Friday, March 21, 2025
spot_img
More

    Latest Posts

    ಮಾಲಾಶ್ರೀ ಆಭಿನಯದ ಮಾರಕಾಸ್ತ್ರ ಈಗ ಮಾರಣಾಯುಧಂ

    ಮಾಲಾಶ್ರೀ ಅಭಿನಯದ ಕಳೆದ ವರ್ಷದ ಚಿತ್ರ “ಮಾರಕಾಸ್ತ್ರ” ಈಗ ತೆಲುಗಿನಲ್ಲಿ ಮಾರಣಾಯುಧಂ ಅಗಿ ಬಿಡುಗಡೆಗೊಳ್ಳುತ್ತಿದೆ ನಾಳೆ (ಏ.26). ಕೋಮಲ ನಟರಾಜ್‌ ಚಿತ್ರ ನಿರ್ಮಿಸಿದ್ದರು. ಗುರುಮೂರ್ತಿ ಸುನಾಮಿ ನಿರ್ದೇಶಿಸಿದ್ದರು. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಚಿತ್ರ ಜನರ ಮನ ಗೆದ್ದಿದೆಯಂತೆ. ಹಾಗೆಯೇ ರಾಜ್ಯದಲ್ಲೂ ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ.

    ಕಳೆದ ವರ್ಷ ಈ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಹಾವಳಿ. ಭಾರತ ಮತ್ತು ಪಾಕಿಸ್ತಾನ ಪಂದ್ಯ, ಹಬ್ಬ ಹೀಗೆ ಹಲವಾರು ಅಡ್ಡಿ ಬಂದವು. ಜನ ಚಿತ್ರಮಂದಿರಕ್ಕೆ ಬಂದು ನೋಡಲು ಸಾಧ್ಯವಾಗಲಿಲ್ಲ. ಇನ್ನೊಂದ ಕಾರಣ, ಈಗ ತೆಲುಗಿನಲ್ಲಿ ರೂಪುಗೊಂಡು ಬಿಡುಗಡೆಯಾಗುತ್ತಿದೆ. ಅದೇ ಸಂದರ್ಭದಲ್ಲಿ ಕನ್ನಡದ ಮೂಲ ಚಿತ್ರ ಜನರ ವೀಕ್ಷಣೆಗೆ ಲಭ್ಯವಾಗಲಿ ಎಂಬುದು. ಹಾಗೆಯೇ ಮಾರಕಾಸ್ತ್ರ ಬಿಡುಗಡೆಯಾದಾಗ ದೊಡ್ಡದು ಇದೆ ಎಂಬ ಅಭಿಪ್ರಾಯ ಬಂದಿದ್ದಕ್ಕೆ 26 ನಿಮಿಷ ಕಡಿತಗೊಳಿಸಿದ್ದಾರಂತೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಛ ಮತ್ತಿತರರು ನಟಿಸಿದ ಚಿತ್ರವಿದು.

    ಇದನ್ನೂ ಓದಿ : ಡಾ. ರಾಜಕುಮಾರ್‌ : ಜನ್ಮದಿನಾಚರಣೆಯ ಮುನ್ನ ಧ್ರುವ ತಾರೆಯ ನೆನಪು

    ಮಾರಕಾಸ್ತ್ರ ಮೊದಲು ನಟಿಸಲು ಒಪ್ಪಿಗೆ ನೀಡಿರಲಿಲ್ಲ. ಆದರೆ ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಅದಕ್ಕೇ ಒಪ್ಪಿ ನಟಿಸಿದೆ.

    ನಾನು ಮೊದಲು “ಮಾರಕಾಸ್ತ್ರ” ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಆನಂತರ ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಅದರಲ್ಲೂ ನಿರ್ದೇಶಕರಿಗೆ ಕಾಲಿನ ಸಮಸ್ಯೆಯಿದೆ. ಅಂತಹುದರಲ್ಲೂ ಅವರಿಗಿರುವ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತು. ತೆಲುಗಿನ ಜನರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಶುಕ್ರವಾರ ಕರ್ನಾಟಕದಲ್ಲೂ ಬಿಡುಗಡೆಯಾಗಲಿದೆ ಎಂದವರು ಮಾಲಾಶ್ರೀ.

    *

    ಗೌರಿ ; ಇಂದ್ರಜಿತ್‌ ಲಂಕೇಶರ ಹೊಸ ಚಿತ್ರ

    ಇಂದ್ರಜಿತ್ ಲಂಕೇಶ್ ಹೊಸ ಸಿನಿಮಾದೊಂದಿಗೆಗ ಸಜ್ಜಾಗುತ್ತಿದ್ದಾರೆ. ತಾವೇ ನಿರ್ಮಿಸಿ ನಿರ್ದೆಶಿಸುತ್ತಿರುವ ಚಿತ್ರದ ಹೆಸರು ಗೌರಿ. ಇದರ ನಾಯಕ ನಟನಾಗಿ ಆಭಿನಯಿಸುತ್ತಿರುವುದು ಸಮರ್ಜಿತ್‌ ಲಂಕೇಶ್.‌ ಸಾನ್ಯಾ ನಾಯರ್‌ ಇದರ ನಾಯಕಿ ನಟಿ.

    ಇತ್ತೀಚಿಗೆ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಹಾಗೂ ಕ್ರಿಕೆಟ್‌ ಪಟು ಅನಿಲ್‌ ಕುಂಬ್ಳೆ ಭಾಗವಹಿಸಿದ್ದರು.

    ಈ ಚಿತ್ರದ ಮೂಲಕ ಇಬ್ಬರು ಹೊಸಬರು ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ಯುವ ಮತ್ತು ಹೊಸ ಪ್ರತಿಭೆಗಳು. ಶುಭವಾಗಲಿ ಎಂದವರು ಅನಿಲ್‌ ಕುಂಬ್ಳೆ.

    ಇವುಗಳನ್ನೂ ಓದಿ : ಅಮಿತಾಭ್‌ ಇನ್ನು ಅಶ್ವತ್ಥಾಮ !

    ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೆ.ಕೆ ಛಾಯಾಗ್ರಾಹಕರಾಗಿದ್ದರೆ, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಸಂಗೀತ ನಿರ್ದೇಶಿಸಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ರ ಸಾಹಿತ್ಯವಿದೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ,ಜಾವೇದ್ ಅಲಿ,ಅನನ್ಯ ಭಟ್, ನಿಹಾಲ್ ತೌರೋ ,ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆಯೊಂದಿಗೆ ಸಮರ್ಜಿತ್‌ ಸಹ ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಅವರ ಸಂಭಾಷಣೆ ಇದ್ದರೆ, ರವಿವರ್ಮ, ಡಿಫರೆಂಟ್ ಡ್ಯಾನಿಯವರ ಸಾಹಸ ನಿರ್ದೇಶನವಿದೆ.

    Latest Posts

    spot_imgspot_img

    Don't Miss