Movie Jigar: ಮತ್ತೊಂದು ಹೊಸ ಚಿತ್ರ ಜಿಗರ್‌ ಜುಲೈ 5 ಕ್ಕೆ ತೆರೆಗೆ

ಮತ್ತೊಂದು ಹೊಸ ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಅದರ ಹೆಸರು ಜಿಗರ್.‌ ಪ್ರವೀಣ್‌ ತೇಜ್‌ ಇದರ  ನಾಯಕ ನಟ. ನಾಯಕಿ ವಿಜಯಶ್ರೀ. ಕಥೆಯ ಎಳೆಯನ್ನು ಕಂಡರೆ ಇದು ಕರಾವಳಿಯ ಕಥೆ. ಅದರಲ್ಲೂ ಮೀನುಗಾರರ ಕಥೆ. 

Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಒಂದು ವೃತ್ತಿ ಸಮುದಾಯ, ಅದರೊಳಗೆ ಒಂದಿಷ್ಟು ಸಂಘಟನೆ-ಸಂಸ್ಥೆಗಳು, ಅದರಲ್ಲಿನ ಒಳ ರಾಜಕೀಯ, ಅವುಗಳ ಕಾಣದ ಮುಖ-ಹೀಗೆ ಇಂಥ ಬಿಂದುಗಳನ್ನು ಸೇರಿಸಿ ಹೆಣೆದಂತಿದೆ ಕಥೆ. ಇದಕ್ಕೆ ಪೂರಕವಾಗಿ ಪ್ರೀತಿ, ಪ್ರಣಯ, ಹಾಸ್ಯ ಎಲ್ಲವೂ ಸೇರಿರುತ್ತದಂತೆ.

ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸೂರಿ ಕುಂದರ್.‌ ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿರುವ ಸೂರಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪೂಜಾ ವಸಂತಕುಮಾರ್ ನಿರ್ಮಿಸಿದ್ದಾರೆ.

New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌ ಹೆಗಡೆ ತಯಾರಿ

ಇತ್ತೀಚೆಗೆ ಟ್ರೇಲರ್‌ ಬಿಡುಗಡೆ ಮಾಡಿದ ಸಂದರ್ಭದಲ್ಲೂ ಇಂಥ ಮಾಹಿತಿ ಹಂಚಿಕೊಳ್ಳಲಾಯಿತು. ಅದರ ಪ್ರಕಾರ, ಕಥಾನಾಯಕ ಮೀನುಗಾರಿಕೆಯ ಟೆಂಡರ್‌ ನಲ್ಲಿ ಭಾಗವಹಿಸುತ್ತಾನೆ. ಅದು ಅವನನ್ನು ಭೂಗತಲೋಕದವರೆಗೆ ಕರೆದೊಯ್ಯುತ್ತದೆ. ಅಲ್ಲಿನ ಮೂರ್ನಾಲ್ಕು ಸಂಘಗಳು, ಅದರ ಸಂಘರ್ಷಗಳು ಕಥಾನಾಯಕನಿಗೆ ಬೇರೆ ಕಥೆಯನ್ನು ಪರಿಚಯಿಸುತ್ತವೆ. ಇದು ಕಥೆಯ ಸ್ಥೂಲ ರೂಪ.

ಕಥೆಗೆ ತಕ್ಕಂತೆ ಕಡಲು, ಮೀನು ಇತ್ಯಾದಿಯೇ ಹೂರಣವಾದ ಕಾರಣ ಚಿತ್ರೀಕರಣವೂ ಮಲ್ಪೆ, ಉಡುಪಿ, ಕುಂದಾಪುರ ಸುತ್ತಮುತ್ತ ಕೈಗೊಳ್ಳಲಾಗಿತ್ತು.

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಸಂಗೀತ ನಿರ್ದೇಶನ ರಿತ್ವಿಕ್‌ ಮುರಳೀಧರ್‌ ರದ್ದು. ಗಣೇಶ್‌ ಗೀತೆ ಬರೆದಿದ್ದರೆ, ಶಿವಸೇನರದ್ದು ಛಾಯಾಗ್ರಹಣ.

ಚಿತ್ರದ ಟ್ರೇಲರ್‌ ಇಲ್ಲಿ ನೋಡಿ.

LEAVE A REPLY

Please enter your comment!
Please enter your name here

spot_img

More like this

Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು...

ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್‌ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ...

New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌...

ನಾ ನಿನ್ನ ಬಿಡಲಾರೆ ಸಿನಿಮಾ ಗೊತ್ತಿರಲೇಬೇಕು. ಹೊಸ ತಲೆಮಾರಿನವರೂ ಹಳೆ ತಲೆಮಾರಿನವರಿಂದ ಕೇಳಿ ತಿಳಿದುಕೊಂಡು ಈ ಸಿನಿಮಾ ನೋಡಿರುತ್ತಾರೆ. ಹೊಸ ತಲೆಮಾರಿನವರೆಂದರೆ ಈ...

Kannappa Movie : ಕಣ್ಣಪ್ಪ…ಕಣ್ಣಪ್ಪ…ಬೇಗ ಬಾರಪ್ಪ

ಕನ್ನಡದಲ್ಲಿ ಬೇಡರ ಕಣ್ಣಪ್ಪ ಇರುವಾಗ ಮತ್ತೊಂದು ಕಣ್ಣಪ್ಪ ಏನಪ್ಪ ಎಂದು ಪ್ರಶ್ನೆ ಕೇಳುವವರಿದ್ದಾರೆ. ಡಾ. ರಾಜಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ನಮ್ಮೊಳಗೆ ಉಳಿದ...