Friday, March 21, 2025
spot_img
More

    Latest Posts

    ಕೇಳತೊಡಗಿದೆ ಮಮ್ಮುಟ್ಟಿ, ರಾಜ್‌ ಬಿ. ಶೆಟ್ಟಿಯವರ ಟರ್ಬೊ ಸದ್ದು !

    ಸದ್ಯ ಸದ್ದು ಮಾಡುತ್ತಿರುವುದು ಎರಡು. ಒಂದು ಕೇರಳದ ಸೂಪರ್‌ ಸ್ಟಾರ್‌ ಮುಮ್ಮುಟ್ಟಿಯ ಟರ್ಬೋ ಮತ್ತು ಕನ್ನಡದ ರಾಜ್‌ ಬಿ ಶೆಟ್ಟಿ. ಗರುಡ ಗಮನ ವೃಷಭ ವಾಹನದಂಥ ಚಿತ್ರದ ಮೂಲಕ ರಾಜ್‌ ಬಿ ಶೆಟ್ಟಿ ತಮ್ಮ ಹೊಸ ಅವತಾರವನ್ನು ಪ್ರದರ್ಶಿಸಿದ್ದರು. ಆ ಚಿತ್ರ ನಿರೀಕ್ಷಿಸಿದಷ್ಟು ಗೆಲುವು ತಂದು ಕೊಡದಿರಬಹುದು. ಆದರೆ ರಾಜ್‌ ಬಿ ಶೆಟ್ಟಿಯ ಹೊಸ ಸಾಧ್ಯತೆ ಹೊರಗಿಟ್ಟಿತ್ತು. ಹಾಗೆಯೇ ಸ್ವಾತಿ ಮುತ್ತಿನ ಮಳೆ ಹನಿಯೇ ಅಂಥ ಚಿತ್ರ ಬಿಡುಗಡೆ ಮಾಡಿ ಮೆಲ್ಲಗೆ ಬದಿಗೆ ಸರಿದು ನಿಂತಿದ್ದ ರಾಜ್‌ ಬಿ ಶೆಟ್ಟಿ ಈಗ ಮತ್ತೆ ಸದ್ದು ಮಾಡಿದ್ದಾರೆ.

    ಮಮ್ಮುಟ್ಟಿಯ ಹೊಸ ಚಿತ್ರ ಟರ್ಬೊ. ಈ ಚಿತ್ರವನ್ನು ಸ್ವತಃ ಮಮ್ಮಟ್ಟಿಯವರೇ (ಮಮ್ಮಟ್ಟಿ ಕಂಪನಿ) ನಿರ್ಮಿಸುತ್ತಿದೆ. ಅದರಲ್ಲಿ ಪ್ರಧಾನ ಪಾತ್ರ ಮಮ್ಮಟ್ಟಿಯವರದ್ದೇ. ಆದರೆ ಅವರೊಂದಿಗೆ ಪ್ರಧಾನವಾಗಿ ನಟಿಸುತ್ತಿರುವುದು ರಾಜ್‌ ಬಿ ಶೆಟ್ಟಿ.

    ದಿ ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌: ಸಂತಸದ ಶೋಧನೆಯ ಹಾದಿ

    ವೈಶಾಖ್‌ ಟರ್ಬೋ ಚಿತ್ರದ ನಿರ್ದೇಶಕರು. ಪುಲಿಮುರುಗಗನ್‌, ಮಧುರೈ ರಾಜದಂಥ ಚಿತ್ರಗಳನ್ನು ನಿರ್ದೇಶಿಸಿದವರು ವೈಶಾಖ್.‌ ಈಗ ಟರ್ಬೊ ಹಿಡಿದು ಕುಳಿತಿದ್ದಾರೆ. ಟರ್ಬೊ ಟ್ರೇಲರ್‌ ಸಹ ಬಿಡುಗಡೆಯಾಗಿದೆ. ಮಿಥುನ್‌ ಮ್ಯಾನ್ಯುವಲ್‌ ಥಾಮಸ್‌ ಬರೆದ ಕಥೆಯ ಚಿತ್ರದಲ್ಲಿ ಮಮ್ಮುಟ್ಟಿ, ರಾಜ್‌ ಬಿ. ಶೆಟ್ಟಿ ಜೊತೆಯಲ್ಲಿ ಅಂಜನಾ ಜಯಪ್ರಕಾಶ್‌, ಸುನಿಲ್‌, ಶಬರೀಶ್‌ ವರ್ಮಾ ಮತ್ತಿತರರು ಇದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್‌ ಬಿ ಶೆಟ್ಟಿಯವರ ಲೈಟರ್‌ ಬುದ್ಧ ಫಿಲಂಸ್‌ ಸಂಸ್ಥೆ ನಿರ್ಮಿಸುತ್ತಿದೆ.

    ಕಾದು ನೋಡಬೇಕು, ಮಮ್ಮುಟ್ಟಿ ಹಾಗೂ ರಾಜ್‌ ಬಿ. ಶೆಟ್ಟಿ ಯಾವ ತರಹ ಮೋಡಿ ಮಾಡಬಲ್ಲರು ಎಂಬುದನ್ನು.

    Latest Posts

    spot_imgspot_img

    Don't Miss