Sunday, December 22, 2024
spot_img
More

    Latest Posts

    ಮಾಮಿ- ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಗೆ ಸಿನಿಮಾಗಳಿಗೆ ಆಹ್ವಾನ

    ಮಾಮಿ-ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಮುಂದಿನ ಚಿತ್ರೋತ್ಸವಕ್ಕೆ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಂದ ಸಿನಿಮಾಗಳನ್ನು ಆಹ್ವಾನಿಸಿದೆ. ಜೂನ್‌ 30, 2024 ಕೊನೆಯ ದಿನವಾಗಿದ್ದು. ಅಷ್ಟರೊಳಗೆ ವಿವಿಧ ಸ್ಪರ್ಧೆಗಳು ಹಾಗೂ ಸಿನಿಮಾ ಪ್ರದರ್ಶನಕ್ಕೆ ಕಳುಹಿಸಬಹುದಾಗಿದೆ. ಇದೊಂದು ದಕ್ಷಿಣ ಏಷ್ಯಾದಲ್ಲೇ ಪ್ರತಿಷ್ಠಿತ ಚಿತ್ರೋತ್ಸವವಾಗಿದೆ. ಮುಂಬಯಿ ಆಕಾಡೆಮಿ ಆಫ್‌ ಮೂವಿಂಗ್‌ ಇಮೇಜಸ್‌ (MAMI) ಈ ಉತ್ಸವವನ್ನು 1997 ರಿಂದ ಆಯೋಜಿಸುತ್ತಿದೆ.

    ಈ ಬಾರಿ ಚಿತ್ರೋತ್ಸವವು ಅಕ್ಟೋಬರ್‌ 19 ರಿಂದ 24 ರವರೆಗೆ ಮುಂಬಯಿಯಲ್ಲಿ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಿನಿಮಾಗಳನ್ನು ಆಹ್ವಾನಿಸಲಾಗಿದೆ. ಬಹಳ ಮುಖ್ಯವಾಗಿ ಭಾರತವಲ್ಲದೇ ಆಪ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್‌, ಬರ್ಮಾ, ನೇಪಾಲ, ಶ್ರೀಲಂಕಾ ದಕ್ಷಿಣ ಏಷ್ಯಾದ ದೇಶಗಳು ಹೆಚ್ಚಾಗಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ.

    ಮುಖ್ಯ ಸ್ಪರ್ಧೆಯಲ್ಲಿ ಸೌತ್‌ ಏಷ್ಯಾ ಕಥಾ ಮತ್ತು ಕಥೇತರ ಸಿನಿಮಾ ಕೃತಿಗಳಿಗೆ ಅವಕಾಶವಿದೆ. ಉಳಿದಂತೆ ಸೌತ್‌ ಏಷ್ಯಾ ಹಾಗೂ ವಿಶ್ವ ಸಿನಿಮಾ ಎಂಬ ವಿಭಾಗಗಳಿದ್ದು, ಇವು ಸ್ಪರ್ಧಾ ರಹಿತವಾದವು. ಇಲ್ಲಿ ಆಯ್ಕೆಯಾಗುವ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಈ ವಿಭಾಗಗಳಿಗೆ ದಕ್ಷಿಣ ಏಷ್ಯಾದ ಮೂಲ ಹೊಂದಿರುವ ಸಿನಿಮಾ ನಿರ್ದೇಶಕರು ಜಗತ್ತಿನ ಬೇರೆ ದೇಶದಲ್ಲಿದ್ದರೂ ಇಲ್ಲಿಗೆ ತಮ್ಮ ಸಿನಿಮಾಗಳನ್ನು ಕಳುಹಿಸಬಹುದಾಗಿದೆ. ಯಾವುದೇ ವಿಭಾಗಕ್ಕೆ ಕಳುಹಿಸುವ ಸಿನಿಮಾಗಗಳು 2023 ರ ಅಕ್ಟೋಬರ್‌ 1 ರ ನಂತರ ನಿರ್ಮಿಸಿರಬೇಕು.

    NYIFF: ಕನ್ನಡದ ಮಿಥ್ಯದೊಂದಿಗೆ ಭಾರತೀಯ ಚಿತ್ರಗಳ ಸಂಭ್ರಮ ಈ ಸಿನಿಮೋತ್ಸವದಲ್ಲಿ

    ದಕ್ಷಿಣ ಏಷ್ಯಾ ಸಿನಿಮಾಗಳ ಸ್ಪರ್ಧೆ ವಿಭಾಗದಲ್ಲಿ ಗೋಲ್ಟನ್‌ ಗೇಟ್‌ ವೆ, ಸಿಲ್ವರ್‌ ಗೇಟ್‌ ವೇ, ವಿಶೇಷ ತೀರ್ಪುಗಾರರ ಪ್ರಶಸ್ತಿ ಹಾಗೂ ರಶೀದ್‌ ಇರಾಣಿ ಕ್ರಿಟಿಕ್ಸ್‌ ಚಾಯ್ಸ್‌ ಪ್ರಶಸ್ತಿಯನ್ನು ಪ್ರಶಸ್ತಿ ಗೆದ್ದ ಸಿನಿಮಾ ಕತೃ ಗಳಿಗೆ ನೀಡಿ ಅಭಿನಂದಿಸಲಾಗುವುದು. ಗೋಲ್ಟನ್‌ ಗೇಟ್‌ ವೇ ೨೫ ಲಕ್ಷ ರೂ. ನಗದು (ನಿರ್ದೇಶಕರು ಹಾಗೂ ನಿರ್ಮಾಪಕರಿಗೆ) ಮತ್ತು ಪಾರಿತೋಷಕ, ಸಿಲ್ವರ್‌ ಗೇಟ್‌ ವೇ ಪ್ರಶಸ್ತಿಯು ೧೫ ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದೆ. ವಿಶೇಷ ತೀರ್ಪುಗಾರರ ಪ್ರಶಸ್ತಿ ೫ ಲಕ್ಷ ರೂ ಹಾಗೂ ಪಾರಿತೋಷಕವನ್ನು ಒಳಗೊಂಡಿರಲಿದೆ. ರಶೀದ್‌ ಇರಾನಿ ಪ್ರಶಸ್ತಿ ೨ ಲಕ್ಷ ರೂ ಮತ್ತು ಪಾರಿತೋಷಕವನ್ನು ಹೊಂದಿರಲಿದೆ.

    ಇನ್ನುಳಿದ ಸಿನಿಮಾಗಳಲ್ಲೂ ವಿಶ್ವ ಪ್ರೀಮಿಯರ್‌, ಅಂತಾರಾಷ್ಟ್ರೀಯ ಪ್ರೀಮಿಯರ್‌, ಏಷ್ಯಾ ಪ್ರೀಮಿಯರ್‌ ಹಾಗೂ ಭಾರತ ಪ್ರೀಮಿಯರ್‌ ಎಂದೂ ಆಯ್ಕೆ ಮಾಡಲಾಗುತ್ತದೆ. ಮೊದಲ ಬಾರಿ ವಿಶ್ವದಲ್ಲಿ ಎಲ್ಲೂ ಸಾರ್ವಜನಿಕವಾಗಿ ಪ್ರದರ್ಶಿಸದ ಸಿನಿಮಾಗಳನ್ನು ವಿಶ್ವ ಪ್ರೀಮಿಯರ್‌ ಗಳಲ್ಲಿ ಪರಿಗಣಿತವಾದರೆ, ಸಿನಿಮಾ ನಿರ್ಮಾಣವಾದ ದೇಶವನ್ನು ಹೊರತುಪಡಿಸಿ ಜಗತ್ತಿನ ಬೇರೆ ದೇಶಗಳಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾಗುತ್ತಿರುವ ಚಿತ್ರಗಳನ್ನು ಅಂತಾರಾಷ್ಟ್ರೀಯ ಪ್ರೀಮಿಯರ್‌ ನಡಿ, ಏಷ್ಯಾದ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾಗುತ್ತಿರುವ ಚಿತ್ರಗಳನ್ನು ಏಷ್ಯಾ ವಿಭಾಗದಡಿ ಹಾಗೂ ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾಗುತ್ತಿದ್ದರೆ ಭಾರತ ಪ್ರೀಮಿಯರ್‌ ಎಂದು ಪರಿಗಣಿಸಲಾಗುವುದು.

    ಐದು ಲಕ್ಷ ಪ್ರೊಡ್ಯೂರ್ಸ್‌ಗಳ ಮಂಥನ್‌ ಮರು ಬಿಡುಗಡೆ; ನೋಡದೇ ಇರಬೇಡಿ

    ಮಾಮಿ ಉತ್ಸವದ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರಲಿದೆ. ಸಿನಿಮಾ ಕತೃರು ಈ ವಿಭಾಗಗಳಿಗೆ ತಮ್ಮ ಸಿನಿಮಾಗಳನ್ನು ಕಳುಹಿಸಬಹುದಾಗಿದೆ.

    ಮಾಹಿತಿಗೆ ಮಾಮಿ-ಮುಂಬಯಿ ಫೆಸ್ಟಿವಲ್‌ ನ ಪುಟಕ್ಕೆ ಭೇಟಿ ನೀಡಬಹುದು.

    Latest Posts

    spot_imgspot_img

    Don't Miss

    [tdn_block_newsletter_subscribe title_text="Stay in touch" description="VG8gYmUgdXBkYXRlZCB3aXRoIGFsbCB0aGUgbGF0ZXN0IG5ld3MsIG9mZmVycyBhbmQgc3BlY2lhbCBhbm5vdW5jZW1lbnRzLg==" input_placeholder="Email address" tds_newsletter2-image="5" tds_newsletter2-image_bg_color="#c3ecff" tds_newsletter3-input_bar_display="row" tds_newsletter4-image="6" tds_newsletter4-image_bg_color="#fffbcf" tds_newsletter4-btn_bg_color="#f3b700" tds_newsletter4-check_accent="#f3b700" tds_newsletter5-tdicon="tdc-font-fa tdc-font-fa-envelope-o" tds_newsletter5-btn_bg_color="#000000" tds_newsletter5-btn_bg_color_hover="#4db2ec" tds_newsletter5-check_accent="#000000" tds_newsletter6-input_bar_display="row" tds_newsletter6-btn_bg_color="#da1414" tds_newsletter6-check_accent="#da1414" tds_newsletter7-image="7" tds_newsletter7-btn_bg_color="#1c69ad" tds_newsletter7-check_accent="#1c69ad" tds_newsletter7-f_title_font_size="20" tds_newsletter7-f_title_font_line_height="28px" tds_newsletter8-input_bar_display="row" tds_newsletter8-btn_bg_color="#00649e" tds_newsletter8-btn_bg_color_hover="#21709e" tds_newsletter8-check_accent="#00649e" embedded_form_code="JTNDIS0tJTIwQmVnaW4lMjBNYWlsQ2hpbXAlMjBTaWdudXAlMjBGb3JtJTIwLS0lM0UlMEElMEElM0Nmb3JtJTIwYWN0aW9uJTNEJTIyaHR0cHMlM0ElMkYlMkZ0YWdkaXYudXMxNi5saXN0LW1hbmFnZS5jb20lMkZzdWJzY3JpYmUlMkZwb3N0JTNGdSUzRDZlYmQzMWU5NGNjYzVhZGRkYmZhZGFhNTUlMjZhbXAlM0JpZCUzRGVkODQwMzZmNGMlMjIlMjBtZXRob2QlM0QlMjJwb3N0JTIyJTIwaWQlM0QlMjJtYy1lbWJlZGRlZC1zdWJzY3JpYmUtZm9ybSUyMiUyMG5hbWUlM0QlMjJtYy1lbWJlZGRlZC1zdWJzY3JpYmUtZm9ybSUyMiUyMGNsYXNzJTNEJTIydmFsaWRhdGUlMjIlMjB0YXJnZXQlM0QlMjJfYmxhbmslMjIlMjBub3ZhbGlkYXRlJTNFJTNDJTJGZm9ybSUzRSUwQSUwQSUzQyEtLUVuZCUyMG1jX2VtYmVkX3NpZ251cC0tJTNF" descr_space="eyJhbGwiOiIxNSIsImxhbmRzY2FwZSI6IjE1In0=" tds_newsletter="tds_newsletter3" tds_newsletter3-all_border_width="0" btn_text="Sign up" tds_newsletter3-btn_bg_color="#ea1717" tds_newsletter3-btn_bg_color_hover="#000000" tds_newsletter3-btn_border_size="0" tdc_css="eyJhbGwiOnsibWFyZ2luLWJvdHRvbSI6IjAiLCJiYWNrZ3JvdW5kLWNvbG9yIjoiI2E3ZTBlNSIsImRpc3BsYXkiOiIifSwicG9ydHJhaXQiOnsiZGlzcGxheSI6IiJ9LCJwb3J0cmFpdF9tYXhfd2lkdGgiOjEwMTgsInBvcnRyYWl0X21pbl93aWR0aCI6NzY4fQ==" tds_newsletter3-input_border_size="0" tds_newsletter3-f_title_font_family="445" tds_newsletter3-f_title_font_transform="uppercase" tds_newsletter3-f_descr_font_family="394" tds_newsletter3-f_descr_font_size="eyJhbGwiOiIxMiIsInBvcnRyYWl0IjoiMTEifQ==" tds_newsletter3-f_descr_font_line_height="eyJhbGwiOiIxLjYiLCJwb3J0cmFpdCI6IjEuNCJ9" tds_newsletter3-title_color="#000000" tds_newsletter3-description_color="#000000" tds_newsletter3-f_title_font_weight="600" tds_newsletter3-f_title_font_size="eyJhbGwiOiIyMCIsImxhbmRzY2FwZSI6IjE4IiwicG9ydHJhaXQiOiIxNiJ9" tds_newsletter3-f_input_font_family="394" tds_newsletter3-f_btn_font_family="" tds_newsletter3-f_btn_font_transform="uppercase" tds_newsletter3-f_title_font_line_height="1" title_space="eyJsYW5kc2NhcGUiOiIxMCJ9"]