Friday, March 21, 2025
spot_img
More

    Latest Posts

    Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

    ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ ಬಗೆ ಅನನ್ಯವಾದುದು. ಇದರ ಮಧ್ಯೆ ಈಗ ರೂಪುಗೊಳ್ಳುತ್ತಿರುವ ಕಣ್ಣಪ್ಪ ಪಾನ್‌ ಇಂಡಿಯಾದವನು. ವಿಷ್ಣು ಮಂಚು ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರವಿದು.

    ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿಯಡಿ ಈ ಸಿನಿಮಾ ರೂಪುಗೊಳ್ಳುತ್ತಿದೆ. ಡಾ.ಮೋಹನ್ ಬಾಬು ನಿರ್ಮಿಸಿದ್ದರೆ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ.

    ಸ್ವತಃ ವಿಷ್ಣು ಮಂಚು ಅವರಿಗೇ ಈ ಸಿನಿಮಾದ ಬಗ್ಗೆ ಯಾವ ಪ್ರತಿಕ್ರಿಯೆ ಸಿಗಬಹುದೆಂಬ ಕುತೂಹಲವಿದೆ. ಯಾಕೆಂದರೆ ಸಿನಿಮಾದ ಶೀರ್ಷಿಕೆ ಬಿಡುಗಡೆಯಾದ ದಿನದಿಂದ ಇದುವರೆಗೆ ಜನ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರಂತೆ. ಸಾಮಾಜಿಕ ಜಾಲ ತಾಣಗಳಲ್ಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇವೆಲ್ಲವೂ ಸಿನಿಮಾದ ಮೇಲೆ ಹರಿದರೆ ನಾವು ಗೆದ್ದಂತೆ ಎಂಬುದು ಅವರದ್ದಷ್ಟೇ ಅಲ್ಲ, ಇಡೀ ಚಿತ್ರ ತಂಡದ ಲೆಕ್ಕಾಚಾರ.

    Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

    ಕಣ್ಣಪ್ಪ ಬರೀ ಒಂದು ಸಿನಿಮಾವಷ್ಟೇ ಅಲ್ಲ, ಚರಿತ್ರೆಯ ದರ್ಶನ. ಹಲವು ಅಕರ ಮಾಹಿತಿಯನ್ನು ಕಲೆಹಾಕಿ, ಅಧ್ಯಯನ ಮಾಡಿ ಈ ಸಿನಿಮಾ ರೂಪಿಸಲಾಗುತ್ತಿದೆಯಂತೆ. ಇದೇ ಅಭಿಪ್ರಾಯ ನಿರ್ದೇಶಕ ಮುಖೇಶ್‌ ಕುಮಾರ್‌ ಸಿಂಗರದ್ದೂ ಸಹ.

    FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

    ಶರತ್ ಕುಮಾರ್ ಅವರೂ ಹೇಳುವಂತೆ ಈ ಸಿನಿಮಾ ಕೇವಲ ಸಿನಿಮಾ ಅಲ್ಲ, ನಮ್ಮ ಇತಿಹಾಸ.  ಮಧುಬಾಲಾರದ್ದೂ ಇದೇ ಅಭಿಪ್ರಾಯ. ಇಷ್ಟೆಲ್ಲ ಇರುವ ಕಣ್ಣಪ್ಪ ಬೇಗ ಬಾರಪ್ಪ ಎಂಬುದೇ ಪ್ರೇಕ್ಷಕರ ಆಗ್ರಹ.

    Any Day Now: ನಮ್ಮಲ್ಲಿ ಉಳಿಯುವುದು ಅವರ ನಗೆ-ಬದುಕಿನ ಬಗೆ

    Latest Posts

    spot_imgspot_img

    Don't Miss