Saturday, September 28, 2024
spot_img
More

    Latest Posts

    Laughing Buddha: ಶೆಟ್ಟರಿಬ್ಬರು ನಗಲಿಕ್ಕೆ ಮತ್ತೊಂದು ಭರ್ಜರಿ ವೀಕೆಂಡ್‌

    ಲಾಫಿಂಗ್‌ ಬುದ್ಧ ನಟ ಪ್ರಮೋದ್‌ ಶೆಟ್ಟರ ಚಿತ್ರ. ಮೊನ್ನೆ ಶುಕ್ರವಾರ ಬಿಡುಗಡೆಯಾಯಿತು. ವಾರಾಂತ್ಯ ಚಿತ್ರಮಂದಿರಗಳಲ್ಲಿ ಪರವಾಗಿಲ್ಲ ಎನ್ನುವ ಅಭಿಪ್ರಾಯವಿದೆ. ಇದು ಹಣ ಗಳಿಕೆ ಸಂಬಂಧಿಸಿ ಹೇಳಿದ್ದು. ಆರಂಭದ ವಾರಾಂತ್ಯದಲ್ಲಿ ಸುಮಾರು 50 ರಿಂದ 60 ಲಕ್ಷ ರೂ. ಗಳಿಕೆ ಆಗಿರಬಹುದೆಂದು ಅಂದಾಜಿಸಲಾಗಿದೆ. ಮತ್ತೊಂದು ಭರ್ಜರಿ ವೀಕೆಂಡ್‌ ಎದುರಾಗಿದೆ. ಅದೂ ಹಬ್ಬದ ವಾತಾವರಣದ ವೀಕೆಂಡ್.‌

    ಗುರುವಾರದಿಂದಲೇ ಈ ವೀಕೆಂಡ್‌ ಆರಂಭ. ಅದರೊಟ್ಟಿಗೇ ನಟ ರಕ್ಷಿತ್‌ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವೂ ಬಿಡುಗಡೆಯಾಗುತ್ತದೆ. ಸಣ್ಣದೊಂದು ಸ್ಪರ್ಧೆ ನೀಡಬಹುದು. ಆದರೂ ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳಲ್ಲಿ ಜನರನ್ನು ಸೆಳೆದು ನಗಿಸಬಹುದು. ಆದರೆ ಬುದ್ಧನೇ ಪ್ರೇಕ್ಷಕರಿಗೆ ಸಿನಿಮಾ ಮಂದಿರಕ್ಕೆ ಬರಲು ಮನಸ್ಸು ಕೊಡಬೇಕು.

    ಬರೀ ವಾರಾಂತ್ಯದಲ್ಲಿ ಮಾತ್ರ ಗಳಿಕೆ ಜೋರೋ ಅಥವಾ ಬಾಯಿಂದ ಬಾಯಿಗೆ ʼಧನಾತ್ಮಕ ಸಾಂಕ್ರಾಮಿಕʼ ರೀತಿ ಸಿನಿಮಾ ಚೆನ್ನಾಗಿದೆ ಎನ್ನುವ ಅಭಿಪ್ರಾಯ ಹರಡಿ ಪ್ರತಿ ದಿನ ಮಧ್ಯಾಹ್ನ, ಸಂಜೆ ಪ್ರದರ್ಶನಗಳಿಗೆ ಪ್ರೇಕ್ಷಕರು ಹರಿದು ಬಂದರೆ ಪ್ರಮೋದ್‌ ಶೆಟ್ಟರು, ರಿಷಭ್‌ ಶೆಟ್ಟರು ನಗಬಹುದು ಎನ್ನಿ. ಇದರ ಮಧ್ಯೆ ಎಷ್ಟು ದಿನ ಸಿನಿಮಾ ಚಿತ್ರಮಂದಿರಗಳಲ್ಲಿ ವೀಕ್ಷಕರಿಗೆ ಲಭ್ಯವಿರುತ್ತದೆ ಎನ್ನುವುದೂ ಮುಖ್ಯವಾದ ಸಂಗತಿ. ಅದರ ಆಧಾರದ ಮೇಲೆ ನಗುವುದೋ, ಅಳುವುದೋ ನಿರ್ಧಾರವಾಗುತ್ತದೆ.

    ಸಿನಿಮಾ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಪ್ರಮೋದ್‌ ಶೆಟ್ಟರು ಮೊದಲು ನಾಯಕ ನಟರಾಗಿ ನಟಿಸಿರುವ ಚಿತ್ರ. ಪೊಲೀಸ್‌ ಕುಟುಂಬ ಹಾಗೂ ಭಾವನೆಗಳ ಸುತ್ತ ಇರುವ ಚಿತ್ರವೆಂದರೆ, ಪೊಲೀಸ್‌ ವೃತ್ತಿ ಸಮುದಾಯದ ವ್ಯಥೆ ಕಥೆಯನ್ನು ಹಾಸ್ಯದ ನೆಲೆಯಲ್ಲಿ ಜನರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರಂತೆ ದ್ವಿಶೆಟ್ಟರು. ರಿಷಭ ಶೆಟ್ಟಿ ಫಿಲಂಸ್‌ ನಿರ್ಮಿಸಿ ಭರತ್ ರಾಜ್‌ ನಿರ್ದೇಶಿಸಿರುವ ಚಿತ್ರವಿದು.

    New Movie : ಫಾರೆಸ್ಟ್‌-ಕಾಡಿನ ಸಿನಿಮಾ ನಾಡಿನ ಜನರಿಗೆ !

    ಪ್ರಮೋದ್‌ ಶೆಟ್ಟರ ಜತೆ ಅಭಿನಯಿಸಿರುವವರು ತೇಜು ಬೆಳವಾಡಿ. ದಿಗಂತ್‌ ಮಂಚಾಲೆ ಸಹ ವಿಭಿನ್ನ ಪಾತ್ರದಲ್ಲಿದ್ದಾರೆ. ಹಿರಿಯ ನಟ ಸುಂದರರಾಜ್‌ ಸಹ ನಟಿಸಿದ್ದಾರೆ.

    ಭದ್ರಾವತಿ, ಜೋಗ, ಸಾಗರ, ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿರುವ ಕಾರಣ ಪರಿಸರ ಪರಿಚಯದ್ದೇ ಅನಿಸಬಹುದು. ವಿಷ್ಣು ವಿಜಯ್‌ ಸಂಗೀತ ನಿರ್ದೇಶಸಿದ್ದಾರೆ, ಎಸ್.‌ ಚಂದ್ರಶೇಖರನ್‌ ರ ಛಾಯಾಗ್ರಹಣವಿದೆ. ಭರತ್‌ ರಾಜ್‌ ರದ್ದೇ ಕಥೆಗೆ ಅನಿರುದ್ದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿಯವರ ಸಂಭಾಷಣೆ ಇದೆ.

    New Movie:ದೀಪಾವಳಿ ಮಾಸದಲ್ಲಿ ಭೈರತಿ ರಣಗಲ್‌ ಬಿಡುಗಡೆ : ನ. 15 ರಂದು ಪಟಾಕಿ ಶಬ್ದ ಮಾಡುತ್ತಾ?

    ಈಗ ಎರಡನೇ ವಾರದಲ್ಲಿ ಜನ ನಗುತ್ತಾರೋ, ಬುದ್ಧ ನಗುತ್ತಾನೋ ಕಾದು ನೋಡಬೇಕು. ಈ ವಾರಾಂತ್ಯ ಗಣೇಶ ಹಬ್ಬದ ವಾರ. ಜನರು ಶುಕ್ರವಾರ- ಶನಿವಾರ ಹಬ್ಬದಲ್ಲಿ ಕಳೆದರೂ ಭಾನುವಾರಕ್ಕೆ ಚಿತ್ರಮಂದಿರಕ್ಕೆ ಬರಬಹುದು. ಏನಾಗುತ್ತದೋ ಕಾದು ನೋಡಬೇಕು.

    ಅಂದ ಹಾಗೆ ಚಿತ್ರಮಂದಿರದಲ್ಲಿ ಒಂದು ಮಾತಿದೆ. ದೊಡ್ಡ ಹೀರೋ ಇಲ್ಲದ ಚಿತ್ರ ಗೆಲ್ಲುವುದು ಕಷ್ಟ ಅಥವಾ ಕಚ್ಚಿಕೊಳ್ಳುವುದು ಕಷ್ಟ ಎನ್ನುತ್ತಾರೆ. ಆದರೆ ರಿಷಭ್‌ ಶೆಟ್ಟಿ ಫಿಲಂಸ್‌ ಗೆ ದೊಡ್ಡವರ ಸಹವಾಸ ಇಲ್ಲದೆಯೂ ಸಿನಿಮಾಗಳನ್ನು ಜನರಿಗೆ ತಲುಪಿಸುವುದು ಗೊತ್ತಿದೆ ಎನ್ನುವುದಕ್ಕಿಂತ ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ಚಿತ್ರಕ್ಕೂ ಅದೇ ಸೂತ್ರವನ್ನು ಅನ್ವಯಿಸುತ್ತಾರೆ. ಪ್ರಚಾರದಿಂದ ಹಿಡಿದು ಎಲ್ಲವನ್ನೂ ಬೇರೆ ರೀತಿಯೇ ಮಾಡುತ್ತಾರೆ. ಹಾಗಾಗಿ ಜನರೂ ನಿಧಾನವಾಗಿ ಚಿತ್ರಮಂದಿರಕ್ಕೂ ಬರಬಹುದು.

    Ibbani:ಕಥೆಯು ಹಳೆಯದಾದರೇನಂತೆ, ನಿರೂಪಣೆ ನವ ನವೀನವಂತೆ!

    ಅಂದ ಹಾಗೆ ಎಷ್ಟು ದಿನ ಚಿತ್ರಮಂದಿರದಲ್ಲಿ ಇರುತ್ತದೆ ಎನ್ನುವುದರ ಮೇಲೆ ಎಲ್ಲ ಮ್ಯಾಜಿಕ್‌ ನಿರ್ಧಾರವಾಗಲಿದೆ. ಒಂದು ಒಳ್ಳೆಯ ಚಿತ್ರ ಬಂದಾಗ, ಅದರಲ್ಲೂ ನಗುವ ಚಿತ್ರ ಬಂದಾಗ ಬಾಯಿತುಂಬಾ ನಗಬೇಕು. ಹಾಗೆ ನಗುವಂತೆಯೂ ಸಿನಿಮಾ ಇರಬೇಕು !

    Latest Posts

    spot_imgspot_img

    Don't Miss

    Stay in touch

    To be updated with all the latest news, offers and special announcements.