ಮೆಲ್ಬೋರ್ನ್ : ಕಿರುಚಿತ್ರಗಳನ್ನು ಸೈಡ್ ಡಿಷಸ್ ಎಂದು ಪರಿಗಣಿಸಬೇಡಿ. ಅವುಗಳೀಗ ಚಿತ್ರ ಜಗತ್ತನ್ನು ಆಳತೊಡಗಿವೆ. ಹಾಗಾಗಿ ಅವುಗಳನ್ನೂ ಪ್ರಧಾನವಾಗಿಯೇ ಪರಿಗಣಿಸುವ ಕಾಲ ಹತ್ತಿರವಾಗಿದೆ.
ನಿಜ, ದಿನೇದಿನೆ ಚಿತ್ರ ಜಗತ್ತಿನಲ್ಲಿ ಕಿರುಚಿತ್ರಗಳ ಸದ್ದು ಹೆಚ್ಚಾಗತೊಡಗಿದೆ. ಆಸ್ಟ್ರೇಲಿಯಾದ ಮೆಲ್ಫೋರ್ನ್ ನಲ್ಲಿ ಆಗಸ್ಟ್ 15 ರಿಂದ 25 ರವರೆಗೆ ನಡೆಯಲಿರುವ 15 ನೇ ಭಾರತೀಯ ಚಲನಚಿತ್ರೋತ್ಸವ (ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್-IFFM) ದ ಕಿರುಚಿತ್ರಗಳ ವಿಭಾಗದ ಈ ಬಾರಿಯ ತೀರ್ಪುಗಾರರಾಗಿರುವ ಚಿತ್ರ ನಿರ್ದೇಶಕ ಸೂಜಿತ್ ಸರ್ಕಾರ್ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅವರು ಹೇಳುವಂತೆ, ಕಿರುಚಿತ್ರಗಳನ್ನು ಚಿಕ್ಕವು ಎಂದು ಪರಿಗಣಿಸದಿರುವ ಕಾಲ ಮಾಯವಾಗಿದೆ. ಅವುಗಳೂ ಚಿತ್ರದ ಅನುಭವ ನೀಡುವಲ್ಲಿ ಪ್ರಧಾನ ಪಾತ್ರ ವಹಿಸತೊಡಗಿವೆ. ಅದೇ ಕಾರಣಕ್ಕೆ ಊಟದ ಸೈಡ್ ಡಿಷಸ್ ಎಂದು ಯೋಚಿಸುವುದಕ್ಕಿಂತ ಮೇನ್ ಕೋರ್ಸ್ ಎಂದೇ ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ.
ಪೀಕು, ಪಿಂಕ್, ಸರ್ದಾರ್ ಉಧಮ್ ಸಿಂಗ್ ನಂಥ ಸಿನಿಮಾಗಳನ್ನು ನಿರ್ದೇಶಿಸಿರುವ ಸೂಜಿತ್ ಸರ್ಕಾರ್ ಅವರ ಪ್ರಕಾರ, “ನಾನು ಸಾಮಾನ್ಯವಾಗಿ ಈ ಚಿತ್ರಗಳ ತೀರ್ಪುಗಾರರಾಗಿ ಹೋಗುವ ಕಸರತ್ತನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣವಿಷ್ಟೇ. ಅದೊಂದು ಬಹಳ ತ್ರಾಸದಾಯಕವಾದ ಹಾಗೂ ಕಷ್ಟದ ಕೆಲಸ. ಪ್ರತಿ ಕಿರುಚಿತ್ರವೂ ಅಮೋಘವಾಗಿರುತ್ತದೆ ತನ್ನದೇ ರೀತಿಯಲ್ಲಿ. ಅಂಥವುಗಳ ಕುರಿತು ಹೇಗೆ ತೀರ್ಪು ಬರೆಯುವುದು ಎಂಬುದೇ ನನ್ನ ಪ್ರಶ್ನೆʼ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
Girish Kasaravalli-ಗಿರೀಶರ ಪುನರಾಗಮನ:ಆಕಾಶ-ಬೆಕ್ಕು ಮತ್ತು ಘಟಶ್ರಾದ್ಧ !
ಈ ಹಿಂದೆ ಒಂದು ಕಾಲವಿತ್ತು. ಕಿರುಚಿತ್ರಗಳೆಂದರೆ ಬಹಳ ಪ್ರಧಾನವಾಗಿ ಪರಿಗಣಿಸದಿರುವುದು. ಒಂದು ರೀತಿಯಲ್ಲಿ ಡಿಪ್ಲೊಮಾ ಎಂಬಂತೆ (ಅದು ಪೂರ್ಣ ಪದವಿಯಲ್ಲ ಎಂಬ ಆಭಿಪ್ರಾಯ) ಕಿರುಚಿತ್ರಗಳನ್ನು ನೋಡಲಾಗುತಿತ್ತು. ಆದರೆ ಇಂದು ಸಂಪೂರ್ಣ ಬದಲಾಗಿದೆ. ಕಿರುಚಿತ್ರವನ್ನು ಸೃಜಿಸುವಲ್ಲಿಯೂ ನಿರ್ದೇಶಕರು ತೋರುತ್ತಿರುವ ಕಲಾ ಪ್ರೌಢಿಮೆ ಅನನ್ಯ. ಅದೇ ಕಾರಣಕ್ಕೆ ಕಿರುಚಿತ್ರಗಳನ್ನು ಗಂಭೀರವಾಗಿ ಪರಿಗಣಿಸಬೇಕುʼ ಎಂದಿದ್ದಾರೆ ಸರ್ಕಾರ್.
ಒಂದು ಸಿನಿಮಾ ಚೆನ್ನಾಗಿದ್ದರೆ, ಸೃಜನಶೀಲವಾಗಿದ್ದರೆ ತನ್ನಷ್ಟಕ್ಕೇ ಪ್ರಯಾಣ ಆರಂಭಿಸುತ್ತದೆ ನಮ್ಮೊಳಗೆ. ಅದು ಕಿರುಚಿತ್ರವಾಗಿರಲಿ, ಪೂರ್ಣ ಚಿತ್ರವಾಗಿರಲಿ. ಹಾಗಾಗಿ ನಾವು ಚಿತ್ರವನ್ನು ಹೇಗೆ ರೂಪಿಸಿದ್ದಾರೆ, ಎಷ್ಟು ಸೃಜನಶೀಲವಾಗಿದೆ, ಕಲಾತ್ಮಕವಾಗಿದೆ ಎಂಬುದನ್ನೇ ನೋಡಬೇಕು ಎಂಬುದು ಸರ್ಕಾರರ ಅಭಿಪ್ರಾಯ.
ಅಂತರಜಾಲದಲ್ಲಿ ಸಾಕಷ್ಟು ಕಿರುಚಿತ್ರಗಳು ವೀಕ್ಷಣೆಗೆ ಲಭ್ಯವಾಗುತ್ತಿವೆ. ಸಣ್ಣದೊಂದು ಕ್ರಾಂತಿಯನ್ನೇ ಆರಂಭಿಸಿದೆ.
Thangalan: ವಿಕ್ರಮ್ ರ ಬಹು ನಿರೀಕ್ಷೆಯ ಬಲೂನು ಹೊಡೆಯದಿರಲಿ !
ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಿರು ಚಿತ್ರದ ವಿಭಾಗ ಆಲ್ ಅವರ್ ವಾಯ್ಸ್ ಸ್ ನಲ್ಲಿ ಸಾಕಷ್ಟು ಕಿರುಚಿತ್ರಗಳು ಪುರಸ್ಕಾರಕ್ಕಾಗಿ ಸ್ಪರ್ಧಿಸುತ್ತಿವೆ. ನಟ ಅಮಿತಾಭ್ ಬಚ್ಚನ್ ಅಭಿನಯದ ದಿ ಉಮೇಶ್ ಕ್ರಾನಿಕಲ್ಸ್ ಸೇರಿದಂತೆ ಹಲವು ಚಿತ್ರಗಳು ಉತ್ಸವದ ಪಟ್ಟಿಯಲ್ಲಿವೆ.