MIFF: 59 ದೇಶಗಳು,61 ಭಾಷೆಗಳು, 314 ಚಿತ್ರ ಕೃತಿಗಳ ಪ್ರದರ್ಶನ

ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ಅನಿಮೇಷನ್‌ ಚಿತ್ರಗಳ ಪ್ರತಿಷ್ಠಿತ 18 ನೇ ಮುಂಬಯಿ ಅಂತಾರಾಷ್ಟ್ರೀಯ ಸಿನಿಮೋತ್ಸವ (ಮಿಫ್‌ )  ಜೂ. 15 ರಿಂದ 21 ರವರೆಗೆ ನಡೆಯಲಿದ್ದು, ಸಿದ್ಧತೆ ಅಂತಿಮ ಹಂತದಲ್ಲಿದೆ. ಈಗಾಗಲೇ ಸಿನಿಮಾಗಳ ಆಯ್ಕೆ, ತೀರ್ಪುಗಾರರ ನೇಮಕ, ರೆಡ್‌ ಕಾರ್ಪೆಟ್‌, ಗಾಲಾ ಸ್ಕ್ರೀನಿಂಗ್ಸ್‌ ಎಲ್ಲವನ್ನೂ ನಿರ್ಧರಿಸಲಾಗಿದೆ. ಈ ಬಾರಿ ಮೊದಲ ಬಾರಿಗೆ ಮುಂಬಯಿಯಲ್ಲದೇ ಏಕಕಾಲದಲ್ಲಿ ದಿಲ್ಲಿ, ಚೆನ್ನೈ, ಕೋಲ್ಕತ್ತಾ ಹಾಗೂ ಪುಣೆಯಲ್ಲೂ ಚಿತ್ರ ಪ್ರದರ್ಶನ ಹಾಗೂ ಉತ್ಸವ ಆಚರಣೆ ಇರಲಿದೆ.

ಏಷ್ಯಾದಲ್ಲೇ ಬಹಳ ಪ್ರತಿಷ್ಠಿತವಾದ ಉತ್ಸವ ಇದಾಗಿದೆ. ಮುಖ್ಯವಾಗಿ ಎರಡು ವರ್ಷಕ್ಕೊಮ್ಮೆ ಮುಂಬಯಿಯಲ್ಲಿ ಎನ್‌ ಎಫ್‌ ಡಿಸಿ ನೇತೃತ್ವದಲ್ಲಿ ನಡೆಯುವ ಉತ್ಸವದಲ್ಲಿ ಹಲವಾರು ದೇಶಗಳ ಸಿನಿಮಾ ಕರ್ತೃರು ಭಾಗವಹಿಸುವರು. ಗೋಲ್ಡನ್‌ ಕಾಂಚ್‌ ಅತ್ಯುತ್ತಮ ಪ್ರಶಸ್ತಿಗೆ ಸಿನಿಮಾ ನಿರ್ದೇಶಕರು ಸೆಣಸುವರು.

ಈ ಬಾರಿಯ ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ಡಾಕ್ಯುಮೆಂಟರಿ ಫಿಲ್ಮ್‌ ಬಜಾರ್‌ ಅನ್ನೂ ಆಯೋಜಿಸಲಾಗುತ್ತಿದೆ. ಈ ಬಜಾರ್‌ ನಲ್ಲಿ ಡಾಕ್ಯುಮೆಂಟರಿ ಫಿಲ್ಮ್‌ ಮೇಕರ್‌ ನವರು ಉದ್ಯಮದವರೊಂದಿಗೆ, ನಿರ್ಮಾಪಕರೊಂದಿಗೆ, ಸಿನಿಮಾ ನಿರ್ಮಾಣ ಕಂಪೆನಿಗಳೊಂದಿಗೆ ತಮ್ಮ ಯೋಜನೆಗಳ ಕುರಿತು ವಿವರಿಸಿ ಸಹಕಾರ ಪಡೆಯಬಹುದು.

ಈ ಬಾರಿಯ ಉತ್ಸವದಲ್ಲಿ ಪಾಲ್ಗೊಳ್ಳಲು 59 ದೇಶಗಳ 61 ಭಾಷೆಗಳ 1018 ಪ್ರವೇಶಗಳು ಬಂದಿದ್ದವು. ಈ ಪೈಕಿ 314 ಪ್ರದರ್ಶನಕ್ಕೆ ಅಂತಿಮಗೊಳಿಸಲಾಗಿದೆ. ಮುಂಬಯಿಯ ಫಿಲ್ಮ್‌ ಡಿವಿಷನ್‌ ನ ಚಿತ್ರಮಂದಿರಗಳಲ್ಲದೇ, ದಿಲ್ಲಿಯ ಸಿರಿಫೋರ್ಟ್‌ ಸಭಾಂಗಣ ಹಾಗೂ ಮಹಾದೇವ ರೋಡ್‌ ಸಭಾಂಗಣ, ಕೋಲ್ಕತ್ತದಲ್ಲಿ ಸತ್ಯಜಿತ್‌ ರೇ  ಫಿಲ್ಮ್‌ ಅಂಡ್‌ ಇನ್‌ ಸ್ಟಿಟ್ಯೂಟ್‌, ಚೆನ್ನೈನಲ್ಲಿ ಎನ್‌ ಎಫ್‌ ಡಿಸಿ ಯ ಠಾಗೋರ್‌ ಫಿಲ್ಮ್‌ ಸೆಂಟರ್‌ ಹಾಗೂ ಪುಣೆಯ ಎನ್‌ ಎಫ್‌ ಎ ಐ ಸಭಾಂಗಣದಲ್ಲಿ ಸಿನಿಮಾಗಳ ಪ್ರದರ್ಶನಗೊಳ್ಳುವವು.

MAMI- ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಗೆ ಸಿನಿಮಾಗಳಿಗೆ ಆಹ್ವಾನ

1990 ರಿಂದ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ.  ಏಷ್ಯಾದಲ್ಲೇ ಪ್ರಮುಖ ಸಿನಿಮೋತ್ಸವವಾಗಿ ರೂಪುಗೊಂಡಿದೆ. ಈ ಬಾರಿಯ 59 ದೇಶಗಳ 314 ಚಿತ್ರಗಳಲ್ಲಿ 8 ವಿಶ್ವ ಪ್ರೀಮಿಯರ್‌ ಗಳು, 5 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು, 18 ಏಷ್ಯಾ ಪ್ರೀಮಿಯರ್‌ ಗಳು ಹಾಗೂ 77 ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿ ಬಾರಿಯೂ ಒಂದು ಥೀಮ್‌ ನ ಮೇಲೆ ಚಿತ್ರೋತ್ಸವವನ್ನು ಹೆಣೆಯಲಾಗುತ್ತದೆ. ಅದರಂತೆಯೇ ಈ ಬಾರಿ ಭಾರತದ ಅಮೃತ್‌ ಕಾಲ್.‌ ಭಾರತದ ಸಮಗ್ರ ಅಭಿವೃದ್ಧಿಯ ಕಥನವನ್ನು ಹೇಳುವಂಥದ್ದು ಅಮೃತ್‌ ಕಾಲ್.‌ ಇದಲ್ಲದೇ ಕಂಟ್ರಿ ಫೋಕಸ್‌ ನಡಿ ಜಪಾನ್‌, ರಷ್ಯಾ, ಬೆಲಾರಸ್‌, ಇರಾನ್‌, ಇಟಲಿ, ವಿಯೆಟ್ನಾಂನ ದೇಶಗಳ ಸಿನಿಮಾಗಳು, ಆಸ್ಕರ್‌ ಹಾಗೂ ಬರ್ಲಿನ್‌ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡ ಅತ್ಯುತ್ತಮ ಕಿರುಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಎನ್‌ ಎಫ್‌ ಎ ಐ ನ ರೆಸ್ಟೋರ್ಡ್‌ ಕ್ಲಾಸಿಕ್ಸ್‌ ನಡಿ ಆಯ್ಕೆಯಾದ ಚಿತ್ರಗಳನ್ನೂ ವೀಕ್ಷಿಸಬಹುದಾಗಿದೆ. ಫ್ರಾನ್ಸ್‌, ಸ್ಲೋವೆನಿಯಾ, ಅರ್ಜೆಂಟೈನಾ, ಗ್ರೀಕ್‌ ಸೇರಿದಂತೆ ವಿವಿಧ ದೇಶಗಳ  47 ಅನಿಮೇಷನ್‌ ಸಿನಿಮಾಗಳು, ಎಫ್‌ ಟಿಐಐ, ಎಸ್‌ ಆರ್‌ ಎಫ್ ಟಿಐ, ವಿಶ್ಲಿಂಗ್‌ ವೂಡ್ಸ್‌, ಐಎಫ್‌ ಎಫ್‌ ಐ-ಸಿಎಂಒಟಿ ಸೇರಿದಂರೆ ವಿವಿಧ ಸಿನಿಮಾ ಶಾಲೆಗಳ 45 ಸಿನಿಮಾ ವಿದ್ಯಾರ್ಥಿಗಳ ಪ್ರಯೋಗಗಳು ವೀಕ್ಷಣೆಗೆ ಲಭ್ಯವಿದೆ.

Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಲಂಡನ್‌ ನ ಚಾರ್ಲಿ ಹ್ಯಾಮಿಲ್ಟನ್‌ ನಿರ್ದೇಶನದ ಬಿಲ್ಲಿ ಅಂಡ್‌ ಮೊಲಿ ಪ್ರದರ್ಶಿತವಾಗಲಿದೆ. ಸಮಾರೋಪ ಸಂದರ್ಭದಲ್ಲಿ ಕಾನ್ಸ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿದಾನಂದ ನಾಯ್ಕ್‌ ಅವರ ಸನ್‌ ಫ್ಲವರ್ಸ್‌ ವರ್‌ ದಿ ಫರ್ಸ್ಟ್‌ ಒನ್‌ ಟು ನೋ ಚಿತ್ರವು ಪ್ರದರ್ಶಿತವಾಗಲಿದೆ.

ಅತ್ಯುತ್ತಮ ಸಾಕ್ಷ್ಯಚಿತ್ರಕ್ಕೆ ಗೋಲ್ಡನ್‌ ಕಾಂಚ್‌, ಅತ್ಯುತ್ತಮ ಕಿರುಚಿತ್ರ, ಅನಿಮೇಷನ್‌ ಚಿತ್ರಕ್ಕೆ ಸಿಲ್ವರ್‌ ಕಾಂಚ್‌ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಶಸ್ತಿಗಳಿದ್ದು, ಸುಮಾರು 42 ಲಕ್ಷ ರೂ. ಮೊತ್ತದ ಬಹುಮಾನಗಳನ್ನು ಪಾರಿತೋಷಕದೊಂದಿಗೆ ನೀಡಿ ಅಭಿನಂದಿಸುವುದು ಮಿಫ್‌ ನ ಸಂಪ್ರದಾಯವಾಗಿದೆ. ಉದ್ಘಾಟನಾ ಹಾಗು ಸಮಾರೋಪ ಸಮಾರಂಭಗಳು ನಾರಿಮನ್‌ ಪಾಯಿಂಟ್‌ ನ ಎನ್‌ ಸಿ ಪಿ ಎ ಯಲ್ಲಿ ನಡೆಯಲಿದೆ. ಚಿತ್ರೋತ್ಸವ ಪೆದೋರ್‌ ರಸ್ತೆಯ ಫಿಲ್ಮ್‌ ಡಿವಿಜನ್‌ ಆವರಣದಲ್ಲಿ ನಡೆಯಲಿದೆ.

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಐದು ದಿನಗಳಲ್ಲಿ 20 ಕಾರ್ಯಕ್ರಮಗಳು ನಡೆಯಲಿದ್ದು, ಇವುಗಳಲ್ಲಿ ಮಾಸ್ಟರ್‌ ಕ್ಲಾಸ್‌, ಸಂವಾದ, ಚರ್ಚೆಗಳು ಇವೆ. ದೇಶ ವಿದೇಶಗಳ ಸಿನಿಮಾ ಪರಿಣಿತರು ಇದರಲ್ಲಿ ಪಾಲ್ಗೊಳ್ಳುವರು.

ನೋಂದಣಿಗೆ ಈ ವೆಬ್‌ ಸೈಟ್‌ ಗೆ ಭೇಟಿ ಕೊಡಿ.

LEAVE A REPLY

Please enter your comment!
Please enter your name here

spot_img

More like this

Karlovy Vary IFF : ಜೂನ್‌ 28-ಜುಲೈ 6 ರವರೆಗೆ ಮತ್ತೊಂದು...

ಮತ್ತೊಂದು ಪ್ರಮುಖ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಜೂನ್‌ 28 ರಿಂದ ಜುಲೈ 6 ರವರೆಗೆ 58 ನೇ ಕರ್ಲೊವಿ ವೆರಿ ಅಂತಾರಾಷ್ಟ್ರೀಯ...

ಮಾಮಿ- ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಗೆ ಸಿನಿಮಾಗಳಿಗೆ ಆಹ್ವಾನ

ಮಾಮಿ-ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ ಮುಂದಿನ ಚಿತ್ರೋತ್ಸವಕ್ಕೆ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಂದ ಸಿನಿಮಾಗಳನ್ನು ಆಹ್ವಾನಿಸಿದೆ. ಜೂನ್‌ 30, 2024 ಕೊನೆಯ ದಿನವಾಗಿದ್ದು. ಅಷ್ಟರೊಳಗೆ ವಿವಿಧ...

SFF : ‌ಸಿಡ್ನಿಯ 71 ನೇ ಚಿತ್ರೋತ್ಸವದಲ್ಲಿ197 ಸಿನಿಮಾಗಳು

ಸಿಡ್ನಿಯ 71 ನೇ ಸಿನಿಮೋತ್ಸವ (ಎಸ್‌ ಐ ಎಫ್‌ ಎಫ್)ಕ್ಕೆ ಆಸ್ಟ್ರೇಲಿಯದ ರಾಜಧಾನಿ ಸಿಡ್ನಿ ಸಜ್ಜಾಗಿದೆ. ಈ ಬಾರಿ ಉತ್ಸವವು ಜೂನ್‌ 5...