ಮತ್ತೊಂದು ಪ್ರಮುಖ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಜೂನ್ 28 ರಿಂದ ಜುಲೈ 6 ರವರೆಗೆ 58 ನೇ ಕರ್ಲೊವಿ ವೆರಿ ಅಂತಾರಾಷ್ಟ್ರೀಯ ಸಿನಿಮೋತ್ಸವ (Karlovy Vary IFF) ನಡೆಯಲಿದೆ. ಝೆಕ್ ರಿಪಬ್ಲಿಕ್ ನ ಕರ್ಲೊವಿ ವೆರಿ ನಗರದಲ್ಲಿ ನಡೆಯುವ ಈ ಸಿನಿಮೋತ್ಸವ ಅತ್ಯಂತ ಹಳೆಯ ಸಿನಿಮೋತ್ಸವಗಳಲ್ಲಿ ಒಂದು. 1946 ನೇ ಸಾಲಿನಲ್ಲಿ ಹುಟ್ಟಿಕೊಂಡ ಸಿನಿಮೋತ್ಸವ ಇದು. 58 ನೇ ಸಿನಿಮೋತ್ಸವದ ಅಂತಾರಾಷ್ಟ್ರೀಯ ವಿಭಾಗದ ಸ್ಪರ್ಧೆಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.
ಕ್ರಿಸ್ಟಲ್ ಗ್ಲೋಬ್ ಕಾಂಪಿಟೇಷನ್ ನ ಪ್ರಶಸ್ತಿಗೆ ಜಪಾನ್, ಪೋರ್ಚುಗಲ್, ತೈವಾನ್, ನೆದರ್ ಲ್ಯಾಂಡ್ಸ್, ನಾರ್ವೆ, ಸ್ಲೋವಕ್ ರಿಪಬ್ಲಿಕ್, ಝೆಕ್ ರಿಪಬ್ಲಿಕ್, ಕ್ರೋಶಿಯಾ, ಜಾರ್ಜಿಯಾ, ಬ್ರಿಟನ್ ಹಾಗೂ ಜರ್ಮನಿ ದೇಶಗಳ ಸಿನಿಮಾಗಳು ಸೆಣಸಲಿವೆ. ಈ ಚಿತ್ರಗಳ ಪೈಕಿ ಒಂದು ಸಿನಿಮಾ ಅಂತಾರಾಷ್ಟ್ರೀಯ ಪ್ರೀಮಿಯರ್ ಆಗಿದ್ದರೆ, ಉಳಿದೆಲ್ಲವೂ ವಿಶ್ವ ಪ್ರೀಮಿಯರ್ ಸಿನಿಮಾಗಳು.
MIFF: 59 ದೇಶಗಳು,61 ಭಾಷೆಗಳು, 314 ಚಿತ್ರ ಕೃತಿಗಳ ಪ್ರದರ್ಶನ
ಜಪಾನಿನ ರೂಡ್ ಟು ಲವ್, ಪೋರ್ಚುಗಲ್ ನ ಬಾಂಝೊ, ತೈವಾನ್ ನ ಪೀಯರ್ಸ್, ನೆದರ್ ಲ್ಯಾಂಡ್ಸ್ನ ಥ್ರೀ ಡೇಸ್ ಆಫ್ ಫಿಶ್, ನಾರ್ವೆಯ ಲವಬಲ್, ಸ್ಲೋವಕ್ ರಿಪಬ್ಲಿಕ್ ನ ದಿ ಹಂಗೇರಿಯನ್ ಡ್ರೆಸ್ ಮೇಕರ್, ಝೆಕ್ ರಿಪ್ಲಬಿಕ್ ನ ಅವರ್ ಲವ್ಲಿ ಪಿಗ್ ಸ್ಲಾಟರ್, ಟಿನಿ ಲೈಟ್ಸ್, ಜಾರ್ಜಿಯಾದ ಪನೋಪ್ಟಿಕಾನ್, ಕ್ರೋಶಿಯಾದ ಸೆಲಬ್ರೇಷನ್, ಬ್ರಿಟನ್ ನೆ ಸಡನ್ ಗ್ಲಿಂಪ್ಸ್ ಟು ಡೀಪರ್ ಥಿಂಗ್ಸ್, ಜರ್ಮನಿಯ ಕ್ಸೋಪ್ಟೆಕ್ಸ್ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಅವುಗಳ ಒರಿಜಿನಲ್ ಟೈಟಲ್ ಹಾಗೂ ನಿರ್ದೇಶಕರ ವಿವರ ಇಂಗ್ಲಿಷಿನಲ್ಲಿದೆ.
Ai ni ranbou / Rude to Love
Director: Yukihiro Morigaki
Japan, 2023, 105 min, World premiere
Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ
Banzo
Director: Margarida Cardoso
Portugal, France, Netherlands, 2024, 127 min, International premiere
Cì xīn qiè gŭ / Pierce
Director: Nelicia Low
Singapore, Taiwan, Poland, 2024, 109 min, World premiere
Drie dagen vis / Three Days of Fish
Director: Peter Hoogendoorn
Netherlands, Belgium, 2024, 85 min, World premiere
Elskling / Loveable
Director: Lilja Ingolfsdottir
Norway, 2024, 101 min, World premiere
Ema a smrtihlav / The Hungarian Dressmaker
Director: Iveta Grófová
Slovak Republic, Czech Republic, 2024, 129 min, World premiere
Mord / Our Lovely Pig Slaughter
Director: Adam Martinec
Czech Republic, Slovak Republic, 2024, 84 min, World premiere
Panoptikoni / Panopticon
Director: George Sikharulidze
Georgia, France, Italy, Romania, 2024, 95 min, World premiere
Proslava / Celebration
Director: Bruno Anković
Croatia, Qatar, 2024, 86 min, World premiere
A Sudden Glimpse to Deeper Things
Director: Mark Cousins
United Kingdom, 2024, 88 min, World premiere
Světýlka / Tiny Lights
Director: Beata Parkanová
Czech Republic, Slovak Republic, 2024, 74 min, World premiere
Xoftex
Director: Noaz Deshe
Germany, France, 2024, 95 min, World premiere
(pics: Kviff website)