ್ಧ ದನಿ ಎತ್ತಿದ್ದ ಯುವ ಬ್ರಿಟಿಷ್ ಏಷ್ಯನ್ನರ ಕಥೆ. ಸಾತಿಯೇಶ್ ಮನೋಹರಜಾ ನಿರ್ದೇಶಿಸಿದ್ದು, ರಿಜ್ ಅಹ್ಮದ್ ಮತ್ತು ರೋಗನ್ ಪ್ರೊಡಕ್ಷನ್ಸ್ ನಿರ್ಮಿಸಿದೆ.
ಸಿನಿಮೋತ್ಸವದ ಕಲಾ ನಿರ್ದೇಶಕ ಅನು ರಂಗಾಚಾರ್ ತಿಳಿಸುವಂತೆ, ದಕ್ಷಿಣ ಏಷ್ಯಾದ ಸಿನಿ ಪ್ರಿಯರಿಗೆ ಇದೊಂದು ಒಳ್ಳೆಯ ವೇದಿಕೆ. ಹಲವಾರು ಪ್ರತಿಭಾವಂತ ಉದಯೋನ್ಮುಖ ಚಿತ್ರ ನಿರ್ದೇಶಕರ ಸಿನಿಮಾಗಳೂ ಇವೆ. ಸೌಹಾರ್ದತೆ, ಪ್ರೀತಿ ಹಾಗೂ ಕೌಟುಂಬಿಕ ಹಿಂಸೆಯಂಥ ವಿಷಯಗಳ ಆಧರಿಸಿದ ಚಲನಚಿತ್ರ ಕೃತಿಗಳು ಈ ಉತ್ಸವದಲ್ಲಿ ವೀಕ್ಷಣೆಗೆ ಲಭ್ಯವಾಗಲಿವೆ ಎನ್ನುತ್ತಾರೆ.
ಕಿರುಚಿತ್ರಗಳ ಸ್ಪರ್ಧೆಯೂ ವಿಶೇಷವಾಗಿದೆ. ವಿವಿಧ ಭಾಷೆಗಳ ಸಿನಿಮಾಗಳು ಭಾಗವಹಿಸುತ್ತಿವೆ. ಕಾನ್ ಉತ್ಸವದಲ್ಲಿ ಪ್ರಶಸ್ತಿ ಪಡೆದ ನೇಪಾಳಿ ಸಿನಿಮಾ ಅಭಿನಾಶ್ ಬಿಕ್ರಮ್ ಘೋಷ್ ಅವರ ಲೋರಿ, ರಿತ್ವಿಕ್ ಧವಳೆ ಅವರ ಹೇಮಾ, ಶಾಶ್ವತ್ ದ್ವಿವೇದಿಯವರ ಬಾಬ್ಬಿ ಬ್ಯೂಟಿ ಪಾರ್ಲರ್, ಶ್ವೇತಾ ರೇಗುನಾಥನ್ ಅವರ ವೈರ್ ಅಂಡ್ ಕ್ಲಾತ್, ತೇಜಾ ರಿಯೊ ಅವರ ಎಡೆ, ಯುಕಿ ಎಲಿಯಾಸ್ ಅವರ ಲವ್ಲಿ ಅಂಡ್ ಟಿಪ್ ಟಾಪ್, ಸ್ಟಂಜಿನ್ ತಾಕೊಂಗ್ ರ ಲಾಸ್ಟ್ ಡೇಸ್ ಆಫ್ ಸಮ್ಮರ್, ಸುಬರ್ಣಾ ದಾಸ್ ಮತ್ತು ವಿದುಷಿ ಗುಪ್ತಾರ ದಿಸ್ ಈಸ್ ಟಿಎಂಐ, ಲೂಸಿ ವಾರ್ಕರ್ ರ ಮೌಂಟೇನ್ ಕ್ವೀನ್ ; ದಿ ಸಮ್ಮಿಟ್ಸ್ ಆಫ್ ಲಕ್ಪಾ ಶೆರ್ಪ, ಕ್ರಿಸ್ಟೊ ಟೋಮಿಯವರ ಮಲಯಾಳಂ ಚಲನಚಿತ್ರ ಅಂಡರ್ ಕರೇಂಟ್ ಸಿನಿಮಾಗಳಿವೆ.
Karlovy Vary IFF : ಜೂನ್ 28-ಜುಲೈ 6 ರವರೆಗೆ ಮತ್ತೊಂದು ಸಿನಿಮೋತ್ಸವ
ಉದ್ಘಾಟನಾ ಹಾಗೂ ಸಮಾರೋಪ ಚಿತ್ರಗಳು ಬಿವೇರ್ ಹಿಲ್ಸ್ ನ ರೈಟರ್ಸ್ ಗಿಲ್ಡ್ ಥಿಯೇಟರ್ ನಲ್ಲಿ ಪ್ರದರ್ಶಿತವಾದರೆ, ಉಳಿದೆಲ್ಲ ಚಿತ್ರಗಳ ಪ್ರದರ್ಶನ ಲ್ಯಾಂಡ್ ಮಾರ್ಕ್ ಥಿಯೇಟರ್ಸ್ ಸನ್ ಸೆಟ್ ನಲ್ಲಿ ಪ್ರದರ್ಶತಿವಾಗಲಿವೆ. ಈ ಬಾರಿಯ ಉತ್ಸವಕ್ಕೆ ಎನ್ ಬಿಸಿ ಯೂನಿವರ್ಸಲ್, ಜಾಯ್ ಆಫ್ ಶೇರಿಂಗ್ ಫೌಂಡೇಷನ್, ದಿ ಲಾಸ್ ಎಂಜಲೀಸ್ ಕಂಟ್ರಿ ಆರ್ಟ್ಸ್ ಕಮಿಷನ್, ಲಾಸ್ ಎಂಜಲೀಸ್ ನ ಕಲ್ಚರಲ್ ಅಫೇರ್ಸ್ ಇಲಾಖೆಯ ಸಹಯೋಗವಿದೆ.
ಈ ಬಾರಿಯ ಉತ್ಸವದ ಕಥಾ ಚಿತ್ರಗಳ ಸ್ಪರ್ಧೆಗೆ ತೀರ್ಪುಗಾರರಾಗಿ ಮಿರ್ಸಾದ ಅಬ್ದೊಲ್ ರೆಹಮಾನ್, ರೋಷನ್ ಸೇಥಿ, ಮೊಹಮ್ಮದ್ ಅಲಿ ನಕ್ವಿ ಹಾಗೂ ಕಥೇತರ ವಿಭಾಗದಲ್ಲಿ ಶ್ರೀಯಾ ಪಿಳ್ಗೊವಂಕರ್, ಫ್ರಾನ್ಸಿಸ್ಕೊ ವೆಲ್ಸ್ಕೊಜ್, ತೆರಿ ಸಮುಂದ್ರ ಕಾರ್ಯ ನಿರ್ವಹಿಸುವರು. ಗ್ರ್ಯಾಂಡ್ ಜೂರಿ ಪರುಸ್ಕಾರ ಹಾಗೂ ಆಡಿಯನ್ಸ್ ಪುರಸ್ಕಾರವನ್ನು ಕೊಡ ಮಾಡಲಾಗುತ್ತದೆ. (pic csy: IFFLA)